ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

2ನೇ ಮದುವೆ ಸುದ್ದಿ- ಹಳೆಯ ಫೋಟೋ ವೈರಲ್; ಮತ್ತೆ ಒಂದಾಗಲಿದ್ದಾರ ಈ ಜೋಡಿ?

Twitter
Facebook
LinkedIn
WhatsApp
2ನೇ ಮದುವೆ ಸುದ್ದಿ- ಹಳೆಯ ಫೋಟೋ ವೈರಲ್; ಮತ್ತೆ ಒಂದಾಗಲಿದ್ದಾರ ಈ ಜೋಡಿ?

ಟಾಲಿವುಡ್ (Tollywood) ನಟ ನಾಗಚೈತನ್ಯ (Nagachaitanya) 2ನೇ ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಸಮಂತಾ ಖಾಸಗಿ ಖಾತೆಯಲ್ಲಿ ನಾಗಚೈತನ್ಯ ಜೊತೆಗಿನ ಮದುವೆ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಇಬ್ಬರ ಮದುವೆಯ ಹಳೆಯ ಫೋಟೋ ವೈರಲ್ ಆಗುತ್ತಿದ್ದಂತೆ ಈ ಜೋಡಿ ಮತ್ತೆ ಒಂದಾಗಲಿದ್ದಾರೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.

178

ಖ್ಯಾತ ಉದ್ಯಮಿ ಪುತ್ರಿ ಜೊತೆ ನಾಗಚೈತನ್ಯ 2ನೇ ಮದುವೆಯಾಗುತ್ತಿದ್ದಾರೆ. ಆದರೆ ವಧು ನಟಿ ಶೋಭಿತಾ ಜೊತೆ ಅಲ್ಲ ಎಂದು ಹಬ್ಬಿತ್ತು. ಈ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸ್ಯಾಮ್ ಮತ್ತು ಚೈ ಮದುವೆ ಫೋಟೋ ಮತ್ತೆ ಸಮಂತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಣಿಸಿಕೊಂಡಿದೆ. ಫ್ಯಾನ್ಸ್‌ ಈ ಪೋಸ್ಟ್ ನೋಡ್ತಿದ್ದಂತೆ ಸಮಂತಾ- ಚೈತನ್ಯ ಮತ್ತೆ ಜೊತೆಯಾಗುತ್ತಾರೆ ಎಂದು ಸುದ್ದಿಯಾಗುತ್ತಿದೆ.‌

ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದ ಈ ಜೋಡಿ, 2021ರಲ್ಲಿ ಸಮಂತಾ- ನಾಗಚೈತನ್ಯ ಡಿವೋರ್ಸ್ (Divorce) ಪಡೆದುಕೊಂಡರು. ಆಗಲೇ ಮಾಜಿ ಪತಿ ಜೊತೆಗಿನ ಒಂದೊಂದೇ ಫೋಟೋಗಳನ್ನ ಸಮಂತಾ ಇನ್ಸ್ಟಾಗ್ರಾಂನಲ್ಲಿ ಮರೆ ಮಾಚಿದ್ರು. ನಟಿಯ ನಡೆ ನೋಡಿ ಫ್ಯಾನ್ಸ್ ಡಿವೋರ್ಸ್ ಸಂಶಯ ವ್ಯಕ್ತಪಡಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಡಿವೋರ್ಸ್ ಆಗಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದ್ದರು.

ಅಂದು ಕಣ್ಮರೆಯಾಗಿದ್ದ ಫೋಟೋಗಳು ಈಗ ಮತ್ತೆ ಸ್ಯಾಮ್‌ ಖಾತೆಯಲ್ಲಿ ಕಾಣಿಸಿಕೊಂಡಿರುವುದರಿಂದ ಈ ಜೋಡಿ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. 

‘ಕಲ್ಕಿ’ ಸಿನಿಮಾ ಫೋಟೋ ಲೀಕ್: ಗಂಭೀರ ಪ್ರಕರಣ ಎಂದ ನಿರ್ಮಾಪಕರು

ತ್ತೀಚೆಗೆ ಪ್ರಭಾಸ್ ನಟನೆಯ ಕಲ್ಕಿ (Kalki) ಸಿನಿಮಾದ ಫೋಟೋವೊಂದು ಲೀಕ್ ಆಗಿತ್ತು. ಸಿನಿಮಾದ ಪ್ರಮುಖ ಗೆಟಪ್ ಒಳಗೊಂಡಿದ್ದ ಆ ಫೋಟೋವನ್ನು ಯಾರು ಲೀಕ್ ಮಾಡಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಲೆಕೆಡಿಸಿಕೊಂಡಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ಹೀಗೆ ಪಾತ್ರಗಳ ಬಗ್ಗೆ ರಿವಿಲ್ ಮಾಡುತ್ತಿರುವುದು ಕೋಪ ತರಿಸಿತ್ತು. ಇದೀಗ ನಿರ್ಮಾಪಕರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

ಕಲ್ಕಿ ಸಿನಿಮಾದ ವಿಎಫ್ಎಕ್ಷ್  ಮಾಡುತ್ತಿರುವ ಸಂಸ್ಥೆಯೇ ಫೋಟೋವನ್ನು ಲೀಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರು ಪೊಲೀಸ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಭಾರೀ ಬಜೆಟ್ ನಲ್ಲಿ ರೆಡಿ ಆಗಿರುವ ಕಲ್ಕಿ ಚಿತ್ರಕ್ಕೆ ಈ ಹಿಂದೆ ಪ್ರಾಜೆಕ್ಟ್ ಕೆ (Project K) ಹೆಸರಿನಿಂದ ಕರೆಯಲಾಗುತ್ತಿತ್ತು. ಸಿನಿಮಾದ ಗ್ಲಿಂಪ್ಸ್  (Glimpse) ರಿಲೀಸ್ ದಿನ ಅಸಲಿ ಹೆಸರನ್ನು ಅನೌನ್ಸ್ ಮಾಡಲಾಯಿತು. ಈ ಗ್ಲಿಂಪ್ಸ್ ನಲ್ಲಿ ಸಾಕಷ್ಟು ಸಂಗತಿಗಳನ್ನು ನಿರ್ದೇಶಕರು ಹೇಳಿದ್ದರು. 

ಈ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಪ್ರಭಾಸ್ ಜೊತೆ ಕಮಲ್ ಹಾಸನ್ (Kamal Haasan),  ರಾಣಾ ದಗ್ಗುಬಾಟಿ ಈಗಾಗಲೇ ಅಮೆರಿಕಾಗೆ ಪ್ರವಾಸ ಬೆಳೆಸಿದ್ದಾರೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾದ ಫಸ್ಟ್ ಲುಕ್ (First Look) ಬೇರೆ ಹಂತದಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

`ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ನಲ್ಲಿರುವ ದೀಪಿಕಾ ಪಡುಕೋಣೆ (Deepika Padukone) `ಪ್ರಾಜೆಕ್ಟ್ ಕೆ’ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. `ಪಠಾಣ್’ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ