ಚೆಕ್ ರೂಪದಲ್ಲಿ 3.5 ಲಕ್ಷ ರೂ. ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ದಾಳಿ; ಅಧಿಕಾರಿ ಅರೆಸ್ಟ್..!
ಬೆಂಗಳೂರು: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವಸಂತ್ ದಾಸನಪುರದ ಕಂದಾಯ ನಿರೀಕ್ಷಕ (Revenue Inspector) ಮತ್ತು ಖಾಸಗಿ ಚಾಲಕನೊಬ್ಬನನ್ನು ಲೋಕಾಯುಕ್ತ (Lokayukta) ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಅಧಿಕಾರಿಯನ್ನು ವಸಂತ್ ಎಂದು ಗುರುತಿಸಲಾಗಿದೆ. ಆತ ಈ ಮೊದಲೇ ಚೆಕ್‍ನಲ್ಲಿ 4 ಲಕ್ಷ ರೂ. ಹಣವನ್ನು ಚೆಕ್‍ನಲ್ಲಿ ಪಡೆದಿದ್ದ ಎಂದು ತಿಳಿದು ಬಂದಿದೆ. ಬುಧವಾರ ಖಾಸಗಿ ಹೋಟೆಲ್‍ನಲ್ಲಿ 3.5 ಲಕ್ಷ ರೂ. ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಖಾತೆ ಪೋಡಿ ಮಾಡಿ ಕೊಡಲು 28 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ.
ವಿಚಾರಣೆ ವೇಳೆ ಹಣವನ್ನು ಮನೆಯಲ್ಲಿ ಇಟ್ಟಿರುವುದಾಗಿ ವಸಂತ್ ಹೇಳಿದ್ದಾನೆ. ಲೋಕಾಯುಕ್ತ ಅಧಿಕಾರಿಗಳು ಆರ್‍ಐ ಮನೆಯಲ್ಲಿ ಶೋಧ ನಡೆಸಿದ ವೇಳೆ 9 ಲಕ್ಷ ರೂ. ಹಣ ಪತ್ತೆಯಾಗಿದೆ. ಆ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರ ಲೋಕಾಯುಕ್ತ ಎಸ್‍ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಎಟಿಎಂ ಕೊರೆದು 20 ಲಕ್ಷ ಹಣ ದೋಚಿದ ಕಳ್ಳರು
ಚಿಕ್ಕೋಡಿ: ಎಸ್‍ಬಿಐ ಬ್ಯಾಂಕ್‍ನ (SBI Bank) ಎಟಿಎಂ (ATM) ಕೊರೆದು 20 ಲಕ್ಷ ರೂ.ಗೂ ಹೆಚ್ಚಿನ ಹಣ ದೋಚಿದ ಘಟನೆ ನಗರದಲ್ಲಿ (Chikkodi) ನಡೆದಿದೆ.
ಅಂಬೇಡ್ಕರ್ ನಗರದ ಬಳಿ ಇರುವ ಎಟಿಎಂನ್ನು ಕಿಡಿಗೇಡಿಗಳು ಕಟರ್‌ನಿಂದ ಕಟ್ ಮಾಡಿದ್ದಾರೆ. ಬಳಿಕ ಅದರಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಇದಾದ ಬಳಿಕ ನಗರದ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‍ನ ಎಟಿಎಂ ದೋಚಲು ಯತ್ನಿಸಿದ್ದಾರೆ. ಹಣ ತೆಗೆಯಲು ಸಾಧ್ಯವಾಗದ ಕಾರಣ ಅಲ್ಲಿಂದ ವಾಪಾಸ್ ಆಗಿದ್ದಾರೆ.
ಕಳ್ಳತನವಾದ ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್‍ಎಸ್‍ಎಲ್ ಸಿಬ್ಬಂದಿ ಕೂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ಎಟಿಎಂನಲ್ಲಿ ಎಷ್ಟು ಹಣವಿತ್ತು ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.