ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಇಂದು ದೇಶದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ..!

Twitter
Facebook
LinkedIn
WhatsApp
ಇಂದು ದೇಶದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ..!

ನವದೆಹಲಿ,ಜ 26 :ಇಂದು ದೇಶದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ,ಸಡಗರ ಮನೆ ಮಾಡಿದೆ.ದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್​​ ಗೆ ಕ್ಷಣಗಣನೆ ಶುರುವಾಗಿದೆ. ಕಳೆದ ಬಾರಿಯಂತೆ ಇಂದು ಕೂಡ ಗಣರಾಜ್ಯೋತ್ಸವವು ಹತ್ತು – ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ.

ಇತ್ತ ರಾಷ್ಟ್ರರಾಜಧಾನಿ ದೆಹಲಿಯಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಗಣತಂತ್ರದ ಪರೇಡ್ ಚಲನದ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿ ಮಹಿಳಾ ಪೊಲೀಸರು ಭಾಗಿಯಾಗಲಿದ್ದಾರೆ. ಈ ತುಕಡಿಯಲ್ಲಿ ಸಂಪೂರ್ಣ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲಿದ್ದಾರೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಥೀಮ್ ಅಡಿ 194 ಮಹಿಳಾ ಪೊಲೀಸರು ಪರೇಡ್ ಮಾಡಲಿದ್ದು, ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನ ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

75ನೇ ಗಣರಾಜ್ಯೋತ್ಸವವೂ ರಾಷ್ಟ್ರಪತಿ ಹಾಗೂ ಅವರ ಅಂಗರಕ್ಷಕರಿಗೆ ಮಹತ್ವದ ದಿನವಾಗಿದೆ. 250 ವರ್ಷಗಳ ಸೇವೆ ಪೂರೈಸಿರುವ ‘ಅಂಗರಕ್ಷಕರು’ 1773ರಲ್ಲಿ ಆರಂಭವಾದ ರಾಷ್ಟ್ರಪತಿ ಅಂಗರಕ್ಷಕ ದಳ ಇದೇ ಮೊದಲ ಬಾರಿ ರಾಷ್ಟ್ರಧ್ವಜ ಹಿಡಿದು ಸಾಗಲಿದ್ದಾರೆ. ರಾಷ್ಟ್ರಪತಿ ಭವನದಿಂದ ರಾಷ್ಟ್ರಪತಿಯವರನ್ನು ಅಂಗರಕ್ಷಕರು ಕರೆತರಲಿರಲಿದ್ದಾರೆ. ದೇಶದಲ್ಲೇ ಅತ್ಯುತ್ತಮ ಅಶ್ವಾರೋಹಿಗಳು ಈ ಅಂಗರಕ್ಷಕರಾಗಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪ್ರಮುಖ ದಿನವಾಗಿದೆ. 40 ವರ್ಷದ ಬಳಿಕ ರಾಷ್ಟ್ರಪತಿಗಳು ಸಮಾರಂಭಕ್ಕೆ ಸಾರೋಟಿನಲ್ಲಿ ಬರಲಿದ್ದಾರೆ. ಅವರು ಕರ್ತವ್ಯ ಪಥದಲ್ಲಿ ಸಾರೋಟಿನಲ್ಲಿ ಸಾಗಲಿದ್ದಾರೆ. ಮಾಮೂಲಿಯಾಗಿ ಗಣರಾಜ್ಯೋತ್ಸವಕ್ಕೆ ವಿಶೇಷ ಕಾರಿನಲ್ಲಿ ರಾಷ್ಟ್ರಪತಿ ಆಗಮಿಸ್ತಿದ್ದರು. ಈ ಬಾರಿಯ ಗಣರಾಜ್ಯೋತ್ಸವ ಪರೇಡ್​​ ನಲ್ಲಿ ಫ್ರೆಂಚ್ ವಿದೇಶಿ ಪಡೆ ಭಾಗಿಯಾಗಲಿರುವುದು ಮತ್ತೊಂದು ವಿಶೇಷವಾಗಿದೆ.

ಕ್ಯಾಪ್ಟನ್ ಖೌರ್ಡಾ ನೇತೃತ್ವದಲ್ಲಿ ಫ್ರೆಂಚ್ ಸೇನಾ ಬ್ಯಾಂಡ್ ಭಾಗಿಯಾಗಲಿದೆ. 30 ಮಂದಿ ಸಂಗೀತಗಾರರಿಂದ ರೆಜಿಮೆಂಟ್ ಗೀತೆ ಗಾಯನ ನಡೆಯಲಿದೆ. ಫ್ರಾನ್ಸ್ ಸೇನೆಯ ‘2ನೇ ಇನ್ಫ್ಯಾಂಟ್ರಿ’ ತುಕಡಿ ಪಥಸಂಚಲನ ನಡೆಸಲಿದ್ದು, ಕ್ಯಾಪ್ಟನ್ ನೋಯೆಲ್ ನೇತೃತ್ವದಲ್ಲಿ 90 ಮಂದಿ ಯೋಧರು ಭಾಗಿಯಾಗಲಿದ್ದಾರೆ. ಕರ್ನಾಟಕ ಸೇರಿ ವಿವಿಧೆಡೆಯ ಜಾನಪದ ಕಲಾವಿದರು ಪರೇಡ್ನಲ್ಲಿ ಪ್ರದರ್ಶನ ನೀಡಲಿದ್ದಾರೆ.

ಇಂದು 75ನೇ ಗಣರಾಜ್ಯೋತ್ಸವ: ಮಿಲಿಟರಿ ಬ್ಯಾಂಡ್ ಬದಲು ಮೊಳಗಲಿದೆ ಶಂಖ, ನಾದಸ್ವರ

ನವದೆಹಲಿ: 75ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶ ಸಜ್ಜಾಗಿದ್ದು, ಪ್ರಧಾನ ಕಾರ್ಯಕ್ರಮ ನವದೆಹಲಿಯಲ್ಲಿ ಇಂದು ಬೆಳಗ್ಗೆ ನಡೆಯಲಿದೆ. ದೇಶದ ಸೇನಾ ಸಾಮರ್ಥ್ಯ, ಶ್ರೀಮಂತ ಸಂಸ್ಕೃತಿಯು ದೆಹಲಿಯ ಕರ್ತವ್ಯ ಪಥದಲ್ಲಿ ಒಂದೂವರೆ ಗಂಟೆ ಅನಾವರಣಗೊಳ್ಳಲಿದೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ಗಣರಾಜ್ಯೋತ್ಸವದ ನೇತೃತ್ವ ವಹಿಸಲಿದ್ದು, ಸಮಾರಂಭದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಪಾಲ್ಗೊಳ್ಳಲಿದ್ದಾರೆ.

ಹಲವು ಪ್ರಥಮ: ಈ ಬಾರಿಯ ಗಣರಾ ಜ್ಯೋತ್ಸವ ಪರೇಡ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಮೂರೂ ಸೇನಾ ಪಡೆಗಳ ಸಂಪೂರ್ಣ ಮಹಿಳಾ ಬ್ಯಾಚ್ ಪಥಸಂಚಲನದಲ್ಲಿ ಭಾಗವಹಿಸಲಿದೆ. ಸೇನಾ ವಾದ್ಯವೃಂದದ ಬದಲಿಗೆ 100 ಮಹಿಳಾ ಕಲಾವಿದರು ಪ್ರಥಮ ಬಾರಿಗೆ ಭಾರತೀಯ ಸಂಗೀತ ಸಾಧನಗಳಾದ ಶಂಖ, ನಾದಸ್ವರ ಹಾಗೂ ಡೊಳ್ಳು ಬಾರಿಸಲಿದ್ದಾರೆ.

ಬೆಳಗ್ಗೆ 10.30ಕ್ಕೆ ಶುರು: ಬೆಳಗ್ಗೆ 10.30ಕ್ಕೆ ಸಮಾರಂಭ ಆರಂಭವಾಗಲಿದ್ದು, ಒಂದೂವರೆ ತಾಸು ನಡೆಯಲಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸೇನಾ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಇದಾದ ಬಳಿಕ ರಾಷ್ಟ್ರ ಪತಿ ಮುರ್ಮು ಹಾಗೂ ಮ್ಯಾಕ್ರೋನ್ ಅವರು ಸಾಂಪ್ರದಾಯಿಕ ಕುದುರೆಗಾಡಿಯಲ್ಲಿ ಬರಲಿದ್ದಾರೆ. 40 ವರ್ಷಗಳ ಬಳಿಕ ಈ ಸಂಪ್ರದಾಯವನ್ನು  ಪುನಾರಂಭಿಸಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist