ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರು ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು

Twitter
Facebook
LinkedIn
WhatsApp
2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರ ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು

ಬೆಳ್ತಂಗಡಿ: ನಾನು ಕಂಡ ಬಹುದೊಡ್ಡ ಜನಪರ ನಾಯಕ ವಸಂತ ಬಂಗೇರ. 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಅವರನ್ನು ಸ್ಪರ್ಧಿಸುವಂತೆ ಕೇಳಿಕೊಂಡಿದ್ದೆ. ಆದರೆ ಅವರು ಸ್ಪರ್ಧೆ ಮಾಡಲಿಲ್ಲ. ಒಂದು ವೇಳೆ ಅವರು ಸ್ಪರ್ಧೆ ಮಾಡುತ್ತಿದ್ದರೆ, ಗೆದ್ದು ಮಂತ್ರಿಯಾಗುತ್ತಿದ್ದರು. ಆದರೆ ಅವಕಾಶವು ತಪ್ಪಿ ಹೋಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.

ಬೆಳ್ತಂಗಡಿಯಲ್ಲಿ ನಡೆದ ಮಾಜಿ ಶಾಸಕ ವಸಂತ ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾವತ್ತೂ ಮಂತ್ರಿ ಪದವಿಗಾಗಿ ಅವರು ಲಾಭ ನಡೆಸಿದ್ದಿಲ್ಲ. ಕೇವಲ ಜನರ ಕೆಲಸಕ್ಕಾಗಿ ಮಾತ್ರ ನನ್ನ ಬಳಿಗೆ ಬಂದಿದ್ದರು. ಅಂತಹ ವ್ಯಕ್ತಿಯನ್ನು ಇದುವರೆಗೆ ನಾನು ನೋಡಿಲ್ಲ ಎಂದು ಅವರು ನುಡಿದರು.

ಐದು ಬಾರಿ ಶಾಸಕರಾಗಿದ್ದ ಕೆ.ವಸಂತ ಬಂಗೇರ

1946ರ ಜನವರಿ 15ರಂದು ಬೆಳ್ತಂಗಡಿಯಲ್ಲಿ ಜನಿಸಿದ ಕೆ. ವಸಂತ ಬಂಗೇರ ಅವರು, ಇದೇ ಕ್ಷೇತ್ರದಲ್ಲಿ 5 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದರು. ಮಾನ್ಯ ವಸಂತ ಬಂಗೇರ ಕೇವಲ ಕಾಂಗ್ರೆಸ್​ ನಾಯಕರಾಗಿ ಮಾತ್ರವಲ್ಲದೆ, ಬಿಜೆಪಿ, ಜೆಡಿಎಸ್​ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಈ ಮೂರೂ ಪಕ್ಷಗಳಲ್ಲಿಯೂ ಚುನಾವಣೆಗೆ ನಿಂತಿದ್ದರು. 1983 ಮತ್ತು 1985ರಲ್ಲಿ ವಸಂತ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ವೇಳೆ ಎರಡು ಬಾರಿಯು ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ನಂತರ ಮತ್ತೆ 1989ರಲ್ಲಿ ಪಕ್ಷೇತರರಾಗಿ ನಿಂತು ಚುನಾವಣೆಯಲ್ಲಿ  ಸೋಲು ಕಂಡಿದ್ದರು. ಆ ನಂತರ ಮತ್ತೆ 1994ರಲ್ಲಿ ಜನತಾದಳದಲ್ಲಿ ನಿಂತು ಗೆಲುವು ಸಾಧಿಸಿದ್ದಾರೆ.

1999 ರಿಂದ 2008ರ ವರೆಗೆ ಬೆಳ್ತಂಗಡಿ ಕ್ಷೇತ್ರ 2 ಬಾರಿ ನಿರಂತರವಾಗಿ ಗೆಲುವು ಕಂಡಿತ್ತು. ಈ ವೇಳೆ ವಸಂತ ಬಂಗೇರ ಸಹೋದರ ಪ್ರಭಾಕರ ಬಂಗೇರ ಅವರೇ ಬಿಜೆಪಿಯಿಂದ ಸ್ಪರ್ಧಿಸಿ ವಸಂತ ಬಂಗೇರರನ್ನು ಸೋಲಿಸಿದ್ದರು. ಆ ನಂತರ ಮತ್ತೆ 2008 ರಲ್ಲಿ ವಸಂತ ಬಂಗೇರರು ಕಾಂಗ್ರೆಸ್ ನಿಂದ ಸ್ಪರ್ಧಿಸಿ, ತನ್ನ ಸಹೋದರ ಪ್ರಭಾಕರ ಬಂಗೇರರನ್ನು ಸೋಲಿಸಿದರು. ಅದೇ ರೀತಿ 2013 ರಲ್ಲಿ ಮತ್ತೆ ಕಾಂಗ್ರೆಸ್​ನಿಂದಲೇ ಗೆದ್ದು ಶಾಸಕನಾಗಿ ಆಯ್ಕೆ ಆಗಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ