2 ವರ್ಷದ ಬಾಲಕಿ ಮೇಲೆ ಪ್ರಾಂಶುಪಾಲನಿಂದ ಅತ್ಯಾಚಾರ; ಬಂಧನ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪ್ರಾಂಶುಪಾಲನೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ಓದುತ್ತಿದ್ದ 10 ವರ್ಷದ ವಿದ್ಯಾರ್ಥಿನಿ ಮೇಲೆ ಶಾಲಾ ಸಂಸ್ಥಾಪಕ ಮತ್ತು ಪ್ರಾಂಶುಪಾಲರಿಂದಲೇ ಅತ್ಯಾಚಾರ ನಡೆದಿರುವ ಘಟನೆ ವರ್ತೂರು ಸಮೀಪದ ಗುಂಜೂರು ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಎಂದಿನಂತೆ ಗುರುವಾರ ಬೆಳಗ್ಗೆ 8.30ಕ್ಕೆ ಶಾಲೆಗೆ ಹೋಗಿದ್ದ ಬಾಲಕಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡು ಅತ್ಯಾಚಾರವೆಸಗಿ ನಂತರ ಕೇಕ್ ಕೊಟ್ಟು ತಿನ್ನಸಿ ಸಮಾಧಾನ ಮಾಡಿ ಮನೆಗೆ ಕಳಹಿಸಿದ್ದನು. ಆ ನಂತರ ಮನೆಗೆ ಬಂದ ಬಾಲಕಿ ಹೊಟ್ಟೆನೋವು ಎಂದು ಹೇಳಿದ್ದಳು
ಬಾಲಕಿ ತಾಯಿ ಸ್ನಾನ ಮಾಡಿಸಲು ಕರೆದುಕೊಂಡು ಹೋದಾಗ ರಕ್ತದ ಕಲೆಗಳನ್ನು ನೋಡಿ ಶಾಲೆಯಲ್ಲಿ ಏನಾಗಿದೆ ಎಂದು ಕೇಳಿದಾಗ ಬಾಲಕಿ ಎಲ್ಲಾ ವಿಷಯವನ್ನು ಅಮ್ಮನ ಬಳಿ ತಿಳಿಸಿದ್ದಾಳೆ. 10 ವರ್ಷದ ಮಗು ನರದೌರ್ಬಲ್ಯ( Mild Dyslexia oct) ಕಾಯಿಲೆಯಿಂದ ಬಳಲುತ್ತಿದ್ದಳು.
ಆ ನಂತರ ತಾಯಿ ವರ್ತೂರು ಪೊಲೀಸರಿಗೆ ದೂರು ನೀಡಿದ ಬಳಿಕ ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮುಕನನ್ನು ಅರೆಸ್ಟ್ ಮಾಡಿದ್ದಾರೆ.ಆ ಪುಟ್ಟ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಚಿಕ್ಕಬಳ್ಳಾಪುರ: ತಂದೆ-ಮಗನ ಜಗಳ ಬೀಡಿಸಲು ಹೋದ ಚಿಕ್ಕಪ್ಪನ ಕೊಲೆಗೆ ಯತ್ನ!
ಚಿಕ್ಕಬಳ್ಳಾಪುರ, ಆಗಸ್ಟ್ 4: ಹಣಕಾಸಿನ ವಿಚಾರದಲ್ಲಿ ತಂದೆ ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ಚಿಕ್ಕಪ್ಪನನ್ನೇ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಲು ಯತ್ನಿಸಿದ (Murder Attempt) ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ-ಪಾಳ್ಯಾ ಗ್ರಾಮದಲ್ಲಿ ನಡೆದಿದೆ.
ಕೂಡಲೇ ರಾಮರೆಡ್ಡಿ ತನ್ನ ಮಗ ಅಶೋಕ್ ಕುಮಾರ್ ಜೊತೆ ನಾರಾಯಣರೆಡ್ಡಿಯ ರಕ್ಷಣೆಗೆ ಮುಂದಾಗಿ ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಲೊಕೇಶ ತನ್ನ ಚಿಕ್ಕಪ್ಪ ರಾಮರೆಡ್ಡಿಯನ್ನು ಮೊದಲನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ.
ಘಟನೆಯಲ್ಲಿ ರಾಮರೆಡ್ಡಿ ತಲೆಗೆ ಗಾಯಗಳಾಗಿದ್ದು, ಎರಡೂ ಕೈಗಳಿಗೆ ಗಾಯವಾಗಿವೆ. ಹೀಗಾಗಿ ರಾಮರೆಡ್ಡಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ ಅಶೋಕ್ ಕುಮಾರ್, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಕಲಂ 323, 325 ಐಪಿಸಿ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.