4 ವರ್ಷದ ಬಾಲಕಿ ನಾಲೆಗೆ ಬಿದ್ದು ಮೃತ್ಯು!
Twitter
Facebook
LinkedIn
WhatsApp
ಹೈದರಾಬಾದ್: ಸಹೋದರನೊಂದಿಗೆ ಹಾಲು ತರಲು ಅಂಗಡಿ ಹೋಗಿದ್ದ ಬಾಲಕಿ ಆಕಸ್ಮಿಕವಾಗಿ ನಾಲೆಗೆ ಬಿದ್ದು ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ಶನಿವಾರ (ಎ.29 ರಂದು) ನಡೆದಿದೆ.
ಕಲಸಿಗುಡಾ ನಿವಾಸಿ ಮೌನಿಕಾ (4) ಮೃತ ಬಾಲಕಿ.
ಶನಿವಾರ ಬೆಳಗ್ಗೆ ಮೌನಿಕಾ ತನ್ನ ಸಹೋದರನೊಂದಿಗೆ ಹಾಲಿನ ಪ್ಯಾಕೆಟ್ ಖರೀದಿಸಲು ಅಂಗಡಿಗೆ ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ ರಸ್ತೆ ಬದಿಯ ನಾಲೆಗೆ ಬಿದ್ದಿದ್ದಾಳೆ. ಈಜು ಬಾರದ ಕಾರಣ ಆಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾಳೆ. ಬಾಲಕಿಯ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಡಿಆರ್‌ಎಫ್ ತಂಡ ಮತ್ತು ಸ್ಥಳೀಯ ಪೊಲೀಸರು ಭಾರಿ ಶೋಧವನ್ನು ಆರಂಭಿಸಿದರು ಮತ್ತು ಅಂತಿಮವಾಗಿ ಶವವನ್ನು ಪತ್ತೆಹಚ್ಚಿ ಹೊರತೆಗೆದರು. ಜಿಎಚ್‌ಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೌನಿಕಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.