2ನೇ ಮದುವೆಗಾಗಿ ಕೊರಗಜ್ಜನಲ್ಲಿ ಪ್ರಾರ್ಥಿಸಿದ ನಟಿ ಪ್ರೇಮಾ
ಕೊಡಗಿನ ಬೆಡಗಿ ಪ್ರೇಮಾ (Prema) ಕೊರಗಜ್ಜನ (Koragajja) ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೊರಗಜ್ಜ ದೈವದ ಬಳಿ ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ಬೇಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಪು ಕೊರಗಜ್ಜ ಸನ್ನಿಧಿಗೆ ಬಂದಿದ್ದ ಪ್ರೇಮಾ, ಭಕ್ತಿಯಿಂದ ಎರಡನೇ ಮದುವೆಗೆ (Marriage) ಕರುಣಿಸು ಎಂದು ಪಾರ್ಥಿಸಿದ್ದಾರಂತೆ. ಖಾಸಗಿ ಕಾರ್ಯಕ್ರಮಕ್ಕೆಂದು ಬಂದಿದ್ದ ಅವರು, ಇದೇ ಸಂದರ್ಭದಲ್ಲಿ ಕೊರಗಜ್ಜ ಸನ್ನಿಧಿಗೂ ಭೇಟಿ ನೀಡಿದ್ದಾರೆ.
ಈಗಾಗಲೇ ಅವರು ವರ ನೋಡಿದ್ದು ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ಪ್ರೇಮಾ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಉಡುಪಿ ಜಿಲ್ಲೆಯ ಕಾಪುವಿನ ಕೊರಗಜ್ಜ ದೈವ ಸನ್ನಿಧಾನಕ್ಕೆ ಭೇಟಿ ಕೊಟ್ಟ ನಂತರ ಅವರು ಕಾಪುವಿನ ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಪ್ರೇಮಾಗೆ ಸಹೋದರ ಅಯ್ಯಪ್ಪ ಹಾಗೂ ಅಯ್ಯಪ್ಪ ಪತ್ನಿ ಅನು ಕೂಡ ಜೊತೆಯಾಗಿದ್ದರು.
ಪ್ರೇಮಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೊಂದಾಣಿಕೆಯ ಕಾರಣದಿಂದಾಗಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದಿದ್ದರು. ಆನಂತರ ಅವರು ರೆಡಿಯೋ ಜಾಕಿಯೊಬ್ಬರನ್ನು ಮದುವೆಯಾಗಿದ್ದಾರೆ ಎಂದು ಗಾಸಿಪ್ ಎದ್ದಿತ್ತು. ಅದಕ್ಕೆ ತೆರೆ ಕೂಡ ಎಳೆದಿದ್ದರು. ಇದೀಗ ಪ್ರೇಮಾ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ದೈವದಲ್ಲಿ ಅವರು ಪ್ರಾರ್ಥಿಸಿದ್ದಾರೆ.