ಹುಬ್ಬಳ್ಳಿ(ಮೇ.28): ಮುಂಬರುವ 2024ರ ಚುನಾವಣೆಯ ಫಲಿತಾಂಶ ಕೂಡ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಆಗುವಂತೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿಯಲ್ಲಿ ಪ್ರಕೋಷ್ಠಗಳ ಕಾರ್ಯ ಮಹತ್ವದ್ದು. ಕಾರ್ಯಕರ್ತರಿಗೆ ಮುಖ್ಯ ಸಮಿತಿಯಲ್ಲಿ ಸ್ಥಾನ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಪ್ರಕೋಷ್ಠಕ್ಕೆ ಸೇರ್ಪಡೆ ಮಾಡಿಲ್ಲ. ಬಡವರಿಗೆ ಸಮರ್ಪಿತವಾದ ಸರ್ಕಾರದ ಕಾರ್ಯಗಳನ್ನು ಜನತೆಗೆ ಮುಟ್ಟಿಸುವ ಕೆಲಸವನ್ನು ನಿರ್ವಹಿಸುವ ಮಹತ್ವದ ಕಾರ್ಯ ಪ್ರಕೋಷ್ಠದ ಮೇಲಿದೆ ಎಂದರು.
ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಕೇಂದ್ರ ಸರ್ಕಾರ ಬಡವರಿಗಾಗಿ ಯೋಜನೆ ರೂಪಿಸಿದೆ. ಉಜಾಲ ಯೋಜನೆಯಡಿ 37 ಕೋಟಿ ಎಲ್‌ಇಡಿ ವಿದ್ಯುತ್ ಬಲ್ಬ್ ನೀಡಿದ್ದು 48 ಲಕ್ಷ ವ್ಯಾಟ್ ವಿದ್ಯುತ್ ಉಳಿತಾಯವಾಗಿದೆ. ಜತೆಗೆ 20 ಸಾವಿರ ಕೋಟಿ ಉಳಿತಾಯ ಆಗಿದೆ. ಉಜ್ವಲ್ ಯೋಜನೆಯಡಿ ನೀಡಿದ 8 ಕೋಟಿ ಗ್ಯಾಸ್ ಕನೆಕ್ಷನ್‌ನಲ್ಲಿ 5 ಕೋಟಿ ಉಚಿತವಾಗಿ ವಿತರಿಸಿದ್ದೇವೆ. ಒನ್ ಕಾರ್ಡ್ ಒನ್ ನೇಷನ್ ನೀಡಲಾಗಿದೆ. ಇಂತಹ ಕಾರ್ಯಗಳ ಕುರಿತು, ದೇಶದಲ್ಲಿನ ಪರಿವರ್ತನೆಯನ್ನು ಜನತೆಗೆ ಮನದಟ್ಟು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿವಿಧ ಪ್ರಕೋಷ್ಠಗಳ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮುಂದಾಗಬೇಕು ಎಂದರು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist