ಮತ್ತೆ ರೋಚಕ ಘಟ್ಟಕ್ಕೆ ಮುಖ್ಯಮಂತ್ರಿ ಬದಲಾವಣೆ. ಇಂದು ರಾತ್ರಿ ಹೈಕಮಾಂಡ್ ನಿಂದ ಸಂದೇಶ?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಪ್ರವಾಸ ಮುಗಿಸಿ ಬೆಂಗಳೂರಿಗೆ ತಲುಪಿದ್ದಾರೆ.
ಬಿಎಸ್‌ವೈ ಸಿಎಂ ಸ್ಥಾನ ಸೇಫ್?
ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಇಂದು (ಭಾನುವಾರ) ಸಂಜೆ ತಮ್ಮ ನಿರ್ಧಾರವೇನು ಎಂದು ತಿಳಿಸಲಿದೆ. ಹೈಕಮಾಂಡ್ ಸಂದೇಶದಂತೆ ತಮ್ಮ ಮುಂದಿನ ನಿರ್ಧಾರವನ್ನು ತೀರ್ಮಾನಿಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಭಾರತ ಜೋಡಿಸಿ ಆಂದೋಲನ ಆರಂಭಿಸಲು ಪ್ರಧಾನಿ ಮೋದಿ ಕರೆ.
‘ರಾಷ್ಟ್ರ ಮೊದಲು, ಯಾವಾಗಲೂ ಮೊದಲು’ ಎನ್ನುವ ಮಂತ್ರದೊಂದಿಗೆ ದೇಶವು ಮುನ್ನಡೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಶಿಲ್ಪ ಶೆಟ್ಟಿ ಪರ ಬ್ಯಾಟಿಂಗ್ ಮಾಡಿದ ತಂಗಿ ಶಮಿತಾ ಶೆಟ್ಟಿ.
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿ ಚಿತ್ರಗಳ ದಂಧೆಯಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ಇದರಿಂದ ಶಿಲ್ಪಾ ಶೆಟ್ಟಿಗೂ ಕೆಟ್ಟ ಹೆಸರು ಬಂದಿದೆ. ಮಾಡೆಲ್ ಮತ್ತು ನಟಿಯರನ್ನು ಬಳಸಿಕೊಂಡು ರಾಜ್ ಕುಂದ್ರಾ ಅಶ್ಲೀಲ ಸಿನಿಮಾಗಳನ್ನು ಮಾಡುತ್ತಿದ್ದರು ಎಂಬ ಆರೋಪ ಎದುರಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭೂಕುಸಿತ – 21 ಮಂದಿ ಬಲಿ, 8 ಜನರು ನಾಪತ್ತೆ.
ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಮಳೆರಾಯನ ಆರ್ಭಟ ಹೆಚ್ಚಾಗಿದ್ದು, ಮಳೆಯ ಪರಿಣಾಮ ಕೊಲ್ಲಾಪುರ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ 21 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಂಜೆಯೊಳಗೆ ಹೈಕಮಾಂಡ್ ಸಂದೇಶ– ನಾಳೆ ಸಿಎಂ ಪದತ್ಯಾಗ?
ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಇಂದು ಸಂಜೆಯೊಳಗೆ ಹೈಕಮಾಂಡ್ನಿಂದ ಸಂದೇಶ ಬರಲಿದೆ.
ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ:ಮಧು ಬಂಗಾರಪ್ಪ .
ಬಿಜೆಪಿ ಕೇವಲ ವ್ಯವಹಾರ ನಡೆಸಲೆಂದು ಅಧಿಕಾರಕ್ಕೆ ಬರುತ್ತೆ. ಬಂದು ದೇಶ ಲೂಟಿ ಮಾಡಿ ಹಾಳು ಮಾಡಿ ಹೋಗುತ್ತೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀರಾಬಾಯಿಗೆ ಒಂದು ಕೋಟಿ ರೂಪಾಯಿ. ಸರ್ಕಾರಿ ಹುದ್ದೆ!
ಟೋಕಿಯೋ ಒಲಿಂಪಿಕ್ಸ್ನ ಮೊದಲ ದಿನವೇ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯಿ ಚಾನುಗೆ ದೇಶಾದ್ಯಂತ ಸಾಕಷ್ಟು ಪ್ರಶಂಸೆಗಳ ಸುರಿಪ್ರಮಳೆ ಹರಿದುಬರುತ್ತಿದೆ.
ಅಕ್ರಮ ಸಂಬಂಧಕ್ಕೆ ವಿಶಾಲಾ ಗಾಣಿಗ ಹತ್ಯೆ?
ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ವಿಶಾಲಾ ಗಾಣಿಗ ಕೊಲೆ ಪ್ರಕರಣದಲ್ಲಿ ಒಂದೊಂದೇ ಸೀಕ್ರೆಟ್ ಬಯಲಾಗುತ್ತಿದೆ.
ಕಾಸರಗೋಡು ನ ಸೀತಂಗೊಳಿ ಯಲ್ಲಿ ತಮ್ಮನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಅಣ್ಣ!
ತಮ್ಮನನ್ನು ಅಣ್ಣ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ಸೀತಾಂಗೋಳಿಯ ಮುಗು ಎಂಬಲ್ಲಿ ನಡೆದಿದೆ.