ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

24,789 ಕೋಟಿಗೆ ವಿಶ್ವಕಪ್ ಟೂರ್ನಿಯ ಪ್ರಸಾರದ ಹಕ್ಕು ಪಡೆದಿದ್ದ ಡಿಸ್ನಿಗೆ 2.2 ಲಕ್ಷ ಕೋಟಿ ರೂ. ಆದಾಯ...!

Twitter
Facebook
LinkedIn
WhatsApp
24,789 ಕೋಟಿಗೆ ವಿಶ್ವಕಪ್ ಟೂರ್ನಿಯ ಪ್ರಸಾರದ ಹಕ್ಕು ಪಡೆದಿದ್ದ ಡಿಸ್ನಿಗೆ 2.2 ಲಕ್ಷ ಕೋಟಿ ರೂ. ಆದಾಯ...!

ಮುಂಬಯಿ: 46 ದಿನಗಳ ಕಾಲ ನಡೆದ ಏಕದಿನ ವಿಶ್ವಕಪ್​ ಕ್ರಿಕೆಟ್​ ಟೂರ್ನಿ(icc world cup 2023) ಮುಕ್ತಾಯಗೊಂಡಿದೆ. ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುದರೊಂದಿಗೆ ಟೂರ್ನಿಗೆ ತೆರೆಬಿದ್ದಿದೆ. ಫೈನಲ್​ನಲ್ಲಿ 6 ವಿಕೆಟ್​ಗಳಿಂದ ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಟೂರ್ನಿಯ ಪ್ರಸಾರದ ಹಕ್ಕು ಪಡೆದಿದ್ದ ಡಿಸ್ನಿಗೆ(Disney+ Hotstar) 2.2 ಲಕ್ಷ ಕೋಟಿ ರೂ. ಆದಾಯಗಳಿಸಿದೆ ಎಂದು ವರದಿಯಾಗಿದೆ.

ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್ ವಿಶ್ವಕಪ್​ ಟೂರ್ನಿಯ ಪ್ರಸಾರದ ಹಕ್ಕನ್ನು 24,789 ಕೋಟಿ ರೂ.ಗೆ ಪಡೆದಿತ್ತು. ಟೂರ್ನಿ ಮುಕ್ತಾಯದ ವೇಳೆಗೆ 2.2 ಲಕ್ಷ ಕೋಟಿ ರೂ. ಆದಾಯಗಳಿಸಿದೆ ಎಂದು ವರದಿಯೊಂದು ತಿಳಿಸಿದೆ.

ಡಿಸ್ನಿ+ ಹಾಟ್‌ಸ್ಟಾರ್ ಕ್ರಿಕೆಟ್ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಲು ಪ್ರಮುಖ ವೇದಿಕೆಯಾಗಿತ್ತು. ಆದರೆ ಜಿಯೋ ಸೇರಿ ಇನ್ನು ಕೆಲ ಆನ್‌ಲೈನ್‌ ಆ್ಯಪ್​ ಬಂದ ಕಾರಣ ಹಾಟ್‌ಸ್ಟಾರ್​ಗೆ ಪೈಪೋಟಿ ಎದುರಾಗಿದೆ. ಐಪಿಎಲ್​ನ ಪ್ರಸಾರದ ಹಕ್ಕು ಸಿಗದೆ ಹಿನ್ನಡೆ ಅನುಭವಿಸಿದ್ದ ಡಿಸ್ನಿ+ ಹಾಟ್‌ಸ್ಟಾರ್ ಈ ಬಾರಿಯ ವಿಶ್ವಕಪ್​ ಪ್ರಸಾರದ ಹಕ್ಕನ್ನು ಪಡೆದು ಮೊಬೈಲ್​ನಲ್ಲಿ ಉಚಿತ ಸ್ಟ್ರೀಮಿಂಗ್​ ನೀಡಿತ್ತು. ಈ ಮೂಲಕ ತನ್ನ ಹಳೆಯ ಮಾರ್ಕೆಟ್​ ಮತ್ತೆ ವಾಪಸ್​ ಹಿಂದಕ್ಕೆ ಪಡೆಯುವ ಪ್ರಯತ್ನ ಮಾಡಿತ್ತು. ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಅದ್ಭುತ ಪ್ರದರ್ಶನಗಳು ಕಂಪನಿಗೆ ಹೊಸ ಜೀವ ತುಂಬಿದೆ. ಭಾರತ ಫೈನಲ್​ ತನಕ ಸಾಗಿ ಬಂದ ಕಾರಣ ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್ 2.2 ಲಕ್ಷ ಕೋಟಿ ರೂ. ಆದಾಯಗಳಿಸಿದೆ ಎಂದು ತಿಳಿದುಬಂದಿದೆ.

ವಿಶ್ವಕಪ್​ ಆರಂಭಕ್ಕೂ ಮುನ್ನ ಅಕ್ಟೋಬರ್ 4 ರಂದು ಡಿಸ್ನಿಯ ಮಾರುಕಟ್ಟೆ ಮೌಲ್ಯವು ಸುಮಾರು 141.267 ಶತಕೋಟಿ ಡಾಲರ್‌ಗಳಷ್ಟಿತ್ತು ಎಂದು ವರದಿಯಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಈಗ 167.68 ಶತಕೋಟಿ ಡಾಲರ್‌ಗಳಷ್ಟಿದೆ (ಸುಮಾರು 13 ಲಕ್ಷ ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಪನಿಗೆ ವಿಶ್ವಕಪ್​ ಟೂರ್ನಿ ಸಹಾಯ ಮಾಡಿದೆ.

ಡಿಸ್ನಿ+ ಹಾಟ್‌ಸ್ಟಾರ್ ವಿಶ್ವಕಪ್ 2023 ಪಂದ್ಯಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಿತ್ತು. ಈ ಮೂಲಕ ಕಳೆದುಕೊಂಡಿದ್ದ ವೀಕ್ಷಕರನ್ನು ಮರಳಿ ಪಡೆಯುವ ಪ್ರಯತ್ನ ಮಾಡಿ 24789 ಕೋಟಿಗೆ ಬಿಡ್ ಸಲ್ಲಿಸಿತ್ತು. ಈ ಯೋಜನೆ ಕೈ ಹಿಡಿದಿದೆ. ನಷ್ಟದಲ್ಲಿದ್ದ ಕಂಪನಿ ಮತ್ತೆ ಚೇತರಿಕೆ ಕಂಡಿದೆ. 2024 ರಿಂದ 2027 ರವರೆಗೆ ಭಾರತದಲ್ಲಿ ನಡೆಯುವ ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಪಂದ್ಯಾವಳಿಗಳನ್ನು ಪ್ರದರ್ಶಿಸಲು ಮಾಧ್ಯಮ ಹಕ್ಕುಗಳನ್ನು ನವೀಕರಿಸುವಲ್ಲಿ ಯಶಸ್ವಿಯಾಗಿದೆ.

ಈ ಬಾರಿಯ ಕೆಲ ಭಾರತದ ವಿಶ್ವಕಪ್​ ಪಂದ್ಯಗಳು ಡಿಜಿಟಲ್​ ಮಾಧ್ಯಮದಲ್ಲಿ ಏಕಕಾಲಕ್ಕೆ ಅತ್ಯಧಿಕ ವೀಕ್ಷಣ ಕಂಡು ದಾಖಲೆ ಕೂಡ ಬರೆದಿತ್ತು. ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಣ ಸೆಮಿಫೈನಲ್​ ಪಂದ್ಯ 5.3 ಕೋಟಿ ವೀಕ್ಷಣೆ ಕಂಡಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ