5 ಕೋಟಿ ನೀಡುವಂತೆ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ಕಳುಹಿಸಿದ ತರಕಾರಿ ಮಾರಾಟಗಾರ ಅರೆಸ್ಟ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಇತ್ತೀಚಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ (Lawrence Bishnoi) ಜೀವ ಬೆದರಿಕೆ ಸಂದೇಶ ಕಳುಹಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು (Mumbai Police) ಜೆಮ್‌ಶೆಡ್‌ಪುರದ ತರಕಾರಿ ಮಾರಾಟಗಾರನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಶೇಖ್ ಹುಸೇನ್ ಶೇಖ್ ಮೌಸಿನ್ (24) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಬಾಬಾ ಸಿದ್ದಿಕಿ (Baba Siddique) ಹತ್ಯೆಯ ಬಳಿಕ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯ ಸಂದೇಶ ಬಂದಿತ್ತು. ಬೆದರಿಕೆಯ ಕುರಿತು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ವಾಟ್ಸಪ್ ಸಂದೇಶ ಬಂದಿತ್ತು.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸಲ್ಮಾನ್ ಖಾನ್ ಅವರೊಂದಿಗಿನ ಎಲ್ಲಾ ದ್ವೇಷಗಳನ್ನು ಕೊನೆಗೊಳಿಸಲು ಈ 5 ಕೋಟಿ ರೂ.ಯ ಬೇಡಿಕೆಯನ್ನು ಇಟ್ಟಿತ್ತು. ಈ ಸಂದೇಶಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದು, ಜೆಮ್‌ಶೆಡ್‌ಪುರ್‌ನ ತರಕಾರಿ ಮಾರಾಟಗಾರನೊಬ್ಬನನ್ನು ಬಂಧಿಸಿದ್ದಾರೆ.
ಮಂಗಳವಾರ ಬೆದರಿಕೆ ಬಂದಿದ್ದ ಸಂಖ್ಯೆಯಂದಲೇ ಪುನಃ ಸಂದೇಶ ಬಂದಿದ್ದು, ಅದರಲ್ಲಿ ಬೆದರಿಕೆ ಸಂದೇಶವನ್ನು ತಪ್ಪಾಗಿ ಕಳುಹಿಸಲಾಗಿದೆ. ಬಳಿಕ ಕ್ಷಮೆಯಾಚಿಸಿದ ಸಂದೇಶವನ್ನು ಕಳುಹಿಸಿದ್ದಾರೆ. ಪೊಲೀಸರು ಮೊಬೈಲ್ ನಂಬರ್‌ನ್ನು ಟ್ರ್ಯಾಕ್ ಮಾಡಿದಾಗ ಜಾರ್ಖಂಡ್‌ನಲ್ಲಿ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ನಟ ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಹಾಗೂ ಲಾರೆನ್ಸ್ ಬಿಷ್ಣೋಯಿ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ 5 ಕೋಟಿ ರೂ. ಹಣವನ್ನು ಕೋಡಿ ಎಂದು ಬೇಡಿಕೆಯಿಟ್ಟಿದ್ದರು. ಇದನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬೇಡಿ. ಒಂದು ವೇಳೆ ತೆಗೆದುಕೊಂಡು ಹಣಕೊಡದೇ ಇದ್ದರೆ ಬಾಬಾ ಸಿದ್ದಿಕಿಗಿಂತ ಸಲ್ಮಾನ್ ಖಾನ್ ಹತ್ಯೆ ಹೀನಾಯವಾಗಿರುತ್ತದೆ ಎಂದು ಬರೆಯಲಾಗಿತ್ತು.
ಖಾಸಗಿ ವಿಡಿಯೋ ಲೀಕ್, ದೂರು ಕೊಟ್ಟ ‘ಕಿರಾತಕ’ ನಟಿ
ಯಶ್ ನಟಿಸಿದ್ದ ಸೂಪರ್ ಹಿಟ್ ‘ಕಿರಾತಕ’ ಸಿನಿಮಾದ ನಾಯಕಿ ಒವಿಯಾ ಕಳೆದ ಕೆಲ ದಿನಗಳಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ. ಒವಿಯಾರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ಅದಾಗಿದ್ದು, ವಿಡಿಯೋದಲ್ಲಿರುವ ಯುವತಿ ನಟಿ ಒವಿಯಾ ಎನ್ನಲಾಗುತ್ತಿದೆ.
ಒವಿಯಾ ಬಲಗೈ ಭುಜದ ಮೇಲಿರುವ ಟ್ಯಾಟೂ, ವಿಡಿಯೋದಲ್ಲಿರುವ ಯುವತಿಯ ಭುಜದ ಮೇಲೆಯೂ ಇದ್ದು, ನೆಟ್ಟಿಗರು, ‘ಇದು ಒವಿಯಾರದ್ದೇ ವಿಡಿಯೋ’ ಎನ್ನುತ್ತಿದ್ದಾರೆ. ಇದೀಗ ನಟಿ ಒವಿಯಾ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಕೇರಳದ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ನಟಿ ಒವಿಯಾ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಒವಿಯಾರ ಮ್ಯಾನೇಜರ್, ‘ಒವಿಯಾರ ಘನತೆಗೆ ಧಕ್ಕೆ ತರುವ ಪ್ರಯತ್ನ ಇದಾಗಿದ್ದು, ಉದ್ದೇಶಪೂರ್ವಕವಾಗಿ ನಕಲಿ ವಿಡಿಯೋ ಅನ್ನು ಒವಿಯಾ ಹೆಸರಿನಲ್ಲಿ ವೈರಲ್ ಮಾಡಲಾಗಿದೆ’ ಎಂದಿದ್ದಾರೆ. ಈ ಬಗ್ಗೆ ತ್ರಿಶೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ ಇನ್ಸ್ಟಾಗ್ರಾಂನಲ್ಲಿ ತಮ್ಮ ಸೆಲ್ಫಿಯೊಂದನ್ನು ಒವಿಯಾ ಹಂಚಿಕೊಂಡಿದ್ದರು. ‘ಪೂರ್ತಿ ವಿಡಿಯೋ ಹಾಕಿ’, ‘ವಿಡಿಯೋ ಬ್ಲರ್ ಇದೆ’ ಎಂದೆಲ್ಲ ಆ ಚಿತ್ರಕ್ಕೆ ಕಮೆಂಟ್ ಕೆಲವರು ಕಮೆಂಟ್ ಮಾಡಿದ್ದರು. ಕಮೆಂಟ್ ಮಾಡಿದ ಕೆಲವರಿಗೆ ತಮಾಷೆಯಾಗಿ ಉತ್ತರಿಸಿದ್ದ ಒವಿಯಾ, ‘ಮುಂದಿನ ಸಾರಿ ಹಾಕುತ್ತೇನೆ’, ‘ವಿಡಿಯೋ ಎಂಜಾಯ್ ಮಾಡಿ’ ಎಂದೆಲ್ಲ ಹೇಳಿದ್ದರು. ಒವಿಯಾರ ಈ ಕಮೆಂಟ್ಗಳು ಅದು ಒವಿಯಾರದ್ದೇ ವಿಡಿಯೋ ಇರಬಹುದಾ ಎಂಬ ಅನುಮಾನವನ್ನು ಇನ್ನಷ್ಟು ಬಲಗೊಳ್ಳುವಂತೆ ಮಾಡಿತ್ತು.
ಕೆಲವು ವರದಿಗಳ ಪ್ರಕಾರ, ಒವಿಯಾರ ಮಾಜಿ ಬಾಯ್ಫ್ರೆಂಡ್ ಒಬ್ಬಾತ ಅವರ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಇದೀಗ ಒವಿಯಾ, ತಮ್ಮ ಮಾಜಿ ಬಾಯ್ಫ್ರೆಂಡ್ ವಿರುದ್ಧವೇ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವರ್ಷ ತೆಲುಗಿನ ಯೂಟ್ಯೂಬರ್ ಒಬ್ಬಾತ, ಒವಿಯಾರ ಬಗ್ಗೆ ಕೀಳಾಗಿ ಕಮೆಂಟ್ ಮಾಡಿದ್ದ, ಹೈದರಾಬಾದ್ನ ಹಲವು ಹೋಟೆಲ್ ರೂಂಗಳಲ್ಲಿ ಒವಿಯಾ ತಂಗಿದ್ದಾಳೆ ಎಂದಿದ್ದ. ಆ ಯೂಟ್ಯೂಬರ್ ವಿರುದ್ಧ ಒವಿಯಾ ಆಗ ಕಿಡಿ ಕಾರಿದ್ದರು. ದೂರು ಸಹ ದಾಖಲಿಸಿದ್ದರು. ಆ ಯೂಟ್ಯೂಬರ್ ನಟಿ ಸಮಂತಾ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದ.
ಮಲಯಾಳಂ ಮೂಲದ ಒವಿಯಾ, ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಯಶ್ ನಟನೆಯ ‘ಕಿರಾತಕ’ ಹಾಗೂ ‘ಮಿಸ್ಟರ್ ಮೊಮ್ಮಗ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಬಿಗ್ಬಾಸ್ನಲ್ಲಿಯೂ ಭಾಗವಹಿಸಿದ್ದ ಒವಿಯಾ, ಈಗ ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.