ಶಾಲೆಗೆ ತೆರಳುತ್ತಿದ್ದ ಸಂದರ್ಭ 7 ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು..!
ಚಿಕ್ಕಮಗಳೂರು: ಶಾಲೆಗೆ (School) ತೆರಳುತ್ತಿದ್ದ ವೇಳೆ ಹೃದಯಾಘಾತವಾಗಿ (Heart Attack) 7ನೇ ತರಗತಿ ವಿದ್ಯಾರ್ಥಿನಿ (Student) ಸಾವನ್ನಪ್ಪಿದ ಘಟನೆ ಮೂಡಿಗೆರೆ (Mudigere) ತಾಲೂಕಿನ ಜೋಗಣ್ಣನಕೆರೆ ಗ್ರಾಮದಲ್ಲಿ ನಡೆದಿದೆ.
ಸೃಷ್ಟಿ (13) ಮೃತ ವಿದ್ಯಾರ್ಥಿನಿ. ಈಕೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಸಂದರ್ಭ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ವೇಳೆ ಬಾಲಕಿ ಸೃಷ್ಟಿ ಸಾವನ್ನಪ್ಪಿದ್ದಾಳೆ.
ಮೂಡಿಗೆರೆ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದು, ಮಗಳ ಸಾವಿನಿಂದ ಕುಟುಂಬಸ್ಥರು ಆಘಾತಗೊಂಡಿದ್ದಾರೆ.
ಕರ್ತವ್ಯ ಲೋಪ ಆರೋಪ – ಮೂವರು ಪಿಎಸ್‌ಐ ಸೇರಿ ಐವರು ಪೊಲೀಸರ ಅಮಾನತು
ತುಮಕೂರು: ಕರ್ತವ್ಯ ಲೋಪ (Dereliction Of Duty) ಎಸಗಿದ ಹಿನ್ನೆಲೆ ಮೂವರು ಪಿಎಸ್‌ಐ (PSI) ಸೇರಿ ಒಟ್ಟು ಐವರು ಪೊಲೀಸರನ್ನು (Police) ತುಮಕೂರು (Tumakuru) ಎಸ್ಪಿ ಕೆವಿ ಅಶೋಕ್ ಅಮಾನತುಗೊಳಿಸಿ (Suspension) ಆದೇಶ ಹೊರಡಿಸಿದ್ದಾರೆ.
ತುರುವೇಕೆರೆ (Turuvekere) ಠಾಣಾ ಪಿಎಸ್‌ಐಗಳಾದ ಗಣೇಶ್ ಹಾಗೂ ರಾಮಚಂದ್ರ ಮತ್ತು ಹೆಡ್‌ಕಾನ್ಸ್ಟೇಬಲ್ ರಘುನಂದನ್ ಅವರನ್ನು ಅಮಾನತು ಮಾಡಲಾಗಿದೆ. ಮಹಿಳೆಯೊಬ್ಬರು ನಾಪತ್ತೆಯಾದ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳದೇ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆ ಅಮಾನತುಗೊಳಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬಡವನಹಳ್ಳಿ ಠಾಣಾ ಪಿಎಸ್‌ಐ ನಾಗರಾಜು ಹಾಗೂ ಎಎಸ್‌ಐ ಸುರೇಶ್ ಅವರನ್ನು ಅಮಾನತು ಮಾಡಲಾಗಿದೆ. ದಲಿತರ ಮೇಲೆ ಸವರ್ಣಿಯರು ಹಲ್ಲೆ ಮಾಡಿದ್ದ ದೂರನ್ನು ದಾಖಲಿಸದೇ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಎಸ್ಪಿ ಅಶೋಕ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.