26ರ ಯುವತಿ ಜೊತೆ ಓಡಿ ಹೋದ 47ರ ಬಿಜೆಪಿ ನಾಯಕ..!
ಲಕ್ನೋ: 47 ವರ್ಷದ ಬಿಜೆಪಿ ನಾಯಕನೊಬ್ಬ 26 ವರ್ಷದ ಸಮಾಜವಾದಿ ಪಕ್ಷದ (Samajwadi Party) ನಾಯಕನ ಮಗಳೊಂದಿಗೆ ಓಡಿ ಹೋದ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ.
ಬಿಜೆಪಿ (BJP) ನಾಯಕನನ್ನು ಆಶಿಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಆತನಿಗೆ ಈಗಾಗಲೇ ಮದುವೆಯಾಗಿದ್ದು (Marriage), ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಮಗನಿಗೆ 21 ವರ್ಷವಾಗಿದ್ದು, ಮಗಳಿಗೆ 7 ವರ್ಷ ವಯಸ್ಸಾಗಿದೆ.
ಮೂಲಗಳ ಪ್ರಕಾರ, ಎಸ್‍ಪಿ ನಾಯಕನ ಮಗಳಿಗೆ ಕುಟುಂಬವು ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆಯನ್ನು ನಿಗದಿಪಡಿಸಿತ್ತು. ಆದರೆ ಆಕೆ ಶುಕ್ಲಾ ಜೊತೆ ಸಂಬಂಧ ಹೊಂದಿದ್ದಳು. ಈ ಹಿನ್ನೆಲೆಯಲ್ಲಿ ಮದುವೆಯಿಂದ ತಪ್ಪಿಸಿಕೊಳ್ಳಲು ಶುಕ್ಲಾ ಜೊತೆ ಓಡಿಹೋಗಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಬಿಜೆಪಿಯ ಹರ್ದೋಯ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಮಾತನಾಡಿ, ಆಶಿಶ್ ಶುಕ್ಲಾ ಅವರು ಪಕ್ಷದ ನಗರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂದು ಹೇಳಿದರು. ಘಟನೆ ಬೆಳಕಿಗೆ ಬಂದ ನಂತರ ಬಿಜೆಪಿಯು ಅಶಿಶ್ ಶುಕ್ಲಾನನ್ನು ಪಕ್ಷ ವಿರೋಧಿ ಚಟುವಟಿಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಉಚ್ಛಾಟಿಸಿದೆ.