68ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ!
ಲಂಡನ್: ಭಾರತದ ಖ್ಯಾತ ವಕೀಲ ಹರೀಶ್ ಸಾಳ್ವೆ ತಮ್ಮ 68ನೇ ವಯಸ್ಸಿನಲ್ಲಿ 3ನೇ ಮದುವೆಯಾಗಿದ್ದು, ಲಂಡನ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ.
ಹೌದು.. ಭಾರತದ ಮಾಜಿ ಸಾಲಿಸಿಟರ್ ಜನರಲ್ ಕೂಡ ಆಗಿರುವ ಖ್ಯಾತ ವಕೀಲ ಹರೀಶ್ ಸಾಳ್ವೆ 68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದು, ಟ್ರಿನಾ ಎನ್ನುವವರೊಂದಿಗೆ ಸಾಳ್ವೆ ಲಂಡನ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆ ವರದಿ ಮಾಡಿದ್ದು, ಸಾಳ್ವೆ ಅವರ ಮದುವೆಗೆ ನೀತಾ ಅಂಬಾನಿ, ಗೋಪಿ ಹಿಂದುಜಾ ಲಲಿತ್ ಮೋದಿ, ಉಜ್ವಲ್ ರಾವತ್ ಸೇರಿ ಹಲವರು ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಇವರ ಮದುವೆಯ ವಿಡಿಯೊ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹರೀಶ್ ಮದುವೆಯಾಗಿರುವ ಟ್ರಿನಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಸಾಳ್ವೆ ಅವರು 1982ರಲ್ಲಿ ಮೀನಾಕ್ಷಿ ಎಂಬವವರನ್ನು ಮದುವೆಯಾಗಿ 2020ರಲ್ಲಿ ವಿಚ್ಛೇದನ ನೀಡಿದ್ದರು. 2020ರಲ್ಲಿ ಕಾರೋಲಿನ್ ಬ್ರೊಸಾರ್ಡ್ ಎನ್ನುವವರನ್ನು ಮದುವೆಯಾಗಿದ್ದರು. ಇದೀಗ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಸಾಳ್ವೆ ಕಾಲಿರಿಸಿದ್ದಾರೆ.
Senior Advocate Harish Salve gets Married for the Third time at the age of 68 to Trina #HarishSalve pic.twitter.com/oQzPeTrx0m
— Rosy (@rose_k01) September 3, 2023
ಕುಲಭೂಷಣ್ ಜಾಧವ್ ಪ್ರಕರಣ ಸೇರಿ ಹಲವು ಉನ್ನತ ಮಟ್ಟದ ಪ್ರಕರಣಗಳಲ್ಲಿ ಸಾಳ್ವೆ ವಕೀಲರಾಗಿದ್ದರು. ಜಾಧವ್ ಪ್ರಕರಣದಲ್ಲಿ ₹1 ಶುಲ್ಕ ಹಣ ಪಡೆದು ಸುದ್ದಿಯಾಗಿದ್ದರು. 2015ರಲ್ಲಿ ಹರಿಶ್ ಸಾಳ್ವೆ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಸಾಳ್ವೆ ಅವರು ನವೆಂಬರ್ 1999 ರಿಂದ ನವೆಂಬರ್ 2002 ರವರೆಗೆ ಭಾರತದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
G 20ಯಲ್ಲಿ ಚೀನಾ ಅಧ್ಯಕ್ಷ ಭಾಗವಹಿಸದಿರುವುದು ಬೇಸರ ತಂದಿದೆ: ಜೋ ಬೈಡೆನ್
ನವದೆಹಲಿ: ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G 20 summit 2023) ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ (Xi Jinping) ಭಾಗವಹಿಸದಿರುವುದು ತೀವ್ರ ಬೇಸರ ತಂದಿದೆ ಎಂದು ಅಮೆರಿಕ (America) ಅಧ್ಯಕ್ಷ ಜೋ ಬೈಡೆನ್ (Joe Biden) ಹೇಳಿದ್ದಾರೆ. ನಾನು ಅವರನ್ನು ನೋಡಲು ಭಾರತಕ್ಕೆ ಹೊಗುತ್ತಿದ್ದೇನೆ, ಅವರ ಅನುಪಸ್ಥಿತಿ ತೀವ್ರ ನಿರಾಶೆಗೊಳಿಸಿದೆ ಎಂದರು.
ಡೆಲವೇರ್ ನ ರೆಹೋಬೋತ್ ಬೀಚ್‍ನಲ್ಲಿ ಮಾತನಾಡಿದ ಅವರು, ನಾನು ಅವನನ್ನು ನೋಡಲು ಹೋಗುತ್ತಿದ್ದೇನೆ. ಅವರು ಬಾರದಿರುವುದು ನನಗೆ ತೀವ್ರ ಬೇಸರವಾಗಿದೆ. ಇದೇ ವೇಳೆ ಏಷ್ಯಾದಲ್ಲಿ (Asia) ಅಮೆರಿಕಾದ (America) ಸಂಬಂಧಗಳನ್ನು ಬಲಪಡಿಸಲು ವಿಯೆಟ್ನಾಂಗೆ ಪ್ರವಾಸವನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ಭಾರತ ಮತ್ತು ವಿಯೆಟ್ನಾಂ ಯುನೈಟೆಡ್ ಸ್ಟೇಟ್ಸ್ ನೊಂದಿಗೆ ಹೆಚ್ಚು ನಿಕಟ ಸಂಬಂಧಗಳನ್ನು ಬಯಸುತ್ತಾರೆ ಮತ್ತು ಅದು ತುಂಬಾ ಸಹಾಯಕವಾಗಬಹುದು ಎಂದು ಬೈಡೆನ್ ಹೇಳಿದರು. ಚೀನಾದ ಪ್ರಧಾನ ಮಂತ್ರಿ ಲಿ ಕಿಯಾಂಗ್ ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಬೀಜಿಂಗ್ ಅನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.