ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು ಪತ್ತೆ ; ಓರ್ವ ಅರೆಸ್ಟ್..!

Twitter
Facebook
LinkedIn
WhatsApp
ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು ಪತ್ತೆ ; ಓರ್ವ ಅರೆಸ್ಟ್..!

ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು (Human Skulls) ಪತ್ತೆಯಾಗಿವೆ. ಬಲರಾಮ್ ಎಂಬ ವ್ಯಕ್ತಿ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾನೆ ಎಂಬ ಗಂಬೀರ ಆರೋಪ ಕೇಳಿ ಬಂದಿದೆ. ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಸ್ಥಳಕ್ಕೆ ಬಂದ ಪೊಲೀಸರು (Bidadi Police) ಬಲರಾಮ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಮಹಾ ಶಿವರಾತ್ರಿಯ ಅಮಾವಸ್ಯೆ ಮುಗಿದಿದೆ. ರಾಮನಗರದ ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ಬಲರಾಮ್ ಎಂಬ ವ್ಯಕ್ತಿ ರಾತ್ರಿ ವೇಳೆ ಸ್ಮಶಾನದಲ್ಲಿ ಪೂಜೆ ಮಾಡಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಮಶಾನಕ್ಕೆ ಬಂದ ಬಿಡದಿ ಪೊಲೀಸರು ವಿಚಾರಣೆ ನಡೆಸಿ ಬಲರಾಮ್​ನನ್ನು ವಶಕ್ಕೆ ಪಡೆದಿದ್ದಾರೆ. ಬಲರಾಮ್ ತೋಟದ ಮನೆಯಲ್ಲಿ ಅನೇಕ ಮಾನವರ ತಲೆ ಬುರಡೆಗಳು ಪತ್ತೆಯಾಗಿವೆ. ನನ್ನ ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡುತ್ತಾ ಬಂದಿದ್ದೇವೆ ಎಂದು ಬಲರಾಮ್ ತಿಳಿಸಿದ್ದು ವಿಚಾರಣೆ ಮುಂದುವರೆದಿದೆ.

ಮನುಷ್ಯರ ತಲೆಬುರುಡೆಗಳು ಪತ್ತೆಯಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಅರಶಿನ, ಕುಂಕುಮ ಹಾಗೂ ಬಿಳಿಯ ಪಟ್ಟಿಗಳನ್ನು ಈ ಬುರುಡೆಗಳಿಗೆ ಬಳಿಯಲಾಗಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದ್ದು, ಬಿಡದಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್ಪಿ ಟಿ.ವಿ.ಸುರೇಶ್, ಬಿಡದಿ ಇನ್ಸ್‌ಪೆಕ್ಟರ್ ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್​ಎಸ್​ಎಲ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕಳೆದ 4-5 ವರ್ಷದಿಂದ ತಲೆ‌ಬುರಡೆ, ಕೈ ಕಾಲು ಮೂಳೆ ಸಂಗ್ರಹ ಮಾಡಲಾಗಿರುವ ಶಂಕೆ ವ್ಯಕ್ತವಾಗಿದೆ.

ಅರೆಸ್ಟ್ ಆಗಿರುವ ಬಲರಾಮ ಕೋಟ್ಯಾಧೀಶ. ಬಿಡದಿ‌ ಇಂಡಸ್ಟ್ರೀಯಲ್ ಏರಿಯಾದಲ್ಲಿ ಜಮೀನು ಹೊಂದಿದ್ದಾರೆ. ಖಾಸಗಿ ಕಂಪನಿಗಳಿಗೆ ಭೂಮಿ ಲೀಸ್​ಗೆ ಕೊಟ್ಟಿದ್ದಾರೆ. ತನ್ನದೇ ಜಮೀನನಲ್ಲಿ ಶೇಡ್ ನಿರ್ಮಾಣ ಮಾಡಿ ಶೆಡ್​ಗೆ ಶ್ರೀ ಸ್ಮಶಾನ ಪೀಠ ಎಂದು ನಾಮಕರಣ ಮಾಡಿ ಸ್ಮಶಾನದಿಂದ ತಲೆಬುರಡೆ ತಂದು ಪೂಜೆ ಮಾಡುತ್ತಿದ್ದು ಸದ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇನ್ನು ತನಿಖೆಗೆ ಇಳಿದಿದ್ದ ಪೊಲೀಸರು ಬಾಗಿಲು ಮುಚ್ಚಿದ್ದ ಮತ್ತೊಂದು ಕೋಣೆಗೆ ಎಂಟ್ರಿ ಕೊಟ್ಟಿದ್ದು ಅಲ್ಲಿ ಎರಡು ಮೂಟೆಗೂ ಹೆಚ್ಚು ಮುನುಷ್ಯರ ಮೂಳೆಗಳು ಪತ್ತೆಯಾಗಿವೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದು ವಾಸನೆ ತಾಳಲಾಗದೆ ಹೊರ ಬಂದ್ರು. ಬಳಿಕ ಸುಧಾರಿಸಿಕೊಂಡು ಮತ್ತೊಮ್ಮೆ ಕೋಣೆ ಒಳಗೆ ನುಗ್ಗಿ ಪರಿಶೀಲನೆ ನಡೆಸಿದ್ದಾರೆ. ಇಡೀ ಮನೆಯಲ್ಲಿ ಕೊಳೆತ ವಾಸನೆ ಹಬ್ಬಿದೆ. ಆರೋಪಿ ಬಲರಾಮ ಕುಳಿತುಕೊಳ್ಳಲು, ಮಲಗಲು ಮಾನವರ ದೇಹದ ಮೂಳೆಗಳ ಮಂಚವನ್ನೇ ಮಾಡಿಕೊಂಡಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ