27 ಕೋಟಿ ದಾಖಲೆ ಮೊತ್ತಕ್ಕೆ ರಿಷಬ್ ಪಂತ್ ಲಕ್ನೋ ಪಾಲು; ಆರ್‌ಸಿಬಿ ಅಭಿಮಾನಿಗಳಿಗೆ ಆಘಾತ..!

ಐಪಿಎಲ್ 2025 ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ದಾಖಲೆ ಬರೆದಿದ್ದಾರೆ. ಬರೋಬ್ಬರಿ 27 ಕೋಟಿಗೆ ಲಕ್ನೋ ಸೂಪರ್‌ಜೈಂಟ್ಸ್ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್‌ನಲ್ಲೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
ರಿಷಬ್‌ಗಾಗಿ ಲಕ್ನೋ ಫ್ರಾಂಚೈಸಿ ಮೊದಲು ಬಿಡ್ ಮಾಡಿತು. ಬಳಿಕ ಆರ್‌ಸಿಬಿ, ಎಸ್‌ಆರ್‌ಹೆಚ್ ಬಿಡ್ ಮಾಡಿದವು. 20.75 ಕೋಟಿಗೆ ಲಕ್ನೋ ಬಿಡ್ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಬಳಸುವುದಾಗಿ ಹೇಳಿತು.
ಎಲ್‌ಎಸ್‌ಜಿ ಬಿಡ್ ಮೊತ್ತವನ್ನು 27 ಕೋಟಿಗೆ ಏರಿಸಿದ್ದರಿಂದ ಡೆಲ್ಲಿ ಹಿಂದೆ ಸರಿಯಿತು. ಅಂತಿಮವಾಗಿ ಪಂತ್ ದಾಖಲೆ ಮೊತ್ತಕ್ಕೆ ಲಕ್ನೋ ಪಾಲಾದರು.
ಐಪಿಎಲ್ ವೃತ್ತಿ ಜೀವನದಲ್ಲಿ ಈವರೆಗೆ 107 ಪಂದ್ಯಗಳನ್ನಾಡಿರುವ ರಿಷಬ್ ಪಂತ್ 3,284 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳು ಸೇರಿವೆ.
ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿದ್ದರು. ಟೀಂ ಇಂಡಿಯಾ ಸೋತ ಹೊರತಾಗಿಯೂ ಪಂತ್ ಅವರ ಬ್ಯಾಟಿಂಗ್ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಸಹಯವಾಗಿಯೇ ಜನಪ್ರಿಯತೆ ಹೆಚ್ಚಿಸಿತ್ತು.
ಆರ್‌ಸಿಬಿ ಅಭಿಮಾನಿಗಳಿಗೆ ಆಘಾತ..!
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಹುಲ್ರನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ಪರ ಕಣಕ್ಕಿಳಿಯಲು 17 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ರಾಹುಲ್, ಇದೀಗ ಡೆಲ್ಲಿ ಪರ 3 ಕೋಟಿ ನಷ್ಟದಲ್ಲಿ ಅಂದರೆ 14 ಕೋಟಿ ರೂಗೆ ಬ್ಯಾಟ್ ಬೀಸಲಿದ್ದಾರೆ.
ಕಳೆದ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್, ಇದೀಗ ಮುಂದಿನ ಆವೃತ್ತಿಯಿಂದ ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ. ರಾಹುಲ್ ಆರ್‌ಸಿಬಿ ಪರ ಕಣಕ್ಕಿಳಿಯುತ್ತಾರೆ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆಯಾಗಿದೆ. ಏಕೆಂದರೆ ರಾಹುಲ್ರನ್ನು ಖರೀದಿಸಲು ಆರ್‌ಸಿಬಿ ಮನಸು ಮಾಡಲಿಲ್ಲ. ಹೀಗಾಗಿ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಹುಲ್ರನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ಪರ ಕಣಕ್ಕಿಳಿಯಲು 17 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ರಾಹುಲ್, ಇದೀಗ ಡೆಲ್ಲಿ ಪರ 3 ಕೋಟಿ ನಷ್ಟದಲ್ಲಿ ಅಂದರೆ 14 ಕೋಟಿ ರೂಗೆ ಬ್ಯಾಟ್ ಬೀಸಲಿದ್ದಾರೆ.
ಕೆಎಲ್ ರಾಹುಲ್ ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಆದರೆ 2022 ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ರಾಹುಲ್, ಒಮ್ಮೆಯೂ ತಂಡಕ್ಕೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಈ ಕಾರಣದಿಂದಾಗಿ ಲಕ್ನೋ ಅವರನ್ನು ತಂಡದಿಂದ ಕೈಬಿಟ್ಟಿತ್ತು.