41 ವರ್ಷದ ಮಲಯಾಳಂ ನಟಿ ಸುಬಿ ಸುರೇಶ್ ನಿಧನ
ಮಲಯಾಳಂ (Mollywood) ನಟಿ ಕಮ್ ನಿರೂಪಕಿ ಸುಬಿ ಸುರೇಶ್ (Subi Suresh) ಅವರು ವಿಧಿವಶರಾಗಿದ್ದಾರೆ. 41ನೇ ವಯಸ್ಸಿಗೆ ನಟಿ ಸುಬಿ ಅವರು ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ನಟಿ ಸುಬಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೆ ಕೊಚ್ಚಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಸುಬಿ ಸುರೇಶ್ ಅವರು ಮಿಮಿಕ್ರಿ ಕಲಾವಿದರಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸುಬಿ ನಿರೂಪಣೆಯ ಹಿಟ್ ಶೋ ಎವರ್ ಗ್ರೀನ್ ಕಾಮಿಡಿ ಕಾರ್ಯಕ್ರಮ `ಸಿನಿಮಾಲಾ’ಗೆ ಎಂಟ್ರಿ ಕೊಟ್ಟ ನಂತರ ಮನೆಮಾತಾಗಿದ್ದರು. ಈ ಕಾರ್ಯಕ್ರಮದ ಜನಪ್ರಿಯತೆ ಸುಬಿಗೆ ಸಿನಿಮಾಗಳಿಂದ (Films) ಅವಕಾಶಗಳು (Offer) ಹರಿದು ಬರಲು ಪ್ರಾರಂಭಿಸಿತು. ಸಿನಿಮಾಗಳಲ್ಲೂ ಕೈತುಂಬ ಪಾತ್ರ ಸಿಕ್ಕಿತು. ಅವರು ‘ಹ್ಯಾಪಿ ಹಸ್ಬೆಂಡ್ಸ್’, ‘ಕಂಕಣ ಸಿಂಹಾಸನಂ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದೀಗ ನಟಿ ಸುಬಿ ಲಿವಿರ್ ಸಂಬಂಧಿ ಕಾಯಿಲೆಗೆ ಸೂಕ್ತ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಟಿ ನಿಧನರಾಗಿದ್ದಾರೆ. ಸುಬಿ ಅವರ ನಿಧನಕ್ಕೆ ಅಭಿಮಾನಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.