23 ವರ್ಷಗಳಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳತನ ಪ್ರಕರಣದ ಆರೋಪಿ ಸೆರೆ
ಕುಂದಾಪುರ: ಕಳೆದ 23 ವರ್ಷಗಳಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳತನ ಪ್ರಕರಣದ ಆರೋಪಿ ಮಲ್ಪೆ ತೋನ್ಸೆ ಮೂಲದ ನಿವಾಸಿ, ಸದ್ಯ ಗೋವಾದಲ್ಲಿ ನೆಲೆಸಿದ್ದ ಶಬ್ಬೀರ್ (59)ನನ್ನು ಕುಂದಾಪುರ ಪೊಲೀಸರು ಗುರುವಾರ ಗೋವಾದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಆರೋಪಿ ಶಬ್ಬೀರ್ ಮೇಲೆ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ 2000ದಲ್ಲಿ ನಡೆದ ಬೈಕ್ ಕಳ್ಳತನ ಮಾಡಿರುವ ಆರೋಪವಿದೆ. ಈತ ನ್ಯಾಯಾಲಯಕ್ಕೆ ಹಾಜಾರಾಗದೇ ಗೋವಾದಲ್ಲಿ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಮಲ್ಪೆ ತೋನ್ಸೆಗೆ ಬಂದ ಬಗ್ಗೆ ಖಚಿತ ವರ್ತಮಾನ ಪಡೆದ ಪೊಲೀಸರು ಜು. 6ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚೀಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ., ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ನಗರ ಠಾಣೆ ನಿರೀಕ್ಷಕ ಯು.ಬಿ. ನಂದಕುಮಾರ್ ನೇತೃತ್ವದಲ್ಲಿ ನಗರ ಠಾಣೆ ಕಾನೂನು ಸುವ್ಯವಸ್ಥೆ ವಿಭಾಗದ ಎಸ್‌ಐ ವಿನಯ ಕೊರ್ಲಹಳ್ಳಿ, ತನಿಖಾ ವಿಭಾಗದ ಎಸ್‌ಐ ಪ್ರಸಾದ್ ಕುಮಾರ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಸಂತೋಷ್ ಪೂಜಾರಿ, ಸಂತೋಷ್ ಕೆ., ಸಿಬಂದಿ ಶ್ರೀಧರ, ರಾಮ ಪೂಜಾರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಹೊಸ ಸಿಮ್‌ಕಾರ್ಡ್ ಆಕ್ಟಿವ್ ಆದ ಗಂಟೆಯಲ್ಲೇ 2.5 ಲಕ್ಷ ವಂಚನೆ: ಎಫ್‌ಐಆರ್ ದಾಖಲು
ಬೆಂಗಳೂರು (ಜು.10): ಹೊಸ ಸಿಮ್ ಕಾರ್ಡ್ ಆಕ್ಟಿವೇಶನ್ ಆದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 2.05 ಲಕ್ಷ ಬೇರೊಂದು ಖಾತೆಗೆ ವರ್ಗಾವಣೆ ಆಗಿರುವ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಸರಘಟ್ಟ ಮುಖ್ಯರಸ್ತೆಯ ಸಪ್ತಗಿರಿ ಲೇಔಟ್ ನಿವಾಸಿ ಶಿವಕುಮಾರ್ ಎಂಬುವವರು ಹಣ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಳಿಕ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಬ್ಯಾಂಕ್ ಖಾತೆಯಿಂದ ಐದು ಬಾರಿ ಒಟ್ಟು 2.05 ಲಕ್ಷ ಕಡಿತ ಆಗಿರುವುದಾಗಿ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿವಕುಮಾರ್ ಅನಧಿಕೃತವಾಗಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾಣೆ ಆಗಿರುವ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಂಡ್‌ಮಿಲ್ ಕಂಪೆನಿಗಳಿಂದ ರೈತರಿಗೆ ವಂಚನೆ?: ತಾಲೂಕಿನ ನಾನಾ ಗ್ರಾಮಗಳಲ್ಲಿ ವಿಂಡ್‌ಮಿಲ್ (ವಿದ್ಯುತ್ ಉತ್ಪಾದನೆ) ನಿರ್ಮಾಣ ಆಗುತ್ತಿದ್ದು, ವಿದ್ಯುತ್ ಉತ್ಪಾದನೆ ವಿಂಡ್‌ಮೀಲ್‌ಗಳ ಸುತ್ತಲೂ ವಂಚನೆ ಆರೋಪ ಕೇಳಿ ಬರುತ್ತಿದೆ! ತಾಲೂಕಿನ ಸಮಾನ ಮನಸ್ಕ ರೈತ ಬಳಗ ಹಾಗು ರೈತ ವರ್ಗ ಹಾಗು ಶಾಸಕ ಬಸವರಾಜ ರಾಯರಡ್ಡಿ ರಾಜ್ಯ ಇಂಧನ ಸಚಿವ ಕೆ.ಜೆ ಜಾಜ್‌ರ್ ಅವರಿಗೆ ಈ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಎಲ್ಲೆಲ್ಲಿವೆ ವಿಂಡ್‌ಮಿಲ್: ಕುಕನೂರು ತಾಲೂಕಿನ ಬಿನ್ನಾಳ, ಚಿಕೇನಕೊಪ್ಪ, ಯರೇಹಂಚಿನಾಳ, ರಾಜೂರು, ದ್ಯಾಂಪೂರು, ಕುಕನೂರು, ಆಡೂರು, ಯಲಬುಗಾ ತಾಲೂಕಿನ ತೊಂಡಿಹಾಳ, ಬಂಡಿಹಾಳ, ಸಂಗನಹಾಳ ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ದೊಡ್ಡ ದೊಡ್ಡ ಗಾತ್ರದ ವಿಂಡ್‌ಮಿಲ್‌ಗಳು ಸದ್ಯ ಸ್ಥಾಪನೆಯಾಗಿವೆ. ಸುಮಾರು ನೂರಕ್ಕೂ ಹೆಚ್ಚು ವಿಂಡ್‌ಮಿಲ್‌ಗಳ ಸ್ಥಾಪನೆ ಆಗಿದೆ ಹಾಗೂ ಇನ್ನೂ ವಿಂಡ್‌ಮಿಲ್‌ಗಳ ನಿರ್ಮಾಣ ಆಗುತ್ತಿವೆ. ರೈತರ ಜಮೀನುಗಳಿಗೆ ಹಣದ ಆಸೆ ತೋರಿಸಿ ರೈತರಿಂದ ದಲ್ಲಾಳಿಗಳು ಜಮೀನು ಖರೀದಿ ಮಾಡಿ ವಿಂಡ್‌ಮಿಲ್‌ಗಳ ಸ್ಥಾಪನೆ ಮಾಡಿರುವ ಆರೋಪಗಳು ಸದ್ಯ ಕೇಳಿ ಬರುತ್ತಿವೆ.