ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಹೊರಬಿದ್ದ 7 ಆಟಗಾರರು..!

Twitter
Facebook
LinkedIn
WhatsApp
ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಹೊರಬಿದ್ದ 7 ಆಟಗಾರರು..!

ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಆಟಗಾರರೊಂದಿಗಿನ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 30 ಆಟಗಾರರೊಂದಿಗೆ ಬಿಸಿಸಿಐ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ 11 ಹೊಸ ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ. ಇದೇ ವೇಳೆ 7 ಆಟಗಾರರು ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಅಂದರೆ 2022-23 ರ ಬಿಸಿಸಿಐ ಗುತ್ತಿಗೆ ಒಪ್ಪಂದ ಪಡೆದಿದ್ದ 7 ಆಟಗಾರರನ್ನು ಈ ಬಾರಿ ಕೈ ಬಿಡಲಾಗಿದೆ. ಆ ಆಟಗಾರರು ಯಾರೆಲ್ಲಾ, ಕಳೆದ ಬಾರಿ ವಾರ್ಷಿಕವಾಗಿ ಅವರು ಪಡೆದಿರುವ ಮೊತ್ತವೆಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ,

ಚೇತೇಶ್ವರ ಪೂಜಾರ (Cheteshwar Pujara): ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೇತೇಶ್ವರ ಪೂಜಾರ ಅವರನ್ನು ಈ ಬಾರಿ ಗುತ್ತಿಗೆ ಒಪ್ಪಂದಕ್ಕೆ ಪರಿಗಣಿಸಲಾಗಿಲ್ಲ. ಇದೇ ಪೂಜಾರ ಕಳೆದ ವರ್ಷ ಬಿ ಗ್ರೇಡ್​ನಲ್ಲಿ ಕಾಣಿಸಿಕೊಂಡಿದ್ದರು. ಆ ಮೂಲಕ ವಾರ್ಷಿಕ 3 ಕೋಟಿ ರೂ. ಸಂಭಾವನೆ ಪಡೆದಿದ್ದರು.

ಶ್ರೇಯಸ್ ಅಯ್ಯರ್ (Shreyas Iyer): 2022-23 ರ ಗುತ್ತಿಗೆ ಒಪ್ಪಂದದಲ್ಲಿ ಬಿ ಗ್ರೇಡ್​ನಲ್ಲಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ 3 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದರೆ ಈ ಬಾರಿ ಅವರನ್ನು ಈ ಬಾರಿ ಕೈ ಬಿಡಲಾಗಿದೆ.

ಉಮೇಶ್ ಯಾದವ್ (Umesh Yadav): ಕಳೆದ ವರ್ಷ ಉಮೇಶ್ ಯಾದವ್ ಅವರು ಸಿ ಗ್ರೇಡ್ ಒಪ್ಪಂದ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅದರಂತೆ ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆದಿದ್ದ ಹಿರಿಯ ವೇಗಿಯನ್ನು ಈ ಬಾರಿ ಬಿಸಿಸಿಐ ಕೈ ಬಿಟ್ಟಿದೆ.

ಇಶಾನ್ ಕಿಶನ್ (Ishan Kishan): ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಇಶಾನ್ ಕಿಶನ್ ಕಳೆದ ವರ್ಷ 1 ಕೋಟಿ ಸಂಭಾವನೆಯ ಗ್ರೇಡ್ ಸಿ ಒಪ್ಪಂದ ಪಟ್ಟಿಯಲ್ಲಿದ್ದರು. ಆದರೆ ಈ ಬಾರಿ ಅವರನ್ನು ಕೇಂದ್ರೀಯ ಗುತ್ತಿಗೆ ಒಪ್ಪಂದಕ್ಕೆ ಪರಿಗಣಿಸಲಾಗಿಲ್ಲ.

ಶಿಖರ್ ಧವನ್ (Shikhar Dhawan): ಕಳೆದ ವರ್ಷ ಗ್ರೇಡ್ ಸಿ (1 ಕೋಟಿ ರೂ.) ಒಪ್ಪಂದ ಪಟ್ಟಿಯಲ್ಲಿದ್ದ ಶಿಖರ್ ಧವನ್ ಅವರನ್ನೂ ಸಹ ಈ ಬಾರಿ ಕೈ ಬಿಡಲಾಗಿದೆ. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಧವನ್ ಅವರ ಯುಗಾಂತ್ಯವಾಗಿದೆ ಎಂದೇ ಹೇಳಬಹುದು.

ದೀಪಕ್ ಹೂಡಾ (Deepak Hooda): 2022-23 ರ ಒಪ್ಪಂದ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಲ್​ರೌಂಡರ್ ದೀಪಕ್ ಹೂಡಾ ಗ್ರೇಡ್-ಸಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅದರಂತೆ 1 ಕೋಟಿ ರೂ. ಸಂಭಾವನೆ ಪಡೆದಿದ್ದ ಹೂಡಾ ಅವರನ್ನು ಈ ಬಾರಿ ಕೈ ಬಿಡಲಾಗಿದೆ.

ಯುಜ್ವೇಂದ್ರ ಚಹಲ್ (Yuzvendra Chahal): ಕಳೆದ ವರ್ಷ 1 ಕೋಟಿ ರೂ. ಸಂಭಾವನೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಈ ಬಾರಿ ಗ್ರೇಡ್ ಸಿ ಒಪ್ಪಂದಕ್ಕೂ ಪರಿಗಣಿಸಲಾಗಿಲ್ಲ ಎಂಬುದೇ ಅಚ್ಚರಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ