ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಜಧಾನಿಯಲ್ಲಿ ನಿನ್ನೆ ಒಂದೇ ದಿನ ಪಟಾಕಿ ಸಿಡಿತದಿಂದ 29 ಜನರ ಕಣ್ಣಿಗೆ ಗಾಯ!

Twitter
Facebook
LinkedIn
WhatsApp
ರಾಜ್ಯದಾನಿಯಲ್ಲಿ ನಿನ್ನೆ ಒಂದೇ ದಿನ ಪಟಾಕಿ ಸಿಡಿತದಿಂದ 29 ಜನರ ಕಣ್ಣಿಗೆ ಗಾಯ!

ಬೆಂಗಳೂರು: ದೀಪಾವಳಿ ಹಬ್ಬದ (Deepavali 2023) ಮೊದಲ ದಿನವಾದ ಭಾನುವಾರ ಒಂದೇ ದಿನ ಪಟಾಕಿ ಸಿಡಿದು ಕಣ್ಣಿಗೆ ಗಾಯವಾದ (Firecracker injury) 29 ಪ್ರಕರಣಗಳು ದಾಖಲಾಗಿವೆ.

ನಿನ್ನೆ ಒಂದೇ ದಿನ 29ಕ್ಕೂ ಹೆಚ್ಚು ಪಟಾಕಿ ಸಿಡಿತದಿಂದ ಗಾಯ ಪ್ರಕರಣಗಳು ದಾಖಲಾಗಿದ್ದು, ನಾರಾಯಣ ನೇತ್ರಾಲಯದಲ್ಲಿ (Narayana netralaya) 22 ಮಂದಿ ಹಾಗೂ ಮಿಂಟೋ ಆಸ್ಪತ್ರೆಯಲ್ಲಿ 7 ಮಂದಿ ಚಿಕಿತ್ಸೆಗಾಗಿ ಧಾವಿಸಿದ್ದಾರೆ.

ನಾರಾಯಣ ನೇತ್ರಾಲಯದ 22 ಪ್ರಕರಣಗಳಲ್ಲಿ 10 ಮಂದಿಗೆ ಮೇಜರ್ ಗಾಯಗಳಾಗಿವೆ. ಸರ್ಜರಿಯ ಅಗತ್ಯವಿದೆ. 12 ಜನರಿಗೆ ಮೈನರ್ ಇಂಜುರಿಯಾಗಿದೆ. 4 ಮಕ್ಕಳು ಹಾಗೂ ಉಳಿದ ವಯಸ್ಕರು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ (Minto hospital) 7 ಪ್ರಕರಣ ದಾಖಲಾಗಿದ್ದು, ಇಬ್ಬರಿಗೆ ಮೇಜರ್ ಇಂಜುರಿ; ಉಳಿದ 5 ಕೇಸ್‌ಗಳು ಒಪಿಡಿಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. 10 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕನ ಕಣ್ಣಿಗೆ ಗಂಭೀರ ಗಾಯವಾಗಿದೆ. ಇಬ್ಬರಿಗೂ ಸರ್ಜರಿ ಮಾಡುವ ಅವಶ್ಯಕತೆ ಇದೆ ಎಂದು ಡಾಕ್ಟರ್ ಮಾಹಿತಿ ನೀಡಿದ್ದಾರೆ.

ಪಟಾಕಿ ಹಚ್ಚುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಇಂಥ ಅವಘಡಗಳಾಗುತ್ತಿವೆ. ಪಟಾಕಿಯ ಮೇಲೆ ಬಾಗಿ ಹಚ್ಚುವುದು ಅಥವಾ ಮೈಗೆ ಸಮೀಪದಲ್ಲಿ ಹಿಡಿದು ಹಚ್ಚುವುದು, ನೈಲಾನ್‌ ಬಟ್ಟೆಗಳನ್ನ ಧರಿಸಿಕೊಂಡಿರುವುದು ಇತ್ಯಾದಿಗಳು ಅಪಾಯಕಾರಿಗಳಾಗಿವೆ.

ಬೆಂಗಳೂರು: ಸೈಬರ್ ಕ್ರೈಂ ಕಥೆ ಹೇಳಿ ಉದ್ಯಮಿ ಖಾತೆಯಿಂದಲೇ ಹಣ ಲಪಟಾಯಿಸಿದ ಖದೀಮ

ಬೆಂಗಳೂರು, ನ.13: ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್ ಕಾರ್ಡ್ (Sim Card) ಅನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ನಂಬಿಸಿ ಸೈಬರ್ ವಂಚಕರು (Cyber Crime) ಉದ್ಯಮಿಯೊಬ್ಬರನ್ನು ವಂಚಿಸಿ ಅವರ ಬ್ಯಾಂಕ್ ಖಾತೆಯಿಂದ 76,000 ರೂ. ಲಪಟಾಯಿಸಿರುವ ಘಟನೆ ನಡೆದಿದೆ. ಈ ಸಂಬಂಧ ಕೆಂಪಾಪುರದ ಭುವನೇಶ್ವರಿನಗರದ ನಿವಾಸಿ ರಮೇಶ್ ದ್ರುವರಾವ್ ದೇಶಪಾಂಡೆ (55) ಅವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಉದ್ಯಮಿ ರಮೇಶ್ ಅವರಿಗೆ ನವೆಂಬರ್ 6 ರಂದು ಬೆಳಿಗ್ಗೆ 11.30ರ ಸುಮಾರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು ತಮ್ಮ ಆಧಾರ್ ಕಾರ್ಡ್ ದಾಖಲೆಯನ್ನು ಬಳಸಿಕೊಂಡು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್ ಅನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಮತ್ತು ಈ ರೀತಿ ಅಕ್ರಮ ಎಸಗುತ್ತಿರುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ರಮೇಶ್ ಅವರು, ತಮ್ಮ ಹೆಸರು ಬಳಸಿಕೊಂಡು ನಡೆಸಲಾಗುತ್ತಿರುವ ಅಕ್ರಮ ಚಟುವಟಿಕೆಗಳೇನು ಎಂದು ಕೇಳಿದಾಗ, ವ್ಯಕ್ತಿ ಕಾಲ್ ಕಟ್ ಮಾಡಿದ್ದಾನೆ.

ಸಡನ್ ಆಗಿ ಕಾಲ್ ಕಟ್ಟಾಗುತ್ತಿದ್ದಂತೆ ರಮೇಶ್ ಗಾಬರಿಗೊಂಡು ಇಂಟರ್‌ನೆಟ್‌ನಲ್ಲಿ TRAI ಕಸ್ಟಮರ್ ಕೇರ್ ಸಪೋರ್ಟ್ ನಂಬರ್‌ಗಾಗಿ ಹುಡುಕಿದ್ದಾರೆ. ಆಗ ವೆಬ್‌ಸೈಟ್‌ನಲ್ಲಿ 9330907238 ಎಂಬ ನಂಬರ್ ಸಿಕ್ಕಿದೆ. ಬಳಿಕ ರಮೇಶ್ ಈ ನಂಬರ್‌ಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿದ ವ್ಯಕ್ತಿ ತಮ್ಮನ್ನು TRAI ಅಧಿಕಾರಿ ಎಂದು ಪರಿಚಯಿಸಿಕೊಂಡು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮತ್ತು ಸಂಪರ್ಕದಲ್ಲಿದ್ದು ನೀಡುವ ಸೂಚನೆಗಳನ್ನು ಅನುಸರಿಸಲು ತಿಳಿಸಿದ್ದಾರೆ. ವಾಟ್ಸಾಪ್‌ನಲ್ಲಿ ಫೈಲ್ ಕಳುಹಿಸುವುದಾಗಿ ಹೇಳಿ ಅದರಲ್ಲಿ ವಿವರಗಳನ್ನು ಭರ್ತಿ ಮಾಡಲು ತಿಳಿಸಿದರು ಎಂದು ರಮೇಶ್ ಅವರು ತಿಳಿಸಿದ್ದಾರೆ.

ಅವರು ಕಳುಹಿಸಿದ ಲಿಂಕ್‌ಗಳ ಮೇಲೆ ನಾನು ಕ್ಲಿಕ್ ಮಾಡಿದ್ದೇನೆ ಮತ್ತು ಅವುಗಳು ಎರಡು ರಿಮೋಟ್-ಆಕ್ಸೆಸ್ ಅಪ್ಲಿಕೇಶನ್‌ಗಳಾಗಿವೆ – ‘coustomersupportoctober11.apk’ ಮತ್ತು ‘customerservice.apk’. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ, ಅವರು ನನ್ನೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದರು. ನಾನು ಯಾವುದೇ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲಿಲ್ಲ. ನಂತರ ನನ್ನ ಬ್ಯಾಂಕ್ ಖಾತೆಯಿಂದ ರೂ 39,000 ಡೆಬಿಟ್ ಆಗಿದೆ ಎಂಬ SMS ಬಂತು” ಸೈಬರ್ ಖದೀಮರು ನನ್ನ ಖಾತೆಯಿಂದ ಹಣವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ನನಗೆ ಅರಿವಾಯಿತು. ನಾನು ತಕ್ಷಣ ಕಾಲ್ ಕಟ್ ಮಾಡಿದೆ. ನನ್ನ ಬ್ಯಾಂಕ್‌ನ ತುರ್ತು ಸಹಾಯವಾಣಿಗೆ ಕರೆ ಮಾಡಿ ಮತ್ತು ದುಷ್ಕರ್ಮಿಗಳು ನನ್ನ ಖಾತೆಯಿಂದ ಹಣವನ್ನು ಅವರ ಖಾತೆಗೆ ವರ್ಗಾಯಿಸುತ್ತಿದ್ದಾರೆ ಎಂದು ಅವರಿಗೆ ತಿಳಿಸಿದೆ. ನನ್ನ ಖಾತೆಯನ್ನು ತಕ್ಷಣವೇ ಬ್ಲಾಕ್ ಮಾಡಿ ಎಂದು ನಾನು ಹೇಳಿದೆ, ಆದರೆ ಹೆಲ್ಪ್‌ಲೈನ್ ಕಾರ್ಯನಿರ್ವಾಹಕರು ತಡಮಾಡುತ್ತಿದ್ದರು, ನಾನು ಖಾತೆದಾರ ಎಂದು ಪರಿಶೀಲಿಸಲು ನನಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು.

ನಾನು ಅವರಿಗೆ ತುರ್ತು ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದೆ, ಆದರೆ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲು ಕೆಲವು ನಿಮಿಷಗಳನ್ನು ತೆಗೆದುಕೊಂಡರು. ನಾನು ಕಾರ್ಯನಿರ್ವಾಹಕರೊಂದಿಗೆ ಮಾತನಾಡುವಾಗ, ದುಷ್ಕರ್ಮಿಗಳು ಇನ್ನೂ ಎರಡು ಬಾರಿ ನನ್ನ ಖಾತೆಯಿಂದ ಹಣ ದೋಚಿದ್ದಾರೆ. ಒಮ್ಮೆ 27,000 ಮತ್ತು ಇನ್ನೊಂಮ್ಮೆ ರೂ 10,000 ಕಟ್ ಆಗಿದೆ ಎಂದು ರಮೇಶ್ ಅವರು ವಿವರಿಸಿದ್ದಾರೆ. ಇನ್ನು ಬ್ಯಾಂಕ್ ಖಾತೆಯಲ್ಲಿನ ಮೊತ್ತವನ್ನು ಸ್ಥಗಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ