ಶುಕ್ರವಾರ, ಮಾರ್ಚ್ 14, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

‘ನಿಮ್ಮ ಹೆಸರಿಗೆ ಡ್ರಗ್ಸ್​ ಪಾರ್ಸೆಲ್​ ಬಂದಿದೆ’ ಎಂದು ನಟಿ ಅಂಜಲಿ ಪಾಟೀಲ್ ಗೆ 5 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮ

Twitter
Facebook
LinkedIn
WhatsApp
‘ನಿಮ್ಮ ಹೆಸರಿಗೆ ಡ್ರಗ್ಸ್​ ಪಾರ್ಸೆಲ್​ ಬಂದಿದೆ’ ಎಂದು ನಟಿ ಅಂಜಲಿ ಪಾಟೀಲ್ ಗೆ 5 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮ

ಹಲವು ಸೆಲೆಬ್ರಿಟಿಗಳು ಸೈಬರ್​ ಕಿಡಿಗೇಡಿಗಳಿಂದ ತೊಂದರೆ ಅನುಭವಿಸಿದ್ದಾರೆ. ಇನ್ನೂ ಕೆಲವರು ಹಣ ಕಳೆದುಕೊಂಡಿದ್ದಾರೆ. ಖ್ಯಾತ ನಟಿ ಅಂಜಲಿ ಪಾಟೀಲ್ (Anjali Patil) ಅವರಿಗೆ ಈಗ ಮೋಸ ಆಗಿದೆ. ಅವರಿಗೆ ಬರೋಬ್ಬರಿ 5.79 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ‘ನಿಮ್ಮ ಹೆಸರಿನಲ್ಲಿ ಡ್ರಗ್ಸ್​ ಪಾರ್ಸೆಲ್​ ಬಂದಿದೆ’ ಎಂದು ಹೆದರಿಸುವ ಮೂಲಕ ಸೈಬರ್​ (Cyber Crime) ಖದೀಮರು ಈ ನಟಿಗೆ ಮೋಸ ಮಾಡಿದ್ದಾರೆ. ತಮಗೆ ಈ ರೀತಿ ವಂಚನೆ ಆಗಿದೆ ಎಂಬುದು ಅಂಜಲಿ ಪಾಟೀಲ್ ಅವರಿಗೆ ತಡವಾಗಿ ಗೊತ್ತಾಗಿದೆ. ಅಷ್ಟಕ್ಕೂ ಅವರನ್ನು ಮೋಸದ ಜಾಲಕ್ಕೆ ಬೀಳಿಸಿದ್ದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ..

ಡ್ರಗ್ಸ್​ ಕೇಸ್​ನಲ್ಲಿ ಅನೇಕ ಸೆಲೆಬ್ರಿಟಿಗಳು ವಿಚಾರಣೆ ಎದುರಿಸಿದ್ದಂಟು. ಈ ವಿಚಾರದಲ್ಲಿ ಸೆಲೆಬ್ರಿಟಿಗಳಿಗೆ ಭಯ ಇದೆ. ಆ ಭಯವನ್ನೇ ಬಂಡವಾಳ ಮಾಡಿಕೊಂಡ ಸೈಬರ್​ ಖದೀಮರು ಅಂಜಲಿ ಪಾಟೀಲ್​ಗೆ ಮೋಸ ಮಾಡಿದ್ದಾರೆ. ತಮ್ಮನ್ನು ಪೊಲೀಸರು ಎಂದು ಪರಿಚಯ ಮಾಡಿಕೊಂಡ ಖದೀಮರು ನಟಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ.

‘ನಿಮ್ಮ ಹೆಸರಿಗೆ ಡ್ರಗ್ಸ್​ ಪಾರ್ಸೆಲ್​ ಬಂದಿದೆ’ ಎಂದು ನಟಿ ಅಂಜಲಿ ಪಾಟೀಲ್ ಗೆ 5 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮ

ದೀಪಕ್​ ಶರ್ಮಾ ಎಂಬ ವ್ಯಕ್ತಿಯು ಅಂಜಲಿ ಪಾಟೀಲ್ ಅವರಿಗೆ ಕರೆ ಮಾಡಿ ‘ನಿಮ್ಮ ಆಧಾರ್​ ಕಾರ್ಡ್​ನೊಂದಿಗೆ ಡ್ರಗ್ಸ್​ ಪಾರ್ಸೆಲ್​ ಸಿಕ್ಕಿದೆ. ನೀವು ಮುಂಬೈ ಸೈಬರ್​ ಪೊಲೀಸರನ್ನು ಸಂಪರ್ಕಿಸಿ’ ಎಂದು ಹೇಳಿದ್ದಾನೆ. ನಂತರ ತಾನು ಮುಂಬೈ ಸೈಬರ್​ ಪೊಲೀಸ್​ ಅಧಿಕಾರಿ ಎಂದು ಹೇಳಿಕೊಂಡು ಬ್ಯಾನರ್ಜಿ ಎಂಬ ವ್ಯಕ್ತಿ ಅಂಜಲಿಗೆ ಕರೆ ಮಾಡಿದ್ದಾನೆ. ‘ನಿಮ್ಮ ಆಧಾರ್​ ಸಂಖ್ಯೆಗೆ ಲಿಂಕ್​ ಆಗಿರುವ ಮೂರು ಬ್ಯಾಂಕ್​ಗಳಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ. ಅದರ ಪರಿಶೀಲನೆ ಮಾಡಲು ನೀವು ನಮಗೆ 96,525 ರೂಪಾಯಿ ವರ್ಗಾವಣೆ ಮಾಡಬೇಕು’ ಎಂದು ಬೇಡಿಕೆ ಇಟ್ಟಿದ್ದಾನೆ.

‘ನಿಮ್ಮ ಜೊತೆ ಬ್ಯಾಂಕ್​ ಅಧಿಕಾರಿಗಳು ಕೂಡ ಶಾಮೀಲು ಆಗಿದ್ದಾರೆ’ ಎಂದು ನಟಿಗೆ ಸೈಬರ್​ ಕಿಡಿಗೇಡಿ ಹೆದರಿಸಿದ್ದಾನೆ. ಕೇಸ್​ ಕ್ಲೋಸ್​ ಮಾಡಲು 4,83,291 ರೂಪಾಯಿಯನ್ನು ನಟಿಯಿಂದ ಪಡೆದುಕೊಂಡಿದ್ದಾನೆ. ಖದೀಮರು ಹೇಳಿದ್ದನ್ನು ನಿಜ ಎಂದು ನಂಬಿ, ಪೊಲೀಸ್​ ಕೇಸ್​ ತಪ್ಪಿಸಲು ಅಂಜಲಿ ಪಾಟೀಲ್ ಅವರು ಈ ಹಣವನ್ನು ನೀಡಿದ್ದಾರೆ. ನಂತರ ತಾವು ಮೋಸ ಹೋಗಿರುವುದು ಅವರಿಗೆ ತಿಳಿದುಬಂದಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ನಿಮ್ಮ ಹೆಸರಿಗೆ ಡ್ರಗ್ಸ್​ ಪಾರ್ಸೆಲ್​ ಬಂದಿದೆ’ ಎಂದು ನಟಿ ಅಂಜಲಿ ಪಾಟೀಲ್ ಗೆ 5 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮ
‘ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಸಾಧ್ಯವೇ ಇಲ್ಲ’; ವಿವರಿಸಿದ ರಾಜ್​ಕುಮಾರ್ ಹಿರಾನಿ

ಹಬ್ಬ ಅಥವಾ ವಿಶೇಷ ಸಂದರ್ಭದಲ್ಲಿ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್​ಗಳು ಏರ್ಪಡುತ್ತವೆ. ದೊಡ್ಡ ದೊಡ್ಡ ಸಿನಿಮಾಗಳು ಮುಖಾಮುಖಿ ಆಗುತ್ತವೆ. ಈ ರೀತಿ ಕ್ಲ್ಯಾಶ್​ಗಳು ಮೊದಲೂ ಆಗಿದ್ದವು, ಮುಂದೆಯೂ ಆಗುತ್ತವೆ. ಇದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಅನ್ನೋದು ರಾಜ್​ಕುಮಾರ್ ಹಿರಾನಿ (Rajkumar Hirani) ಅಭಿಪ್ರಾಯ. ಇತ್ತೀಚೆಗೆ ಬಾಕ್ಸ್ ಆಫೀಸ್​ನಲ್ಲಿ ‘ಡಂಕಿ’ ಹಾಗೂ ‘ಸಲಾರ್’ ಒಟ್ಟೊಟ್ಟಿಗೆ ರಿಲೀಸ್ ಆಗಿದ್ದವು. ಈ ಬಗ್ಗೆ ರಾಜ್​ಕುಮಾರ್ ಹಿರಾನಿ ಮಾತನಾಡಿದ್ದಾರೆ.

ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ರಿಲೀಸ್ ಆಗಿ ಮೊದಲ ದಿನ 30 ಕೋಟಿ ರೂಪಾಯಿ ಗಳಿಸಿತು. ‘ಸಲಾರ್’ ಸಿನಿಮಾ ಮೊದಲ ದಿನ 95 ಕೋಟಿ ರೂಪಾಯಿ ಬಾಚಿಕೊಂಡಿತು. ಕಲೆಕ್ಷನ್ ವಿಚಾರದಲ್ಲಿ ‘ಸಲಾರ್’ ಮೇಲುಗೈ ಸಾಧಿಸಿದೆ. ‘ಎಲ್ಲರೂ ಎಲ್ಲಾ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ’ ಅನ್ನೋದು ರಾಜ್​ಕುಮಾರ್ ಹಿರಾನಿ ಅಭಿಪ್ರಾಯ.

‘ನಿರ್ಮಾಪಕರ ದೃಷ್ಟಿಯಿಂದ ಹೇಳೋದಾದರೆ ದೇಶದಲ್ಲಿ ಕಡಿಮೆ ಥಿಯೇಟರ್​ಗಳು ಇವೆ. ಒಂದಾದ ಮೇಲೆ ಒಂದರಂತೆ ಸಿನಿಮಾ ನೋಡುವಷ್ಟು ದುಡ್ಡು ಜನರ ಬಳಿ ಇಲ್ಲ. ಹೀಗಾಗಿ, ವಾರಕ್ಕೆ ಒಂದು ಅಥವಾ ತಿಂಗಳಿಗೆ ಒಂದು ಸಿನಿಮಾ ಮಾತ್ರ ನೋಡೋದು ಎನ್ನುವ ನಿರ್ಧಾರಕ್ಕೆ ಜನರು ಬರುತ್ತಾರೆ. ಒಂದು ಹಂತದಲ್ಲಿ ಇದು ಎರಡೂ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತದೆ’ ಎಂದಿದ್ದಾರೆ ರಾಜ್​ಕುಮಾರ್ ಹಿರಾನಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist