2 ನೇ ಸುತ್ತಿನಲ್ಲಿ ಡಿ.ಕೆ ಶಿವಕುಮಾರ್ ಗೆ 10000 ಮತಗಳ ಭಾರಿ ಮುನ್ನಡೆ!
ಆರ್. ಅಶೋಕ್ ಸ್ಪರ್ಧೆಯಿಂದಾಗಿ ಕನಕಪುರ ಕ್ಷೇತ್ರ ಈ ಬಾರಿ ಕುತೂಹಲದ ಕಣ್ಣುಗಳಿಗೆ ಆಹಾರವಾಗಿದೆ. ಕಂದಾಯ ಸಚಿವರ ಸ್ಪರ್ಧೆಯ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಭದ್ರಕೋಟೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇಲ್ಲಿ ಬಿಜೆಪಿಯ ಅಭ್ಯರ್ಥಿ ಆರ್. ಅಶೋಕ್ ಹಿನ್ನಡೆ ಅನುಭವಿಸುತ್ತಿದ್ದಾರೆ.
ಮೊದಲ ಸುತ್ತಿನ ಏಣಿಕೆ ಅಂತ್ಯಕ್ಕೆ ಡಿ.ಕೆ.ಶಿವಕುಮಾರ್ 6657 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್‌ನ ನಾಗರಾಜ್ 990 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ಆರ್. ಅಶೋಕ್ ಕೇವಲ 658 ಮತಗಳನ್ನು ಪಡೆದುಕೊಂಡಿದ್ದಾರೆ.
ಎರಡನೇ ಸುತ್ತಿನಲ್ಲಿ ಡಿಕೆ ಶಿವಕುಮಾರ್ 5,885 ಮತಗಳನ್ನು ಪಡೆದಿದ್ದರೆ, ಜೆಡಿಎಸ್ ನಾಗರಾಜ್ 1,822 ಹಾಗೂ ಆರ್. ಅಶೋಕ್ 658 ಮತ ಪಡೆದುಕೊಂಡಿದ್ದಾರೆ.
ಎರಡು ಸುತ್ತು ಸೇರಿ ಡಿಕೆಶಿ 12,542 ಮತಗಳನ್ನು ಪಡೆದುಕೊಂಡಿದ್ದರೆ, ನಾಗರಾಜ್ 2,812 , ಆರ್. ಅಶೋಕ್ 1,316 ಮತಗಳನ್ನು ಪಡೆದಿದ್ದಾರೆ.
ಡಿಕೆ ಶಿವಕುಮಾರ್ 9,730 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ
ಕನಕಪುರ ಮೊದಲಿನಿಂದಲೂ ಕಾಂಗ್ರೆಸ್‌ನ, ಅದರಲ್ಲೂ ಡಿಕೆ ಶಿವಕುಮಾರ್ ಅವರ ಭದ್ರಕೋಟೆ. ಈ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಆರ್. ಅಶೋಕ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಡಿಕೆಶಿ ಅವರಿಗೆ ಮೂಗುದಾರ ಹಾಕುವ ಯತ್ನ ನಡೆಸಿದೆ. ಆದರೆ ಇದು ಫಲ ನೀಡಿದಂತೆ ಕಾಣಿಸುತ್ತಿಲ್ಲ.
ಈ ಬಾರಿ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1,11,030 ಪುರುಷ ಮತದಾರರು, 1,13,921ಮಹಿಳೆಯರು, 5 ಇತರ ಮತದಾರರು ಸೇರಿ ಒಟ್ಟು 2,24,956 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಮೇ 10ರಂದು ನಡೆದಿದ್ದ ಮತದಾನದ ವೇಳೆ ಕ್ಷೇತ್ರದಲ್ಲಿ ಶೇ.84.74ರಷ್ಟು ಭಾರೀ ಮತದಾನ ನಡೆದಿತ್ತು.
ಕ್ರ.ಸಂ. | ಅಬ್ಯರ್ಥಿ | ಪಕ್ಷ | ಫಲಿತಾಂಶ |
1 | ಆರ್. ಅಶೋಕ್ | ಬಿಜೆಪಿ | ಹಿನ್ನಡೆ |
2 | ಕೃಷ್ಣ ಎಂ.ಎನ್. | ಬಿಎಸ್ಪಿ | ಹಿನ್ನಡೆ |
3 | ಬಿ ನಾಗರಾಜು | ಜೆಡಿಎಸ್ | ಹಿನ್ನಡೆ |
4 | ಇ ಪುಟ್ಟರಾಜು | ಎಎಪಿ | ಹಿನ್ನಡೆ |
5 | ಡಿ.ಕೆ. ಶಿವಕುಮಾರ್ | ಕಾಂಗ್ರೆಸ್ | ಮುನ್ನಡೆ |
6 | ಕೆಂಪೇಗೌಡ | ನವಭಾರತ್ ಸೇನಾ | ಹಿನ್ನಡೆ |
7 | ಕೆ.ಆರ್.ಎಸ್. ಪ್ರಶಾಂತ್ ಹೊಸದುರ್ಗ | ಕೆಆರ್ಎಸ್ | ಹಿನ್ನಡೆ |
8 | ಮನಮೋಹನ್ ರಾಜ್ ಕೆ.ಎನ್. | ಪ್ರಜಾಕೀಯ | ಹಿನ್ನಡೆ |
9 | ಶ್ರೀಧರ ಕೆ.ಆರ್. | ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ | ಹಿನ್ನಡೆ |
10 | ನಾಗರಾಜು ಎಸ್.ಜೆ. | ಪಕ್ಷೇತರ | ಹಿನ್ನಡೆ |
11 | ಮಲ್ಲಿಕಾರ್ಜುನಯ್ಯ | ಪಕ್ಷೇತರ | ಹಿನ್ನಡೆ |
12 | ಶಿವರೇಣುಕ | ಪಕ್ಷೇತರ | ಹಿನ್ನಡೆ |
13 | ನಲ್ಲಹಳ್ಳಿ ಶ್ರೀನಿವಾಸ್ | ಪಕ್ಷೇತರ | ಹಿನ್ನಡೆ |
14 | ಷಡಕ್ಷರಿ ಎ.ಎನ್. | ಪಕ್ಷೇತರ | ಹಿನ್ನಡೆ |
15 | ಸುನಿಲ್ ಕುಮಾರ್ | ಪಕ್ಷೇತರ | ಹಿನ್ನಡೆ |
ಕ್ಷೇತ್ರದಲ್ಲಿ ಒಟ್ಟು 1,11,030 ಪುರುಷ ಮತದಾರರು, 1,13,921 ಮಹಿಳೆಯರು, 5 ಇತರ ಮತದಾರರು ಸೇರಿ ಒಟ್ಟು 2,24,956 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಮೇ 10ರಂದು ನಡೆದಿದ್ದ ಮತದಾನದ ವೇಳೆ ಇವರಲ್ಲಿ ಶೇ.84.52ರಷ್ಟು ಮತದಾರರು ಮತ ಚಲಾಯಿಸುವ ಮೂಲಕ ಭಾರೀ ಮತದಾನ ನಡೆದಿತ್ತು.
2018ರಲ್ಲಿ ಇಲ್ಲಿ ಡಿಕೆ ಶಿವಕುಮಾರ್ ಅವರೇ ಜಯ ದಾಖಲಿಸಿದ್ದರು. ಈ ಹಿಂದೆ ಸಾತನೂರಿನಿಂದ ಸ್ಪರ್ಧಿಸುತ್ತಿದ್ದ ಅವರು 2008ರ ಕ್ಷೇತ್ರ ವಿಂಗಡಣೆ ಬಳಿಕ ಕನಕಪುರಕ್ಕೆ ಬಂದು ಸತತ ಜಯ ಸಾಧಿಸುತ್ತಾ ಬಂದಿದ್ದಾರೆ. 2018ರ ಚುನಾವಣೆಯಲ್ಲಿ ಅವರು 1,27,552 ಮತಗಳನ್ನು ಪಡೆದು 47,643 ಮತಗಳನ್ನು ಪಡೆದಿದ್ದ ಜೆಡಿಎಸ್‌ನ ನಾರಾಯಣಗೌಡ ವಿರುದ್ಧ 79,909 ಭಾರೀ ಅಂತರದಿಂದ ಜಯ ಸಾಧಿಸಿದ್ದರು.