ಶನಿವಾರ, ಜೂನ್ 15, 2024
ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!-HSRP ನಂಬರ್ ಪ್ಲೇಟ್ ಅಳವಡಿಸುವ ಬಗ್ಗೆ ಮಹತ್ವದ ಅಪ್ಡೇಟ್; ಇಲ್ಲಿದೆ ಮಾಹಿತಿ-ಇಂದು ಯುಎಸ್ಎ ಮತ್ತು ಭಾರತ ತಂಡ ಮುಖಾಮುಖಿ; ಯಾರಿಗೆ ಗೆಲುವು..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆ.!-ಉಳ್ಳಾಲ ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸಮುದ್ರ ಪಾಲು; ಮೂವರ ರಕ್ಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

45ರ ವಯಸ್ಸಿಗೆ ಕೊನೆಯುಸಿರೆಳೆದ ಅಮೆರಿಕಾದ ಜನಪ್ರಿಯ ನಟಿ

Twitter
Facebook
LinkedIn
WhatsApp
WhatsApp Image 2023 01 30 at 2.17.16 PM

ವಾಷಿಂಗ್ಟನ್:‌ ಅಮೆರಿಕಾ ಟಿವಿ ಲೋಕದ ಜನಪ್ರಿಯ ನಟಿ ಅನ್ನಿ ವರ್ಶಿಂಗ್ (45) ಕ್ಯಾನ್ಸರ್‌ ನಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ನಟಿಯ ನಿಧನದ ಸುದ್ದಿಯನ್ನು ಕ್ಲೌಡ್ ಫಂಡಿಂಗ್‌ ಸಂಸ್ಥೆ ʼಗೋ ಫಂಡ್ ಮಿʼ ಹಾಗೂ ನಟಿಯ ಪತಿ ಸ್ಟೀಫನ್ ಫುಲ್‌ ಅಧಿಕೃತವಾಗಿ ಹೇಳಿದ್ದಾರೆ.

2020ರಲ್ಲಿ 45 ನೇ ವಯಸ್ಸಿನ ನಟಿ ಅನ್ನಿ ವರ್ಶಿಂಗ್ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದರು. ಯಾವ ಮಾದರಿಯ ಕ್ಯಾನ್ಸರ್‌ ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ. ಕ್ಯಾನ್ಸರ್‌ ಪರಿಣಾಮ ನಟಿ ಕೊನೆಯುಸಿರೆಳೆದಿದ್ದಾರೆ.

ANNIE WERSCHING FEATURE

2022ರಲ್ಲಿ ಟಿವಿ ಲೋಕಕ್ಕೆ ಕಾಲಿಟ್ಟ ಅನ್ನಿ ವರ್ಶಿಂಗ್ “ಸ್ಟಾರ್ ಟ್ರೆಕ್: ಎಂಟರ್‌ಪ್ರೈಸ್” ( Star Trek: Enterprise) ಎನ್ನುವ ಟಿವಿ ಸಿರೀಸ್‌ ನಲ್ಲಿ ಕಾಣಿಸಿಕೊಂಡು, 2009ರಲ್ಲಿ ಬಂದ” 24” ಟಿವಿ ಸಿರೀಸ್‌ ನಿಂದ ಜನಪ್ರಿಯತೆ ಪಡೆದುಕೊಂಡಿದ್ದರು. ದಿ ವ್ಯಾಂಪೈರ್ ಡೈರೀಸ್,’ ಮಾರ್ವೆಲ್‌ನ ‘ರನ್‌ಅವೇಸ್‌ ನಲ್ಲೂ ಕಾಣಿಸಿಕೊಂಡಿದ್ದರು.

“ದಿ ಲಾಸ್ಟ್ ಆಫ್ ಅಸ್” ಗೇಮ್‌ ಆಧಾರಿತ ಸಿರೀಸ್‌ ನಲ್ಲಿ ಟೆಸ್ ಪಾತ್ರವನ್ನು ಮಾಡಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ನಟಿಯ ನಿಧನಕ್ಕೆ ಹಾಲಿವುಡ್‌ ಲೋಕ ಕಂಬನಿ ಮಿಡಿದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ