ಮುಂದಿನ ವಾರಗಳಲ್ಲಿ ಟೊಮೆಟೊಗೆ 250 ರೂ. ಗಡಿ ದಾಟುವ ಸಾಧ್ಯತೆ?
ದೇಶದಲ್ಲಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದ್ದು, ದಾಖಲೆಯ ಮಟ್ಟಕ್ಕೆ ಬೆಲೆ ಜಿಗಿತಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ನಿರಂತರ ವರುಣನ ಆರ್ಭಟದಿಂದಾಗಿ ಸಾಕಷ್ಟು ಕಡೆಯಲ್ಲಿ ಟೊಮೆಟೊ ಸಾಗಾಣೆಗೆ ತೊಂದರೆಯಾಗಿದೆ. ಆದ್ರೆ ಮಳೆ ರೌದ್ರಾವತಾರ ಹೆಚ್ಚಿರುವುದರಿಂದ ಮುಂದಿನ ವಾರಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸಾರ್ವಕಾಲಿಕ ದಾಖಲೆ ಮಟ್ಟದ ಬೆಲೆ ಕಂಡಿರುವ ಟೊಮ್ಯಾಟೊ ಧಾರಣಿ ಇನ್ನೂ ಹೆಚ್ಚಾಗಲಿದ್ದು, ಒಂದು ಕೆ.ಜಿ.ಗೆ 300 ರೂಪಾಯಿ ಆಗುವ ಸಾಧ್ಯತೆ ದಟ್ಟವಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ದೇಶಾದ್ಯಂತ ಟೊಮಾಟೊ ದರ ಶೇಕಡ 300ಕ್ಕಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚಿದ್ದು ಇನ್ನಷ್ಟು ಏರುವುದು ಖಚಿತ ಎಂದು ಕೃಷಿ ತಜ್ಞರು ಹೇಳಿದ್ದಾರೆ. ಟೊಮ್ಯಾಟೊ ಬೆಲೆಯೇರಿಕೆ ಸಮಸ್ಯೆ ಇನ್ನೂ ಸ್ವಲ್ಪ ಸಮಯ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಸರಕು ನಿರ್ವಹಣಾ ಸೇವಾ ಸಂಸ್ಥೆ (ಎನ್‌ಸಿಎಂಎಲ್) ಸಿಇಒ ಸಂಜಯ್ ಗುಪ್ತಾ ಹೇಳಿದ್ದಾರೆ. ವಿಪರೀತ ಮಳೆಯಾಗುತ್ತಿರುವುದರಿಂದ ಹೊಸದಾಗಿ ಟೊಮ್ಯಾಟೋ ಸಸಿ ನಾಟಿ ಸಾಧ್ಯವಿಲ್ಲ. ಬೆಲೆ ಸ್ಥಿರಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದೆಂದು ಅವರು ಹೇಳಿದ್ದಾರೆ. ಜೂನ್ ಮೊದಲ ವಾರದಲ್ಲಿ ಕೆಜಿಗೆ 40 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಜುಲೈ ಮೊದಲ ವಾರದ ಹೊತ್ತಿಗೆ ಕೆಜಿಗೆ ಸರಾಸರಿ 100 ರೂ. ಆಗಿತ್ತು. ಭಾರಿ ಮಳೆಯ ನಡುವೆ ಟೊಮ್ಯಾಟೋ ಸರಬರಾಜು ಅಸ್ತವ್ಯಸ್ತಗೊಂಡಿರುವುದರಿಂದ ಬೆಲೆ ಕೆ.ಜಿ.ಗೆ ಸರಾಸರಿ 200 ರೂಪಾಯಿಗೆ ಏರಿದೆ.
”ಬೆಲೆ ಏರಿಕೆಯ ಸಮಸ್ಯೆ ಕೆಲಕಾಲ ಮುಂದುವರಿಯಲಿದೆ. ಮಳೆಯ ನಡುವೆ ಯಾವುದೇ ಹೊಸ ಹೊಲದಲ್ಲಿ ಟೊಮೆಟೊ ಬೆಳೆಯಲಾಗುವುದಿಲ್ಲ. ಮುಂದಿನ ವಾರಗಳಲ್ಲಿ ಬೆಲೆಗಳು ಏರುತ್ತಲೇ ಇರುತ್ತವೆ. ನಾವು ಬೆಲೆಗಳನ್ನು ಸ್ಥಿರಗೊಳಿಸುವುದನ್ನು ನೋಡಲು ಕನಿಷ್ಠ 2 ತಿಂಗಳುಗಳಾಗಬಹುದು ”ಎಂದು ನ್ಯಾಷನಲ್ ಕಮಾಡಿಟೀಸ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್‌ನ (ಎನ್‌ಸಿಎಂಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಗುಪ್ತಾ ಹೇಳಿದ್ದಾರೆ.
40 ರೂಪಾಯಿ ನಷ್ಟಿದ್ದ ಟೊಮೆಟೊ ಬೆಲೆ 200 ರೂಪಾಯಿ ತಲುಪಿದೆ
ದೇಶಾದ್ಯಂತ ಟೊಮೆಟೊ ಚಿಲ್ಲರೆ ಬೆಲೆ ಗಗನಕ್ಕೇರಿದೆ. ಜೂನ್‌ನಲ್ಲಿ ಪ್ರತಿ ಕೆಜಿಗೆ ರೂ 40 ರಿಂದ ಜುಲೈ ಮೊದಲ ವಾರದಲ್ಲಿ ಕೆಜಿಗೆ ರೂ 100 ಕ್ಕೆ ಏರಿತು ಮತ್ತು ದೇಶದ ವಿವಿಧ ಪ್ರದೇಶಗಳಿಂದ ಸರಬರಾಜಿನ ಮೇಲೆ ಪರಿಣಾಮ ಬೀರಿದ ಭಾರೀ ಮಳೆಯ ನಡುವೆ ಪ್ರತಿ ಕೆಜಿಗೆ ರೂ 200 ಕ್ಕೆ ಏರಿತು.
ಎಲ್ಲೆಲ್ಲಿ ಟೊಮೆಟೊ ಬೆಳೆಯಲಾಗುತ್ತದೆ?
ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಛತ್ತೀಸ್‌ಗಢ, ಬಿಹಾರ, ತೆಲಂಗಾಣ, ಉತ್ತರ ಪ್ರದೇಶ, ಹರಿಯಾಣ ಮತ್ತು ತಮಿಳುನಾಡು ಪ್ರಮುಖ ಟೊಮೆಟೊ ಉತ್ಪಾದಿಸುವ ರಾಜ್ಯಗಳು. ಕೃಷಿ ಸಚಿವಾಲಯದ ಪ್ರಕಾರ, ಈ ರಾಜ್ಯಗಳು ದೇಶದ ಒಟ್ಟು ಉತ್ಪಾದನೆಯ 91 ಪ್ರತಿಶತವನ್ನು ಹೊಂದಿವೆ. ಆದಾಗ್ಯೂ, ಪ್ರಸ್ತುತ ಪೂರೈಕೆಯನ್ನು ದಕ್ಷಿಣ ಮತ್ತು ಕೆಲವು ಈಶಾನ್ಯ ಪ್ರದೇಶಗಳಿಂದ ಮಾತ್ರ ಪಡೆಯಲಾಗುತ್ತಿದೆ.
ಟೊಮೆಟೊ ಬೆಲೆ ಯಾವಾಗ ಸ್ಥಿರಗೊಳ್ಳಬಹುದು?
ಟೊಮೆಟೊ ಸಾಮಾನ್ಯವಾಗಿ 60 ರಿಂದ 90 ದಿನಗಳ ಬೆಳೆ ಚಕ್ರವನ್ನು ಅನುಸರಿಸುತ್ತವೆ. ಟೊಮೆಟೊ ಬೆಳೆಯುವ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿತ್ತನೆ ಸಾಧ್ಯವಾಗಿಲ್ಲ. ಹೀಗಾಗಿ ಬೆಲೆಗಳು ಸ್ಥಿರಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಹೆಚ್ಚಿನ ರೈತರು ಮೇ ಮತ್ತು ಜೂನ್‌ನಲ್ಲಿ ಟೊಮೆಟೊಗಳನ್ನು ಬಿತ್ತುವುದಿಲ್ಲ. ಮಳೆ ಕಡಿಮೆಯಾದಾಗ ಮಾತ್ರ ರೈತರು ಮತ್ತೆ ಬಿತ್ತನೆ ಮಾಡುತ್ತಾರೆ. ಹೀಗಾಗಿ, ಕಸಿ ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ನಡೆಯುತ್ತದೆ. ನಾಟಿಯಿಂದ, ಕೊಯ್ಲು ಕನಿಷ್ಠ 60 ದಿನಗಳನ್ನು ತೆಗೆದುಕೊಳ್ಳುತ್ತದೆ. ಆಗಸ್ಟ್ ಅಂತ್ಯ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಲೆಗಳು ಸ್ಥಿರಗೊಳ್ಳಬಹುದು
ರೈತ ಕೃಷಿಯಲ್ಲಿ ಲಾಭ ಮಾಡುವುದೇ ಕಷ್ಟ. ಆದರೆ ಟೊಮ್ಯಾಟೊ ಬೆಲೆ ಏರಿಕೆಯಿಂದ ಒಂದಷ್ಟು ಹಣ ಕಂಡ ರೈತ ಇದೇ ಕಾರಣಕ್ಕೆ ಪ್ರಾಣ ಕಳೆದುಕೊಳ್ಳಬೇಕಾದ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ಅನ್ನಮಯ್ಯ ಜಿಲ್ಲೆ ಮದನಪಲ್ಲಿಯ ನರೇಂ ರಾಜಶೇಖರ ರೆಡ್ಡಿ (62) ಎಂಬ ರೈತನನ್ನು ದುಷ್ಕರ್ವಿುಗಳು ಅಪಹರಿಸಿ ಹತ್ಯೆ ಮಾಡಿದ್ದಾರೆ. ರಾಜಶೇಖರ ರೆಡ್ಡಿ ಟೊಮ್ಯಾಟೋ ಮಾರಾಟದಿಂದ 32 ಲಕ್ಷ ರೂ. ಲಾಭ ಗಳಿಸಿದ್ದರು ಎನ್ನಲಾಗಿದ್ದು, ಈ ವಿಚಾರ ಗೊತ್ತಾಗಿ ದರೋಡೆಕೋರರು ಅವರನ್ನು ಅಪಹರಿಸಿ ಕೊಂದು ಹಣ ದೋಚಿರಬಹುದು ಎಂದು ಶಂಕಿಸಲಾಗಿದೆ. ಮಂಗಳವಾರ ರಾತ್ರಿ ಹಾಲು ಹಾಕಲೆಂದು ಹಳ್ಳಿಗೆ ಹೋಗಿದ್ದ ರೆಡ್ಡಿ, ತುಂಬಾ ಹೊತ್ತಾದರೂ ವಾಪಸ್ ಬರಲಿಲ್ಲ. ಗಾಬರಿಗೊಂಡ ಕುಟುಂಬಸ್ಥರು ಹುಡುಕಾಡಿದಾಗ ಆತನ ಬೈಕ್ ಮತ್ತು ಮೊಬೈಲ್ ರಸ್ತೆ ಮಧ್ಯ ಬಿದ್ದಿದ್ದು ಗಮನಕ್ಕೆ ಬಂದಿದೆ. ನಂತರ ಇನ್ನಷ್ಟು ಹುಡುಕಾಡಿದಾಗ ಕೈಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ರೆಡ್ಡಿಯ ಮೃತ ದೇಹ ಮರವೊಂದರ ಕೆಳಗೆ ಪತ್ತೆಯಾಗಿತ್ತು. ಹತ್ಯೆಗೀಡಾಗಿರುವ ರೆಡ್ಡಿಯ ಇಬ್ಬರು ಪುತ್ರಿಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.