ಬಾಲಕಿ ಮೇಲೆ 60 ವರ್ಷದ ವೃದ್ಧನಿಂದ ಅತ್ಯಾಚಾರ: ವೃದ್ಧನ ಬಂಧನ!
ಆರೋಪಿ ವೃದ್ಧನ ಮನೆಗೆ ಹಾಲು ಕೊಡಲು ಬಾಲಕಿಯ ತಂದೆ ಹೋಗುತ್ತಿದ್ದರು. ಕೆಲವೊಂದು ಸಮಯದಲ್ಲಿ ತಂದೆ ಇಲ್ಲದ ದಿನ, ಈ ಬಾಲಕಿಯೇ ಹಾಲು ಕೊಡಲು ವೃದ್ಧನ ಮನೆಗೆ ಹೋಗುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಇನ್ನು ಈ ವೃದ್ಧ, 5 ವರ್ಷಗಳ ಹಿಂದೆಯೂ ಲೈಂಗಿಕ ದೌರ್ಜನ್ಯವೆಸಗಿದ್ದ. ಆದರೆ, ಭಯದಿಂದ ಬಾಲಕಿ ಸುಮ್ಮನಿದ್ದಳು. ಇದೀಗ ಐದು ವರ್ಷಗಳ ಬಳಿಕ ಮತ್ತೆ ಹಾಲು ಕೊಟ್ಟು ಬರಲು ಮನೆಗೆ ತೆರಳಿದ್ದ ವೇಳೆ ಮೊದಲಿನಂತೆಯೇ ಸಲುಗೆ ಬೆಳಸಿ ಕುಕೃತ್ಯವೆಸಗಿದ್ದಾನೆ. ಇದೀಗ ಅತ್ಯಾಚಾರ ಆರೋಪದಡಿ 60 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದು, ಮಾಗಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ಆರಂಭವಾಗಿದೆ.
ಇನ್ನು ಇದೇ ಜನವರಿ 30 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಕುಡಿದ ಅಮಲಿನಲ್ಲಿ 6 ವರ್ಷದ ಬಾಲಕಿ ಯನ್ನು ಎಳೆದೊಯ್ದು 23 ವರ್ಷದ ಯುವಕ ಅತ್ಯಾಚಾರ ಮಾಡಿರುವಂತಹ ಘಟನೆ ನಡೆದಿತ್ತು. ಮನೆಯಲ್ಲಿ ಯಾರು ಇಲ್ಲದ ವೇಳೆ ಮಧುಗಿರಿ ಮೂಲದ ಯುವಕನಿಂದ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಬಾಲಕಿ ಕಿರುಚಿದ ಕಾರಣ ಸ್ಥಳಿಯರು ದೌಡಾಯಿಸಿದ್ದು, ಬಾಲಕಿಯ ರಕ್ಷಣೆ ಮಾಡಲಾಗಿತ್ತು. ಇದೀಗ ರಾಮನಗರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ.