ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗಂಡು ಮಗುವಿಗೆ ಜನ್ಮ ನೀಡಿದ 51ನೇ ವಯಸ್ಸಿನ ನಟಿ..!!

Twitter
Facebook
LinkedIn
WhatsApp
ಗಂಡು ಮಗುವಿಗೆ ಜನ್ಮ ನೀಡಿದ 51ನೇ ವಯಸ್ಸಿನ ನಟಿ..!!
 

ಹಾಲಿವುಡ್‌ನ (Hollywood) ನಟಿ ಕ್ಯಾಮೆರಾನ್ ಡಿಯಾಜ್ (Cameron Diaz) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. 51ನೇ ವಯಸ್ಸಿನ ನಟಿಯು ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಕ್ಯಾಮೆರಾನ್ ಡಿಯಾಜ್ ಅವರ ಪತಿ ಬೆಂಜಿ ಮ್ಯಾಡೆನ್ ಕೂಡ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಕ್ಯಾಮೆರಾನ್ ಡಿಯಾಜ್ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಪತಿ ಬೆಂಜಿ ಮ್ಯಾಡೆನ್ ಅವರು ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿಸಿದ್ದಾರೆ. ನಮ್ಮ ಕುಟುಂಬಕ್ಕೆ ಮಗನ ಆಗಮನವಾಗಿದೆ. ಅವನಿಗೆ ಕಾರ್ಡಿನಲ್ ಮ್ಯಾಡೆನ್ ಎಂಬುದಾಗಿ ಹೆಸರಿಡಲು ತೀರ್ಮಾನಿಸಿದ್ದೇವೆ. ಅವನು ನೋಡಲು ತುಂಬ ಮುದ್ದಾಗಿದ್ದಾನೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾವು ಆತನ ಫೋಟೋ ಪೋಸ್ಟ್ ಮಾಡಿಲ್ಲ. ಆದರೂ, ಆತ ತುಂಬ ಕ್ಯೂಟ್ ಆಗಿದ್ದಾನೆ ಎಂದು ಹೇಳಲು ಬಯಸುತ್ತೇವೆ. ನಿಮ್ಮ ಆಶೀರ್ವಾದ, ಹಾರೈಕೆ ಇರಲಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕ್ಯಾಮೆರಾನ್ ಡಿಯಾಜ್ ಹಾಗೂ ಬೆಂಜಿ ಮ್ಯಾಡೆನ್ ಅವರು 2015ರಲ್ಲಿ ಮದುವೆಯಾಗಿದ್ದರು. 2019ರಲ್ಲಿ ನಟಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಎರಡನೇ ಮಗುವಿಗೆ ಕ್ಯಾಮೆರಾನ್ ಡಿಯಾಜ್ ಅವರು ತಾಯಿಯಾಗಿದ್ದಾರೆ.

ಅವಾಚ್ಯ ಪದಗಳಿಂದ ನಿಂದನೆ: ಜಾನಿ ಡೆಪ್ ವಿರುದ್ಧ ಸಹ ನಟಿಯಿಂದ ಆರೋಪ

ಹಾಲಿವುಡ್​ನ ಹೆಸರಾಂತ ನಟ ಜಾನಿ ಡೆಪ್ (Jhonny Depp) ಹಾಗೂ ಅವರ ಮಾಜಿ ಪತ್ನಿ ಅಂಬರ್ ಹರ್ಡ್ ನಡುವೆ ನಡೆದ ಕಾನೂನು ಸಮರ ವಿಶ್ವದ ಗಮನ ಸೆಳೆದಿತ್ತು. ಯಾವ ಸಿನಿಮಾ, ಟಿವಿ ಶೋಗೂ ಕಡಿಮೆ ಇಲ್ಲದಂತೆ ಇವರಿಬ್ಬರ ಕೋರ್ಟ್ ಕಲಾಪಗಳನ್ನು ವಿಶ್ವದ ಜನ ನೋಡಿದ್ದರು. ಕಾನೂನು ಸಮರದಲ್ಲಿ ಜಾನಿ ಡೆಪ್ ಗೆದ್ದರು, ಅಂಬರ್ ಮಾಡಿದ್ದ, ಲೈಂಗಿಕ ದೌರ್ಜನ್ಯ ಇನ್ನಿತರೆ ಆರೋಪಗಳಿಂದ ಮುಕ್ತರಾದರು. ಇದೀಗ ಜಾನಿ ಡೆಪ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಹ ನಟಿಯೊಬ್ಬರು ಜಾನಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಜಾನಿ ಡೆಪ್ ತಮ್ಮೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡರೆಂದು, ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಆರೋಪ ಮಾಡಿದ್ದಾರೆ.

ಜಾನಿ ಡೆಪ್ ಜೊತೆಗೆ ‘ಬ್ಲೋ’ ಸಿನಿಮಾನಲ್ಲಿ ನಟಿಸಿದ್ದ ಲೋಲಾ ಗ್ಲೌಡಿನಿ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಜಾನಿ ಡೆಪ್ ವಿರುದ್ಧ ದುರ್ವರ್ತನೆ ಆರೋಪವನ್ನು ಮಾಡಿದ್ದಾರೆ. ‘ಬ್ಲೋ’ ಸಿನಿಮಾದಲ್ಲಿ ನಟಿಸುವಾದ ದೃಶ್ಯವೊಂದರ ಚಿತ್ರೀಕರಣದ ವೇಳೆ ಆಕ್ಷನ್ ಅಥವಾ ಕ್ಯೂ ನೀಡಿದಾಗ ನಾನು ಜೋರಾಗಿ ನಕ್ಕೆ. ಕಟ್ ಹೇಳುತ್ತಿದ್ದಂತೆ ಜಾನಿ ಡೆಪ್ ನನ್ನ ಬಳಿ ಬಂದು ತೀವ್ರ ಸಿಟ್ಟಿನಿಂದ, ಅವಾಚ್ಯ ಶಬ್ದಗಳನ್ನು ಬಳಸಿ ನನ್ನನ್ನು ಬೈಯ್ಯಲು ಆರಂಭಿಸಿದ. ತೀರ ಕೊಳಕು ಭಾಷೆಯನ್ನು ಜಾನಿ ನನ್ನ ವಿರುದ್ಧ ಬಳಸಿದ್ದ’ ಎಂದು ಲೋಲಾ ಹೇಳಿದ್ದಾರೆ.

‘ನೀನು ಯಾರ ಮುಂದೆ ನಿಂತಿದ್ದೀಯ ಗೊತ್ತೆ, ನಿನ್ನ ಯೋಗ್ಯತೆ ಏನು? ಬಾಯಿ ಮುಚ್ಚಿಕೊಂಡಿರು, ನಿನ್ನನ್ನು ನೀನು ಏನಂದುಕೊಂಡಿದ್ದೀಯ? ಇತ್ಯಾದಿಗಳ ಜೊತೆಗೆ ‘ಎಫ್’ ಪದವನ್ನು ಅತಿಯಾಗಿ ಬಳಸಿ ಬೆದರಿಕೆ ಹಾಕಿದ್ದರು. ಜಾನಿ ಡೆಪ್ ನನ್ನ ಮೆಚ್ಚಿನ ನಟನಾಗಿದ್ದ, ಆದರೆ ಅಂದು ಜಾನಿ ನನ್ನ ಎದುರು ನಿಂತು ಕೆಟ್ಟದಾಗಿ ಬೈಯ್ಯುತ್ತಿದ್ದಾಗ ನನಗೆ ಕಣ್ಣೀರು ಬಂದುಬಿಟ್ಟಿತು. ಆ ಸಿನಿಮಾ ನನ್ನ ಮೊದಲ ದೊಡ್ಡ ಪ್ರೊಡಕ್ಷನ್ ಹೌಸ್​ನ ಸಿನಿಮಾ ಆಗಿತ್ತು. ಜಾನಿ ಜೊತೆ ಕೆಲಸ ಮಾಡುವುದು ನನ್ನ ಆಸೆಗಳಲ್ಲಿ ಒಂದಾಗಿತ್ತು. ಆದರೆ ಜಾನಿ ಅಂದು ನಡೆದುಕೊಂಡ ರೀತಿಯಿಂದ ಅವರ ಮೇಲಿನ ನನ್ನ ಅಭಿಪ್ರಾಯ ಬದಲಾಯ್ತು’ ಎಂದಿದ್ದಾರೆ ಲೋಲಾ.

‘ಘಟನೆ ನಡೆದ ಬಳಿಕ ಜಾನಿ ನನ್ನ ಬಳಿ ಬಂದರು. ಏನು ಅಂದುಕೊಳ್ಳಬೇಡ, ನಾನು ನನ್ನ ಪಾತ್ರದ ಮೇಲೆ ತೀವ್ರ ಗಮನ ಹರಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಾನು ಪಾತ್ರದಲ್ಲಿಯೇ ಇರಲು ಬಯಸುವ ನಟ. ನನ್ನ ಪ್ರಕಾರ ನಾನು ಆಗ ಪಾತ್ರದಲ್ಲಿಯೇ ಇದ್ದೆ. ನಾನು ಈ ಸಿನಿಮಾನಲ್ಲಿ ಬಾಸ್ಟನ್​ ಶೈಲಿಯಲ್ಲಿ ಮಾತನಾಡಲು ಯತ್ನಿಸುತ್ತಿದ್ದೇನೆ. ಅದು ನನಗೆ ಬಹಳ ಕಷ್ಟವಾಗುತ್ತಿದೆ. ಆ ಒತ್ತಡದಿಂದ ನಾನು ಹಾಗೆ ವರ್ತಿಸಿದೆ. ನೀನು ಓಕೆ ತಾನೆ? ಎಂದು ಕೇಳಿದ. ಅದಕ್ಕೆ ನಾನು ಓಹ್ ಪರವಾಗಿಲ್ಲ, ಅದನ್ನೆಲ್ಲ ನಾನು ಆಗಲೆ ಮರೆತುಬಿಟ್ಟೆ, ಅದೇನು ದೊಡ್ಡ ವಿಷಯವಲ್ಲ’ ಎಂದುಬಿಟ್ಟೆ’ ಎಂದು ಲೋಲಾ ನೆನಪು ಮಾಡಿಕೊಂಡಿದ್ದಾರೆ.

‘ಅಸಲಿಗೆ ನನಗೆ ಆ ಘಟನೆ ಬಳಿಕ ಬಹಳ ಬೇಸರವಾಗಿತ್ತು. ಆದರೆ ನನ್ನ ತಂದೆ ಒಂದು ಪಾಠ ಕಲಿಸಿದ್ದರು, ಎಂದಿಗೂ ಸಹ ನೀನು ಅಸಹಾಯಕಳು, ಬೇರವರಿಂದ ನೋವಿಗೆ ಗುರಿಯಾದವಳು ಎಂದು ತೋರಿಸಬೇಡ ಎಂದು ಅದೇ ಕಾರಣಕ್ಕೆ ನಾನು ಜಾನಿಯ ಎದುರು ಏನೂ ಆಗಿಲ್ಲವೆಂದು ನಟಿಸಿದೆ. ಅಸಲಿಗೆ ಆ ದಿನ ಬಹಳ ಬೇಸರವಾಗಿತ್ತು. ಆ ಸಿನಿಮಾದ ನಿರ್ದೇಶಕ ಸಹ ನನ್ನ ಬಳಿ ಬಂದು ಮಾತನಾಡಲಿಲ್ಲ. ಸೆಟ್​ನಲ್ಲಿ ಯಾರೂ ಸಹ ಅಂದು ನನ್ನ ಪರವಾಗಿ ನಿಲ್ಲಲಿಲ್ಲ. ಅಂದು ನನಗೆ ಬಹಳ ಬೇಸರವಾಗಿತ್ತು. ನನ್ನನ್ನು ಒಬ್ಬಂಟಿ ಮಾಡಿ ನನ್ನ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂಬ ಭಾವ ಬಂತು’ ಎಂದಿದ್ದಾರೆ.

ನಟಿ ಲೋಲಾರ ಆರೋಪಗಳನ್ನು ಜಾನಿ ಡೆಪ್​ರ ಮ್ಯಾನೇಜರ್ ತಳ್ಳಿ ಹಾಕಿದ್ದಾರೆ. ‘ಜಾನಿ ಯಾವಾಗಲೂ ಸಹ ನಟರು ಮತ್ತು ಸಿನಿಮಾ ಚಿತ್ರೀಕರಣದ ಸಿಬ್ಬಂದಿಯೊಂದಿಗೆ ಉತ್ತಮ ಬಂಧವನ್ನು ಇಟ್ಟುಕೊಳ್ಳಲು ಆದ್ಯತೆ ನೀಡುತ್ತಾರೆ. ಈಗ ಮಾಡಲಾಗುತ್ತಿರುವ ಆರೋಪ, ನಟಿ ಹೇಳುತ್ತಿರುವ ಘಟನೆ, ಆ ದಿನ ಸೆಟ್​ನಲ್ಲಿದ್ದು ಎಲ್ಲವನ್ನೂ ಕಣ್ಣಿನಿಂದ ನೋಡಿದವರು ಹೇಳುತ್ತಿರುವುದಕ್ಕಿಂತಲೂ ಬಹಳ ಭಿನ್ನವಾಗಿದೆ’ ಎನ್ನುವ ಮೂಲಕ ನಟಿ ಲೋಲಾ ಸುಳ್ಳು ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ