ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

2023 ನೆಕ್ಸಾನ್ ಫೇಸ್‌ಲಿಫ್ಟ್‌ ; ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಎಸ್‌ಯುವಿಯ ಕಾರ್ ; ಇಲ್ಲಿದೆ ಡೀಟೈಲ್ಸ್

Twitter
Facebook
LinkedIn
WhatsApp
2023 ನೆಕ್ಸಾನ್ ಫೇಸ್‌ಲಿಫ್ಟ್‌ ; ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಎಸ್‌ಯುವಿಯ ಕಾರ್ ; ಇಲ್ಲಿದೆ ಡೀಟೈಲ್ಸ್

ದೇಶದಲ್ಲಿ ಟಾಟಾ ನಂಬರ್ 1 ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ.ಸೆಪ್ಟೆಂಬರ್ 14 ರಂದು ಈ ಹೊಸ ಕಾರು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಹೊಸ ಅವತಾರದಲ್ಲಿ ಬಂದಿರುವ ನೆಕ್ಸಾನ್‌ನ ಬುಕ್ಕಿಂಗ್ ಸೆಪ್ಟೆಂಬರ್ 4ರಿಂದ ಆರಂಭವಾಗಲಿದೆ. ಸಾಕಷ್ಟು ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ನೆಕ್ಸಾನ್ ಫೇಸ್‌ಲಿಫ್ಟ್‌ ಗ್ರಾಹಕರಿಗೆ ಲಭ್ಯವಾಗಲಿದೆ. ಎರಡು ಎಂಜಿನ್ ಆಯ್ಕೆಗಳೊಂದಿಗೆ ಸಿಗಲಿರುವ ನೆಕ್ಸಾನ್ ಫೇಸ್‌ಲಿಫ್ಟ್‌ನಲ್ಲಿ ಸುರಕ್ಷತೆಗೂ ಸಾಕಷ್ಟು ಒತ್ತು ನೀಡಲಾಗಿದೆ. ಈ ತಿಂಗಳ ಕೊನೆಯಲ್ಲಿ ಹೊಸ ಕಾರಿನ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ

ಟಾಟಾ ಮೋಟರ್ಸ್‌ನ ಜನಪ್ರಿಯ ವಾಹನಗಳಲ್ಲಿ ನೆಕ್ಸಾನ್ ಕೂಡಾ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಬಿಡುಗಡೆಯಾದ ಅಲ್ಪಾವಧಿಯಲ್ಲಿಯೇ ನೆಕ್ಸಾನ್ ಜನಪ್ರಿಯತೆ ಗಳಿಸಿತ್ತು. ಅಂತೆಯೇ ನೆಕ್ಸಾನ್‌ ಫೇಸ್‌ಲಿಫ್ಟ್‌ ಆವೃತ್ತಿಯೂ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಹೊಸ ನೆಕ್ಸಾನ್ ಫೇಸ್‌ಲಿಫ್ಟ್‌ ಅನಾವರಣಗೊಂಡಿದೆ. ಹಳೆಯ ಪೀಳಿಗೆಯ ನೆಕ್ಸಾನ್‌ನ ಛಾಯೆಯನ್ನು ಮುಂದುವರಿಸಿಕೊಂಡು ಹೋಗುತ್ತಲೇ ಹೊಸ ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ನೆಕ್ಸಾನ್ ಫೇಸ್‌ಲಿಫ್ಟ್‌ ಗ್ರಾಹಕರ ಮುಂದೆ ಬಂದಿದೆ. ದೇಶದಲ್ಲಿ ಅತೀ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿರುವ ಸಬ್ 4 ಮೀಟರ್ ಎಸ್‌ಯುವಿಗಳಲ್ಲಿ ಇದೂ ಒಂದಾಗಿದೆ. ಹೊಸ ನೆಕ್ಸಾನ್‌ ಫೇಸ್‌ಲಿಫ್ಟ್‌ ಮುಂಭಾಗದಲ್ಲಿ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದ್ದು, ಇನ್ನಷ್ಟು ಸ್ಫೋರ್ಟಿ ಲುಕ್ ಅನ್ನು ಪಡೆದಿದೆ.

5

ಟಾಟಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಅದರ ವಿನ್ಯಾಸದಲ್ಲಿ ಬಹುದೊಡ್ಡ ಬದಲಾವಣೆಯನ್ನು ಪಡೆದುಕೊಂಡಿದೆ. ಇದರ ಡಿಸೈನ್, ಕರ್ವ್ವ್ ಕಾನ್ಸೆಪ್ಟ್ ಇವಿ ಹಾಗೂ ಹ್ಯಾರಿಯರ್ ಇವಿಗಳಿಗೆ ಹೋಲಿಕೆಯಾಗಬಹುದು. ಇದು, ಈ ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಮುಂಭಾಗ, ಹೊಸದಾದ ಎಲ್ಇಡಿ ಹೆಡ್‌ಲೈಟ್ ಯುನಿಟ್, ಆಕರ್ಷಕ ಎಲ್ಇಡಿ DRLs ಹೊಂದಿರಲಿದ್ದು, ಗ್ರೀಲ್ ಹಾಗೂ ಬಂಪರ್ ಅನ್ನು ನವೀಕರಿಸಲಾಗಿದೆ. ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಎಸ್‌ಯುವಿ, ಹಿಂಭಾಗ, ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲೈಟ್ಸ್ ಪಡೆದಿರುವ ನೀರಿಕ್ಷೆಯಿದೆ. ಜೊತೆಯಲ್ಲಿ ಈ ಕಾರು ಅಲಾಯ್ ವೀಲ್ಸ್ ಒಳಗೊಂಡಿರಲಿದೆ. ಒಳಭಾಗದಲ್ಲಿಯೂ ನೆಕ್ಸಾನ್ ಇವಿ ಅತ್ಯಾಧುನಿಕ ಸೌಕರ್ಯವನ್ನು ಹೊಂದಿರಲಿದ್ದು, 7 – ಇಂಚಿನ ಡಿಸ್ಪ್ಲೇ ಬದಲಿಗೆ, ನೂತನ 10.25 – ಇಂಚಿನ ಡಿಜಿಟಲ್ ಟಚ್‌ಸ್ಕ್ರೀನ್ ಡಿಸ್ಪ್ಲೇ ಪಡೆದಿರಬಹುದು.

ಇದರೊಟ್ಟಿಗೆ, ನವೀಕರಣಗೊಂಡಿರುವ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 2 ಸ್ಪೋಕ್ ಸ್ಟೀರಿಂಗ್ ವೀಲ್, ಹೊಸದಾದ ಅಪ್ಹೋಲ್ಸ್ಟರಿ, 6 ಏರ್‌ಬ್ಯಾಗ್ಸ್, 2 ಸ್ಪೋಕ್ ಸ್ಟೀರಿಂಗ್ ವೀಲ್, 360 ಡಿಗ್ರಿ ಕ್ಯಾಮೆರಾ ಮತ್ತು ಪಾರ್ಕಿಂಗ್ ಸೆನ್ಸರ್ನ್ ನಂತಹ ಫೀಚರ್ಸ್ ಹೊಂದಿರಬಹುದು ಬೆಲೆ ವಿಚಾರವಾಗಿ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೂ, ಈಗಿರುವ ಮಾದರಿಗಳಿಗೆ ಹೋಲಿಸಿದರೆ, ಕೊಂಚ ಅಧಿಕ ದರ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ನೆಕ್ಸಾನ್ ಫೇಸ್‌ಲಿಫ್ಟ್‌ ಕ್ರಿಯೇಟಿವ್, ಫಿಯರ್‌ಲೆಸ್, ಪ್ಯೂರ್ ಮತ್ತು ಸ್ಮಾರ್ಟ್ ಎಂಬ ನಾಲ್ಕು ವಿಭಿನ್ನ ಟ್ರಿಮ್ ಹಂತಗಳಲ್ಲಿ ಲಭ್ಯವಾಗಲಿದೆ. ಇವುಗಳನ್ನು ಒಟ್ಟು 11 ರೂಪಾಂತರಗಳಾಗಿ ವಿಭಜಿಸಲಾಗಿದೆ. ಇನ್ನು ಹೊಸ ಕಾರಿನ ಹೊರ ಭಾಗದ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ನೆಕ್ಸಾನ್ ಫೇಸ್‌ಲಿಫ್ಟ್‌ನಲ್ಲಿ 16-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವ್ಹೀಲ್ ಹೊಸ ಸೇರ್ಪಡೆಯಾಗಿದೆ. ಇನ್ನು ಹಿಂಭಾಗದಲ್ಲಿ ನೆಕ್ಸಾನ್‌ ಈಗ ಪೂರ್ಣ ಅಗಲದ ಟೇಲ್ ಲೈಟ್ ಹೊಂದಿದೆ. ಇದನ್ನು ಎಕ್ಸ್‌ ಫ್ಯಾಕ್ಟರ್‌ ಟೇಲ್ ಲ್ಯಾಂಪ್ ಎಂದೂ ಕರೆಯಲಾಗುತ್ತದೆ.

WhatsApp Image 2023 09 02 at 8.35.42 PM

ಕ್ಯಾಬಿನ್ ಒಳಗೆ ಒಂದಷ್ಟು ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಟು ಸ್ಪೋಕ್‌, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಹೊಸ ಟಾಟಾ ನೆಕ್ಸಾನ್‌ ಫೇಸ್‌ಲಿಫ್ಟ್‌ನ ಕ್ಯಾಬಿನ್‌ನ ದೊಡ್ಡ ಬದಲಾವಣೆಗಳಲ್ಲಿ ಪ್ರಮುಖವಾದದ್ದು. ಎಚ್‌ವಿಎಸಿ ಯುನಿಟ್ ಈಗ ಟಚ್‌ ಪ್ಯಾನಲ್‌ ಆಗಿದೆ. ಇನ್ನು ಸೆಂಟರ್‌ ಕನ್ಸೋಲ್‌ ಹೊಸ ಗೇರ್‌ ಸೆಲೆಕ್ಟರ್‌ನೊಂದಿಗೆ ಹೆಚ್ಚು ಸುಂದರವಾಗಿ ಕಾಣುತ್ತದೆ. ಇದಲ್ಲದೆ, 2023 ಟಾಟಾ ನೆಕ್ಸಾನ್‌ ಫೇಸ್‌ಲಿಫ್ಟ್‌ ಹೊಸ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಅದೇ ಗಾತ್ರದ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನೂ ಹೊಂದಿದೆ.

ಇನ್ನು ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ ಟಾಟಾ ನೆಕ್ಸಾನ್‌ ಫೇಸ್‌ಲಿಫ್ಟ್‌ ಐಆರ್‌ಎ 2.0 ಕನೆಕ್ಟೆಡ್ ಟೆಕ್, ವಾಯ್ಸ್‌ ಅಸಿಸ್ಟೆಡ್ ಎಲೆಕ್ಟ್ರಿಕ್ ಸನ್‌ರೂಫ್‌, ಜಿಬಿಎಲ್‌ ನೈನ್ ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್‌ ಚಾರ್ಜರ್‌, ವೈರ್‌ಲೆಸ್‌ ಆಪಲ್ ಕಾರ್‌ ಪ್ಲೇ ಮತ್ತು ಆಂಡ್ರಾಯ್ಡ್‌ ಆಟೋ ಅನ್ನು ಹೊಂದಿದೆ. ಅದೂ ಅಲ್ಲದೆ, ಈ ವಿಭಾಗದಲ್ಲಿ ಮೊದಲು ಎಂಬಂತೆ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ನ್ಯಾವಿಗೇಷನ್‌ ಡಿಸ್‌ಪ್ಲೇ, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಸುರಕ್ಷತೆಗಾಗಿ ಹೊಸ ನೆಕ್ಸಾನ್ ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್‌ ಅನ್ನು ಹೊಂದಿದೆ. ಇದಲ್ಲದೆ, ಬ್ಲೈಂಡ್ ವ್ಯೂ ಮಾನಿಟರ್‌, ಆರು ಏರ್‌ಬ್ಯಾಗುಗಳು, ಹಿಲ್ ಹೋಲ್ಡ್‌ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸೇರಿ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಸ ನೆಕ್ಸಾನ್ ಫೇಸ್‌ಲಿಫ್ಟ್‌ನಲ್ಲಿ ಕಾಣಬಹುದಾಗಿದೆ.

WhatsApp Image 2023 09 02 at 8.38.05 PM

ಟಾಟಾ ಮೋಟಾರ್ಸ್, ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಎಸ್‌ಯುವಿಯ ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ನಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಈಗಿರುವ ಆವೃತ್ತಿಗಳಂತೆ 30.2 kWh ಹಾಗೂ 40.5 kWh ಬ್ಯಾಟರಿ ಪ್ಯಾಕ್ ಪಡೆದಿರಬಹುದು. ಅದಕ್ಕೆ ತಕ್ಕಂತೆ ಸಂಪೂರ್ಣ ಚಾರ್ಜಿನಲ್ಲಿ 312 km ನಿಂದ 453 km ರೇಂಜ್ ನೀಡಬಹುದು. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ನೆಕ್ಸಾನ್ ಇವಿ, ಪ್ರೈಮ್ ಹಾಗೂ ಮ್ಯಾಕ್ಸ್ ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ. ಮೊದಲಿಗೆ ನೆಕ್ಸಾನ್ ಇವಿ ಪ್ರೈಮ್ ಬಗ್ಗೆ ಮಾತನಾಡೋಣ. ಇದು, ರೂ.14.49 ಲಕ್ಷದಿಂದ ರೂ.17.19 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ನೆಕ್ಸಾನ್ ಇವಿ ಮ್ಯಾಕ್ಸ್ ರೂ.16.49 ಲಕ್ಷದಿಂದ ರೂ.19.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಇನ್ನು, ಟಾಟಾ ಮೋಟಾರ್ಸ್, ನೆಕ್ಸಾನ್ ಇವಿ ಮಾರಾಟದಿಂದಲೇ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಕಂಪನಿಯು ಮೂರು ವರ್ಷದಲ್ಲಿ ಮಾರಾಟ ಮಾಡಿದ ಒಂದು ಲಕ್ಷ ಇವಿಗಳಲ್ಲಿ ನೆಕ್ಸಾನ್ ಇವಿ ಪಾಲು ಅರ್ಧಕ್ಕಿಂತ ಹೆಚ್ಚಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist