ಬುಧವಾರ, ಮೇ 22, 2024
ಮನೆಯೊಂದರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮಹಿಳೆಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ.!-Rain Alert: ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ; ಸಮುದ್ರ ತೀರದಲ್ಲಿ ಹೈ-ಅಲರ್ಟ್.!-Rave Party :ಇಂದು ಮತ್ತೊಂದು ವಿಡಿಯೋ ಹರಿಬಿಟ್ಟ ನಟಿ ಹೇಮಾ; ರೇವ್ ಪಾರ್ಟಿಯಲ್ಲಿ ಇದ್ದಿದ್ದು ನಿಜಾನಾ.?-ಬ್ರಹ್ಮ ಅಡ್ಡಬಂದರೂ ರಘುಪತಿ ಭಟ್ ನೈಋತ್ಯ ಪಧವೀಧರ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ; ಕೆ.ಎಸ್ ಈಶ್ವರಪ್ಪ-2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರ ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು-ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿ. ಇಲ್ಲಾದ್ರೆ ಜಾಗ ಖಾಲಿ ಮಾಡಿ, ಹೊಸ ಮುಖಗಳನ್ನು ಬೆಳೆಸುತ್ತೇವೆ-ನಾಯಕರುಗಳಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ-ದ್ವೇಷ ರಾಜಕಾರಣಕ್ಕೆ ಬೆಳ್ತಂಗಡಿಯಲ್ಲಿ ಅಖಾಡ ಸಿದ್ಧವಾಗಿದೆಯೇ? ಹರೀಶ್ ಪೂಂಜ V/S ರಕ್ಷಿತ್ ಶಿವರಾಂ..!-ಭಜರಂಗಿ ಸಿನೆಮಾದಲ್ಲಿ ನಟಿಸಿದ್ದ ನಟಿ ಪತಿಯಿಂದಲೇ ಭೀಕರ ಹತ್ಯೆ..!-ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ; ಸಚಿವರು ಅನಗತ್ಯವಾಗಿ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚನೆ..!-ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ -ಮಗ ಮೃತ್ಯು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಲರಾ ಭೀತಿಯಲ್ಲಿ ವಲಸೆ ಹೋಗುತ್ತಿದ್ದ ಹಡಗು ಮುಳುಗಿ 94 ಜನ ದುರ್ಮರಣ; ಸಮುದ್ರ ತೀರದಲ್ಲಿ ಶವಗಳ ರಾಶಿ.!

Twitter
Facebook
LinkedIn
WhatsApp
ಕಾಲರಾ ಭೀತಿಯಲ್ಲಿ ವಲಸೆ ಹೋಗುತ್ತಿದ್ದ ಹಡಗು ಮುಳುಗಿ 94 ಜನ ದುರ್ಮರಣ; ಸಮುದ್ರ ತೀರದಲ್ಲಿ ಶವಗಳ ರಾಶಿ.!

ಮಾಪುಟೊ: ಕರ್ನಾಟಕದಲ್ಲಿ ಕಾಲರಾ ಭೀತಿ ಎದುರಾಗಿದೆ. ಬೆಂಗಳೂರಿನ ಹಾಸ್ಟೆಲ್‌ಗಳಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ರಾಜ್ಯಾದ್ಯಂತ ಹಲವು ಕಾಲರಾ ಪ್ರಕರಣಗಳು (Cholera Outbreak) ಕೂಡ ದಾಖಲಾಗಿವೆ. ಇದರ ಬೆನ್ನಲ್ಲೇ, ಮೊಜಾಂಬಿಕ್‌ (Mozambique) ದೇಶದಲ್ಲಿ ಕಾಲರಾ ಭೀತಿಯು 94 ಜನರ ಪ್ರಾಣವನ್ನೇ ತೆಗೆದಿದೆ. ಹೌದು, ಕಾಲರಾ ಭೀತಿಯಿಂದಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಹಡಗು ಮುಳುಗಿದ್ದು (Boat Captized), 94 ಜನ ಮೃತಪಟ್ಟಿದ್ದಾರೆ. ಇನ್ನೂ 26 ಜನ ನಾಪತ್ತೆಯಾಗಿದ್ದಾರೆ.

ಹೌದು, ಮೊಜಾಂಬಿಕ್‌ನ ಉತ್ತರ ಕರಾವಳಿ ಭಾಗದಲ್ಲಿ 130 ಜನ ಪ್ರಯಾಣಿಸುತ್ತಿದ್ದ ಹಡಗು ಮುಳುಗಿದೆ. ಇದುವರೆಗೆ 94 ಶವಗಳು ಪತ್ತೆಯಾಗಿವೆ. ಉಳಿದ 26 ಜನರ ಶವಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಂಪುಲ ಪ್ರಾಂತ್ಯದ ಲುಂಗಾ ಪ್ರದೇಶದಿಂದ ಮೊಜಾಂಬಿಕ್‌ ದ್ವೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ಮೊಜಾಂಬಿಕ್‌ ಸಾಗರ ಸಾರಿಗೆ ಇಲಾಖೆ (INTRASMAR) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂಬುದಾಗಿ ಬಿಬಿಸಿ ವರದಿ ಮಾಡಿದೆ.

ಹಡಗು ಮುಳುಗಲು ಕಾರಣವೇನು?

ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ತೆರಳುತ್ತಿದ್ದುದೇ ಅದು ಮುಳುಗಲು ಕಾರಣ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ 130 ಪ್ರಯಾಣಿಕರು ತೆರಳುತ್ತಿದ್ದರು. ಅವರ ಭಾರಿ ಪ್ರಮಾಣದ ಬ್ಯಾಗ್‌ಗಳು, ವಸ್ತುಗಳು, ಸಲಕರಣೆಗಳನ್ನು ಹಡಗಿನಲ್ಲಿ ತುಂಬಲಾಗಿತ್ತು. ಅತಿಯಾದ ಭಾರ ತಾಳದೆ ಹಡಗು ಮುಳುಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೊಜಾಂಬಿಕ್‌ ಸಮುದ್ರದ ತೀರದಲ್ಲಿ ಪ್ರಯಾಣಿಕರ ಶವಗಳ ರಾಶಿಯ ವಿಡಿಯೊ ಕೂಡ ಹರಿದಾಡಿದ್ದು, ದೃಶ್ಯವು ಮನಕಲಕುವಂತಿದೆ.

ಎಲ್ಲೆಡೆ ಕಾಲರಾ ಭೀತಿ, ವಲಸೆ ಜಾಸ್ತಿ

ದಕ್ಷಿಣ ಆಫ್ರಿಕಾದ ಮೊಜಾಂಬಿಕ್‌ ಸೇರಿ ಹಲವು ದೇಶಗಳಲ್ಲಿ ಇತ್ತೀಚೆಗೆ ಕಾಲರಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದರಿಂದಾಗಿ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವ, ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗುವುದು ಸಾಮಾನ್ಯ ಎಂಬಂತಾಗಿದೆ. ಆದರೆ, ಹಡಗಿನಲ್ಲಿ ತೆರಳುವಾಗ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು, ನೋಂದಣಿ ಮಾಡಿಕೊಳ್ಳದ ಹಡಗಿನಲ್ಲಿ ಪ್ರಯಾಣಿಸುವುದು ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತಿವೆ. ಇವು ಅಪಾಯಗಳಿಗೂ ಎಡೆಮಾಡಿಕೊಡುತ್ತಿವೆ ಎಂಬುದಕ್ಕೆ ಹಡಗು ಮುಳುಗಿದ್ದೇ ಕಾರಣವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ