3 ನಿಮಿಷ ನಟಿಸಿದ್ದಕ್ಕೆ 3 ಕೋಟಿ ಸಂಭಾವನೆ ಪಡೆದ ‘ಐರಾವತ’ ನಟಿ
ಕನ್ನಡದ ‘ಐರಾವತ’ (Airavatha Film) ಬೆಡಗಿ ಊರ್ವಶಿ ರೌಟೇಲಾ (Urvashi Rautela) ಅವರು ಸಾಲು ಸಾಲು ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂಭಾವನೆ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ತೆಲುಗಿನ ಸಿನಿಮಾದಲ್ಲಿ ಕೇವಲ 3 ನಿಮಿಷ ನಟಿಸಿದ್ದಕ್ಕೆ ದುಬಾರಿ ಸಂಭಾವನೆ ಪಡೆದಿದ್ದಾರೆ. ಅದ್ಯಾವ ಸಿನಿಮಾ? ಏನ್ ಕಥೆ ಇಲ್ಲಿದೆ ಡಿಟೈಲ್ಸ್
ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಬೋಯಪತಿ ಶ್ರೀನು- ರಾಮ್ ಪೋತಿನೇನಿ (Ram Potineni) ನಟನೆಯ ಸಿನಿಮಾದಲ್ಲಿ ಮಾದಕ ಬೆಡಗಿ ಊರ್ವಶಿ ರೌಟೇಲಾ ನಟಿಸಿದ್ದಾರೆ. ಕೇವಲ 3 ನಿಮಿಷದ ನಟನೆಗೆ 3 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ. ಅಂದರೆ, ಇದರರ್ಥ ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.
ಈ ಚಿತ್ರಕ್ಕೆ ಮೂರೇ ನಿಮಿಷಕ್ಕೆ 3 ಕೋಟಿ ಸಂಭಾವನೆ ಪಡೆಯುತ್ತಾ ಇರೋದು ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ‘ವಾಲ್ತೇರ್ ವೀರಯ್ಯ’ ಚಿತ್ರದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದರು. ಈ ಸಾಂಗ್ ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಈ ಹಾಡಿಗೆ ಹೆಜ್ಜೆ ಹಾಕಲು ನಟಿ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಈಗ ರಾಮ್ ಪೋತಿನೇನಿ ಸಿನಿಮಾದ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ.
ಊರ್ವಶಿ ರೌಟೇಲಾ ಅವರು ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಚಿತ್ರಕ್ಕೂ ದುಬಾರಿ ಸಂಭಾವನೆಯನ್ನೇ ನಟಿ ಡಿಮ್ಯಾಂಡ್ ಮಾಡಿದ್ದಾರೆ. ಒಟ್ನಲ್ಲಿ ನಾಯಕಿಯಾಗಿ ಬೇಡಿಕೆ ಇರೋದಕ್ಕಿಂತ ಐಟಂ ಹಾಡಿಗೆ ಹೆಜ್ಜೆ ಹಾಕಲು ಐರಾವತ ಸುಂದರಿಗೆ ಬೇಡಿಕೆ ಜಾಸ್ತಿಯಾಗಿದೆ.
ಮತ್ತೆ ತಂದೆ ಖುಷಿಯಲ್ಲಿ ‘ಅಗ್ನಿಸಾಕ್ಷಿ’ ವಿಜಯ್ ಸೂರ್ಯ
ಕಿರುತೆರೆಯ ಚಾಕ್ಲೇಟ್ ಹೀರೋ ವಿಜಯ್ ಸೂರ್ಯ (Vijay Suriya) ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಗ್ನಿಸಾಕ್ಷಿ (Agnisakshi) , ನಮ್ಮ ಲಚ್ಚಿ ಸೀರಿಯಲ್ ಹೀರೋ ವಿಜಯ್ ಸೂರ್ಯ ಅವರು ಮತ್ತೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಪತ್ನಿ ಚೈತ್ರಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಲಕ್ಷ್ಮಿ ಬಾರಮ್ಮ, ಅಗ್ನಿಸಾಕ್ಷಿ, ಖ್ಯಾತಿ ವಿಜಯ್ ಸೂರ್ಯ ಸದ್ಯ ‘ನಮ್ಮ ಲಚ್ಚಿ’ (Namma Lacchi) ಮತ್ತು ತೆಲುಗಿನ ‘ಕೃಷ್ಣಮ್ಮ ಕಲ್ಪಿಂಡಿ’ ಸೀರಿಯಲ್ನಲ್ಲಿ ಹೀರೋ ಆಗಿ ಮಿಂಚ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ಅಂತಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ವಿಜಯ್ ಸೂರ್ಯ- ಚೈತ್ರಾ ಶೀನಿವಾಸ್ (Chaithra Srinivas) ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಮ್ಮನ ಆಸೆಯಂತೆ ಸಾಫ್ಟ್ವೇರ್ ಇಂಜಿನಿಯರ್ ಚೈತ್ರಾ ಅವರನ್ನ ವಿಜಯ್ ಮದುವೆಯಾದರು. 2020ರಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡರು. ಈಗ ಜೂನ್ 2ರಂದು ಎರಡನೇ ಗಂಡು ಮಗುವನ್ನ ಬರಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಜೂನ್ನಲ್ಲಿ ಎರಡನೇ ಮಗುವಿನ ಆಗಮನವಾಗಿದೆ.
ಮೊದಲ ಮಗನಿಗೆ ಸೋಹೆನ್ (Sohan) ಎಂದು ಹೆಸರಿಟ್ಟಿದ್ದರೆ, ಎರಡನೇ ಪುತ್ರನಿಗೆ ಕಾರ್ತಿಕೇಯ ಸೂರ್ಯ ಎಂದು ನಾಮಕರಣ ಮಾಡಿದ್ದಾರೆ. ಒಟ್ನಲ್ಲಿ ಮುದ್ದು ಮಗನ ಆಗಮನದಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಎರಡನೇ ಮಗು ಹುಟ್ಟಿದ ಸಂದರ್ಭದಲ್ಲಿ ವಿಜಯ್, ಹೈದರಾಬಾದ್ ಶೂಟಿಂಗ್ನಲ್ಲಿ ಬ್ಯುಸಿಯಿದ್ದರು. ಈಗ ಬೆಂಗಳೂರಿಗೆ ವಾಪಾಸ್ ಆಗಿದ್ದು, ಮೊದಲ ಮಗನ ಜೊತೆಗಿದ್ದಾರೆ. ಪತ್ನಿ ಚೈತ್ರಾ ಎರಡನೇ ಕೂಸು ಕಾರ್ತಿಕೇಯ ಜೊತೆ ತವರು ಮನೆಯಲ್ಲಿದ್ದಾರೆ.