- ರಾಷ್ಟ್ರೀಯ
- 7:56 ಅಪರಾಹ್ನ
- ಫೆಬ್ರವರಿ 6, 2023
6650 ಸಿಬ್ಬಂದಿ ವಜಾಕ್ಕೆ ಡೆಲ್ ಸಂಸ್ಥೆ ತೀರ್ಮಾನ
Twitter
Facebook
LinkedIn
WhatsApp

ಮುಂಬೈ: ಪರ್ಸನಲ್ ಕಂಪ್ಯೂಟರ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಡೆಲ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ 6650 ಸಿಬ್ಬಂದಿ ವಜಾಗೊಳಿಸಲು ತೀರ್ಮಾನಿಸಿದೆ.ಪಿ . ಸಿ. ಗಳ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.
ಒಟ್ಟು ಸಿಬ್ಬಂದಿಯ ಶೇಕಡ 5ರಷ್ಟು ಮಂದಿಗೆ ಕೊಕ್ ನೀಡಲು ಸಂಸ್ಥೆ ನಿರ್ಧರಿಸಿದೆ.2022ರ ಹಣಕಾಸು ವರ್ಷದ ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯ ಕಂಪ್ಯೂಟರ್ ಗಳ ಬೇಡಿಕೆಯಲ್ಲಿ ಶೇಕಡ 37 ಕುಸಿತವಾಗಿತ್ತು.ಡೆಲ್ ಸಂಸ್ಥೆಯ ಒಟ್ಟು ಆದಾಯದ ಶೇಕಡ 55 ಪರ್ಸಲ್ ಕಂಪ್ಯೂಟರ್ ಗಳ ಮಾರಾಟದಿಂದ ಬರುತ್ತಿದೆ.ಸಂಸ್ಥೆಯ ಸಿಬ್ಬಂದಿಗೆ ಈ ಮೇಲ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ