6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
ಮಡಿಕೇರಿ: ಹೃದಯಾಘಾತದಿಂದ (Heart Attack) 6ನೇ ತರಗತಿ ವಿದ್ಯಾರ್ಥಿಯೋರ್ವ (Student) ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ.
ಕೀರ್ತನ್ (12) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಅವರ ಪುತ್ರ ಕೀರ್ತನ್ ಮರಣವು ಎಲ್ಲರನ್ನೂ ದಂಗು ಬಡಿಸಿದೆ. ಕೀರ್ತನ್ ಕುಶಾಲನಗರ ಸಮೀಪದ ಕೊಪ್ಪಭಾರತ ಮಾತಾ ಶಾಲಾ ವಿದ್ಯಾರ್ಥಿಯಾಗಿದ್ದ. ಕೀರ್ತನ್ ಓದುತ್ತಿದ್ದ ಅದೇ ಶಾಲೆಯಲ್ಲೇ ಬಸ್ ಚಾಲಕನಾಗಿ ತಂದೆ ಮಂಜಾಚಾರಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಶನಿವಾರ ತಡರಾತ್ರಿ ಕೀರ್ತನ್ ಮಲಗಿದ್ದ ಜಾಗದಿಂದಲೇ ಎರಡು ಬಾರಿ ಎದೆ ನೋವು ಎಂದು ಕಿರುಚಿಕೊಂಡಿದ್ದ. ಇದರಿಂದಾಗಿ ಗಾಬರಿಗೊಂಡ ಆತನ ಪೋಷಕರು ತಕ್ಷಣವೇ ಕುಶಾಲನಗರ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಕೀರ್ತನ್ ಆ ವೇಳೆಗೆ ಮೃತಪಟ್ಟಿದ್ದ.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಅದರಲ್ಲೂ ಪುಟ್ಟ ಮಕ್ಕಳು ಹೃದಯಾಘಾತದಿಂದ ಮೃತಪಡುವ ನಿದರ್ಶನ ಇತ್ತೀಚಿನ ದಿನಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.