ಮಂಗಳವಾರ, ಏಪ್ರಿಲ್ 30, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

Twitter
Facebook
LinkedIn
WhatsApp
7 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾದ The Walt Disney

ವಾಷಿಂಗ್ಟನ್: ಅಮೆರಿಕದ (US) ದಿ ವಾಲ್ಟ್ ಡಿಸ್ನಿ ಕಂಪನಿ (The Walt Disney Company), ವೆಚ್ಚದಲ್ಲಿ ಉಳಿತಾಯ ಮಾಡುವ ಸಲುವಾಗಿ ಏಕಾಏಕಿ 7 ಸಾವಿರ ಉದ್ಯೋಗಿಗಳನ್ನ ವಜಾಗೊಳಿಸಲು (Layoff) ಮುಂದಾಗಿದೆ. ಕಂಪನಿಗೆ ತಗಲುವ ವೆಚ್ಚ ಕಡಿಮೆ ಮಾಡಲು ಈ ನಿರ್ಧಾರ ಕೈಗೊಂಡಿದೆ.

ವಿಶ್ವದ ದೈತ್ಯ ಟೆಕ್ ಕಂಪನಿಗಳಲ್ಲಿ (Tech Company) ಸರಣಿಯಾಗಿ ಉದ್ಯೋಗಿಗಳನ್ನು (V) ಕೆಲಸದಿಂದ ತೆಗೆಯುವ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಡಿಸ್ನಿ ಕೂಡಾ ಈ ನಿರ್ಧಾರ ಕೈಗೊಂಡಿದೆ. 2022ರ ನವೆಂಬರ್‌ನಲ್ಲಿ ಮಾಜಿ ಸಿಇಒ ಬಾಬ್ ಚಾಪೆಕ್ ಅವರಿಂದ ರಾಬರ್ಟ್ ಇಗರ್ (Robert Iger) ಅವರು ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಕಂಪನಿಯ ಆರ್ಥಿಕ ವೆಚ್ಚ ಕಡಿತಗೊಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಉದ್ಯೋಗಿಗಳನ್ನ ಕಡಿತಗೊಳಿಸಲು ಮುಂದಾಗಿದ್ದಾರೆ.

Disney Plus: price and everything you need to know | What to Watch

ಡಿಸ್ನಿಯು ತನ್ನ ಪ್ರತಿಸ್ಪರ್ಧಿ ನೆಟ್‌ಫ್ಲಿಕ್ಸ್‌ ನಂತೆಯೇ (Netflix) ಚಂದಾದಾರರ ಬೆಳವಣಿಗೆಯಲ್ಲಿ ನಿಧಾನವಾಗಿದೆ. ಯುಎಸ್ ಮತ್ತು ಕೆನಡಾದಲ್ಲಿ ಕೇವಲ 2 ಲಕ್ಷ ಚಂದಾದಾರರನ್ನು ತಲುಪಿದ್ದು, ಒಟ್ಟು ಬಳಕೆದಾರರ ಸಂಖ್ಯೆ 46.6 ಮಿಲಿಯನ್‌ಗೆ ತಂದಿದೆ. ಹಾಟ್‌ಸ್ಟಾರ್ (Hotstar) ಹೊರತುಪಡಿಸಿ ಸ್ಟ್ರೀಮಿಂಗ್ ಸೇವೆಯು 12 ಲಕ್ಷ ಸದಸ್ಯರ ಸಂಖ್ಯೆಯಷ್ಟು ಹೆಚ್ಚಾಗಿದೆ. ಈ ನಡುವೆ ಇತರ ವೇದಿಕೆಗಳಾದ ಹುಲು ಮತ್ತು ಇಎಸ್‌ಪಿಎನ್ ಪ್ಲಸ್ ಬಳಕೆದಾರರಲ್ಲೂ ಕ್ರಮವಾಗಿ 8 ಮತ್ತು 6 ಲಕ್ಷ ಏರಿಕೆ ಕಂಡಿದೆ. 

All Things You Need to Know about Disney Plus | SameMovie

ಡಿಸ್ನಿ ತನ್ನ ತ್ರೈಮಾಸಿಕ ಬೆಳವಣಿಗೆಯನ್ನು ಗಮನಿಸಿದ ನಂತರ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡಿದೆ. ವಿಶ್ವದಾದ್ಯಂತ ನಮ್ಮ ಉದ್ಯೋಗಿಗಳ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕಂಪನಿಯಾದ್ಯಂತ 5.5 ಶತಕೋಟಿ ಡಾಲರ್ ಉಳಿತಾಯದ ಗುರಿ ಹೊಂದಿದ್ದು, ಅದಕ್ಕಾಗಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಇಒ ಹೇಳಿದ್ದಾರೆ.

ನಿರಂತರವಾಗಿ ಬೆಳವಣಿಗೆಯೊಂದಿಗೆ ಲಾಭದಾಯಕತೆ ಸಾಧಿಸುವುದು ನಮ್ಮ ಗುರಿಯಾಗಿದೆ. ಪ್ರಸ್ತುತ ನಮ್ಮ ಈ ನಿರ್ಧಾರದಿಂದ 2024 ಆರ್ಥಿಕ ವರ್ಷದ ವೇಳೆಗೆ ಡಿಸ್ನಿ ಪ್ಲಸ್ ಗರಿಷ್ಠ ಲಾಭದ ಗುರಿ ತಲುಪುತ್ತದೆ ಎಂದು ಇಗರ್ ಹೇಳಿದ್ದಾರೆ. ಆದರೆ, ಯಾವ ವಿಭಾಗಗಳಿಗೆ ಇದರ ಪರಿಣಾಮ ಬೀರುತ್ತದೆ ಅನ್ನುವ ಬಗ್ಗೆ ಬಹಿರಂಗಪಡಿಸಿಲ್ಲ. 

ಈಗಾಗಲೇ ಅಮೆಜಾನ್ 18 ಸಾವಿರ, ಸೇಲ್ಸ್‌ಫೋರ್ಸ್‌ 8 ಸಾವಿರ, ಮೈಕ್ರೋಸಾಫ್ಟ್ (Microsoft) 10 ಸಾವಿರ ಹಾಗೂ ಗೂಗಲ್ 12 ಸಾವಿರ ಸೇರಿದಂತೆ ವಿವಿಧ ಕಂಪನಿಗಳು ಕಳೆದ ಒಂದು ವಾರದಲ್ಲಿ 50 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನ ಮನೆಗೆ ಕಳುಹಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ