ಭಾನುವಾರ, ಜೂನ್ 2, 2024
ಬೆಳ್ತಂಗಡಿ: ಬೈಕಿಗೆ ಡಿಕ್ಕಿ ಹೊಡೆದ ಲಾರಿ; ಬೈಕ್ ಸವಾರ ಸಾವು.!-ಇಂಗ್ಲೆಂಡ್ನಿಂದ 1 ಲಕ್ಷ ಕಿಲೋಗ್ರಾಂಗಳಷ್ಟು ಚಿನ್ನ ಭಾರತಕ್ಕೆ ಮರಳಿ ತಂದ ಭಾರತ; ಖಜಾನೆಗೆ ರವಾನಿಸಿದ ಆರ್ಬಿಐ.!-ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ-ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಇಳಿಕೆ..!-ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸಲು ಜೂನ್ 12 ರವರೆಗೆ ಅವಕಾಶ ನೀಡಿದ ಹೈಕೋರ್ಟ್-ಸುಮಲತಾ ಅಂಬರೀಶ್ ಗೆ ವಿಧಾನ ಪರಿಷತ್‌ ಟಿಕೆಟ್ ಬಹುತೇಕ ಫಿಕ್ಸ್?-Pears: ಪಿಯರ್ಸ್ ಹಣ್ಣು ಮಾರುಕಟ್ಟೆಯಲ್ಲಿ ಎಷ್ಟು ಫೇಮಸೋ ಅಷ್ಟೇ ಆರೋಗ್ಯಕ್ಕೂ; ಇಲ್ಲಿದೆ ಮಾಹಿತಿ-ಗೃಹ ಸಚಿವ ಅಮಿತ್‌ ಶಾ ಪತ್ನಿ ಸೋನಲ್‌ ಶಾ ಜೊತೆಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ-ಗುದನಾಳದಲ್ಲಿ ಬರೋಬ್ಬರಿ 1kg ಚಿನ್ನ ಬಚ್ಚಿಟ್ಟ ಗಗನಸಖಿ!-ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

26ರ ಯುವತಿ ಜೊತೆ ಓಡಿ ಹೋದ 47ರ ಬಿಜೆಪಿ ನಾಯಕ..!

Twitter
Facebook
LinkedIn
WhatsApp
Twitter auctions Giant Neon Twitter Bird statue and other office furniture 1

ಲಕ್ನೋ: 47 ವರ್ಷದ ಬಿಜೆಪಿ ನಾಯಕನೊಬ್ಬ 26 ವರ್ಷದ ಸಮಾಜವಾದಿ ಪಕ್ಷದ (Samajwadi Party) ನಾಯಕನ ಮಗಳೊಂದಿಗೆ ಓಡಿ ಹೋದ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ.

ಬಿಜೆಪಿ (BJP) ನಾಯಕನನ್ನು ಆಶಿಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಆತನಿಗೆ ಈಗಾಗಲೇ ಮದುವೆಯಾಗಿದ್ದು (Marriage), ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಮಗನಿಗೆ 21 ವರ್ಷವಾಗಿದ್ದು, ಮಗಳಿಗೆ 7 ವರ್ಷ ವಯಸ್ಸಾಗಿದೆ.

ಮೂಲಗಳ ಪ್ರಕಾರ, ಎಸ್‍ಪಿ ನಾಯಕನ ಮಗಳಿಗೆ ಕುಟುಂಬವು ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆಯನ್ನು ನಿಗದಿಪಡಿಸಿತ್ತು. ಆದರೆ ಆಕೆ ಶುಕ್ಲಾ ಜೊತೆ ಸಂಬಂಧ ಹೊಂದಿದ್ದಳು. ಈ ಹಿನ್ನೆಲೆಯಲ್ಲಿ ಮದುವೆಯಿಂದ ತಪ್ಪಿಸಿಕೊಳ್ಳಲು ಶುಕ್ಲಾ ಜೊತೆ ಓಡಿಹೋಗಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಬಗ್ಗೆ ಬಿಜೆಪಿಯ ಹರ್ದೋಯ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಮಾತನಾಡಿ, ಆಶಿಶ್ ಶುಕ್ಲಾ ಅವರು ಪಕ್ಷದ ನಗರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂದು ಹೇಳಿದರು. ಘಟನೆ ಬೆಳಕಿಗೆ ಬಂದ ನಂತರ ಬಿಜೆಪಿಯು ಅಶಿಶ್ ಶುಕ್ಲಾನನ್ನು ಪಕ್ಷ ವಿರೋಧಿ ಚಟುವಟಿಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಉಚ್ಛಾಟಿಸಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ