58ನೇ ವಯಸ್ಸಿನಲ್ಲಿ 8ನೇ ಮಗುವಿಗೆ ತಂದೆಯಾಗಲಿರುವ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್
ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ 58ನೇ ವಯಸ್ಸಿನಲ್ಲಿ 8ನೇ ಬಾರಿಗೆ ತಂದೆಯಾಗುತ್ತಿದ್ದು, ಬೋರಿಸ್ ಜಾನ್ಸನ್-3ನೇ ಪತ್ನಿ ಕ್ಯಾರಿ ಜಾನ್ಸನ್ ದಂಪತಿ ತಮ್ಮ ಮೂರನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಈ ವಿಚಾರವನ್ನು ಶುಕ್ರವಾರ ಸ್ವತಃ ಬೋರಿಸ್ ಜಾನ್ಸನ್ ಪತ್ನಿ ಕ್ಯಾರಿ ಜಾನ್ಸನ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ್ದು, ತಮ್ಮ ಇಬ್ಬರು ಮಕ್ಕಳ ಫೋಟೋವನ್ನು ಹಂಚಿಕೊಂಡು ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ. ಕೆಲವೇ ವಾರಗಳಲ್ಲಿ ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ. ಕಳೆದ 8 ತಿಂಗಳಿನಿಂದ ನಾನು ತುಂಬಾ ದಣಿದಿದ್ದೇನೆ. ನನ್ನ ಕುಟುಂಬದ ಪುಟ್ಟ ಸದಸ್ಯನ ಭೇಟಿಗೆ ಕುತೂಹಲಗೊಂಡಿದ್ದೇನೆ. ವಿಲ್ಫ್ (ಮಗ) ಮತ್ತೆ ದೊಡ್ಡ ಸಹೋದರನಾಗುವ ಬಗ್ಗೆ ಉತ್ಸುಕನಾಗಿದ್ದಾನೆ ಮತ್ತು ನಿರಂತರವಾಗಿ ಅದರ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ಮೇ.2021 ರಲ್ಲಿ ಮದುವೆಯಾದ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಜಾನ್ಸನ್ ದಂಪತಿಗೆ ರೋಮಿ ಹಾಗೂ ವಿಲ್ಫ್ ಎನ್ನುವ ಮಕ್ಕಳಿದ್ದಾರೆ. ಇದು ಬೋರಿಸ್ ಜಾನ್ಸನ್ ಅವರ ಮೂರನೇ ಮದುವೆ. ಇದಕ್ಕೂ ಮುನ್ನ ಮರೀನಾ ವೀಲರ್ ಎಂಬುವವರೊಂದಿಗೆ ಜಾನ್ಸನ್ ಮದುವೆಯಾಗಿದ್ದರು. ಮರೀನಾ ವೀಲರ್ ರಿಂದ ಜಾನ್ಸನ್ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಇದು ಮಾತ್ರವಲ್ಲದೆ ಜಾನ್ಸನ್ ಹೆಲೆನ್ ಮ್ಯಾಕಿನ್‌ಟೈರ್ ಅವರೊಂದಿಗಿನ ಸಂಬಂಧದಿಂದ ಒಂದು ಮಗುವನ್ನು ಹೊಂದಿದ್ದಾರೆ. ಮೊದಲ ಪತ್ನಿ ಅಲ್ಲೆಗ್ರಾ ಮೊಸ್ಟಿನ್-ಓವನ್ ಅವರೊಂದಿಗೆ ಯಾವುದೇ ಮಕ್ಕಳನ್ನು ಹೊಂದಿರಲಿಲ್ಲ ಎಂದು ವರದಿ ತಿಳಿಸಿದೆ.
35 ವರ್ಷದ ಕ್ಯಾರಿ ಜಾನ್ಸನ್ ಅವರು ಬ್ರಿಟಿಷ್ ಮಾಧ್ಯಮ ಸಲಹೆಗಾರರಾಗಿದ್ದಾರೆ ಮತ್ತು ಕನ್ಸರ್ವೇಟಿವ್ ಪಕ್ಷದ ಮಾಧ್ಯಮ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಓಷಿಯನ್ ಕನ್ಸರ್ವೇಟಿವ್ ಚಾರಿಟಿಯಾದ ಓಷಿಯಾನಾಗೆ ಹಿರಿಯ ಸಲಹೆಗಾರರಾಗಿದ್ದಾರೆ. 2021ರಲ್ಲಿ ಈ ಜೋಡಿ ವಿವಾಹವಾಗಿತ್ತು. ಮೇ 2021 ರಲ್ಲಿ ವಿವಾಹವಾದ ದಂಪತಿಗೆ ಅದಾಗಲೇ ಮೂರು ವರ್ಷದ ವಿಲ್ಫ್ ಮತ್ತು ಎರಡು ವರ್ಷದ ರೋಮಿ ಎಂಬ ಇಬ್ಬರು ಮಕ್ಕಳಿದ್ದರು. ವಿಲ್ಫ್ ಏಪ್ರಿಲ್ 2020 ರಲ್ಲಿ ಜನಿಸಿದರೆ, ರೋಮಿ ಡಿಸೆಂಬರ್ 2021 ರಲ್ಲಿ ಜನಿಸಿದ್ದರು. ಇದು ಜಾನ್ಸನ್ ಅವರ ಮೂರನೇ ಮದುವೆಯಾಗಿದೆ.