4 ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಯುವತಿ ಆತ್ಮಹತ್ಯೆ!
Twitter
Facebook
LinkedIn
WhatsApp
ಕೋಲಾರ: ನವ ವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಂಗರಸನಹಳ್ಳಿಯಲ್ಲಿ ನಡೆದಿದೆ.
ಎಂ.ಸುಮಾ(21) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ (Newly Married Woman). ಸದ್ಯ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಅರೋಪ ಕೇಳಿಬರುತ್ತಿದೆ.
ಎಂ.ಹೊಸಹಳ್ಳಿ ನಿವಾಸಿ ಸುಮಾಳನ್ನ 4 ತಿಂಗಳ ಹಿಂದೆಯಷ್ಟೆ ಗಂಗರಸನಹಳ್ಳಿಯ ಸುರೇಶ್ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಎರಡು ದಿನದ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಾ ಇಂದು ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ (Kolar Rural Police Station) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.