ಗುರುವಾರ, ಮೇ 2, 2024
ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

18ರ ಯುವ ದಾಂಡಿಗ ಚೊಚ್ಚಲ ಪಂದ್ಯದಲ್ಲೇ ಕಮಾಲ್; KKR ಭರ್ಜರಿ ಗೆಲುವು

Twitter
Facebook
LinkedIn
WhatsApp
18ರ ಯುವ ದಾಂಡಿಗ ಚೊಚ್ಚಲ ಪಂದ್ಯದಲ್ಲೇ ಕಮಾಲ್; KKR ಭರ್ಜರಿ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಶುರುವಾಗಿ 16 ವರ್ಷಗಳೇ ಕಳೆದಿವೆ. ಇದುವರೆ 16 ಸೀಸನ್​ಗಳನ್ನು ಆಡಲಾಗಿದ್ದು, ಇದೀಗ 17ನೇ ಸೀಸನ್ ಚಾಲ್ತಿಯಲ್ಲಿದೆ. ಈ ಎಲ್ಲಾ ಸೀಸನ್​ಗಳನ್ನು ಆಡಿದ ತಂಡಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಒಂದು. ಆದರೆ ಕಳೆದ ಹದಿನಾರು ಸೀಸನ್​ಗಳಲ್ಲಿ ಒಮ್ಮೆಯೂ ಕೆಕೆಆರ್ ಮೊದಲ ಮೂರು ಪಂದ್ಯಗಳನ್ನು ಗೆದ್ದಿರಲಿಲ್ಲ ಎಂಬುದು ವಿಶೇಷ.

 

ಆದರೆ ಈ ಬಾರಿ ಕೆಕೆಆರ್ ಬಾಯ್ಸ್ ಹೊಸ ಅಧ್ಯಾಯ ಬರೆದಿದ್ದಾರೆ. ಅದು ಸಹ ಭರ್ಜರಿ ಗೆಲುವುಗಳ ಮೂಲಕ ಎಂಬುದು ವಿಶೇಷ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 4 ರನ್​ಗಳ ರೋಚಕ ಜಯದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ್ದ ಕೆಕೆಆರ್, ಆ ಬಳಿಕ ಆರ್​ಸಿಬಿ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು.

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೆಕೆಆರ್ 106 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್​ ಸೀಸನ್​ನ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ ಕಳೆದ 16 ಸೀಸನ್​ಗಳಲ್ಲಿ ಸಾಧ್ಯವಾಗದ ಉತ್ತಮ ಆರಂಭವನ್ನು ಪಡೆಯುವಲ್ಲಿ ಕೆಕೆಆರ್ ಪಡೆ ಯಶಸ್ವಿಯಾಗಿದೆ.

ಸದ್ಯ ಮೂರು ಗೆಲುವುಗಳೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದು, ಒಟ್ಟು 6 ಅಂಕಗಳನ್ನು ಹೊಂದಿದೆ. ಹಾಗೆಯೇ ಕೆಕೆಆರ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +2.518 ಇರುವುದು ವಿಶೇಷ. ಅಂದರೆ ಆರಂಭದಲ್ಲೇ ಉತ್ತಮ ರನ್ ರೇಟ್ ಸಂಪಾದಿಸುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಿದೆ.

ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ತನ್ನ ಮುಂದಿನ ಪಂದ್ಯವನ್ನು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಆಡಲಿದೆ. ಏಪ್ರಿಲ್ 8 ರಂದು ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲೂ ಕೆಕೆಆರ್ ಆಟಗಾರರಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

RCB ಯಾವತ್ತೂ ಕಪ್ ಗೆಲ್ಲಲ್ಲ ಎಂದ CSK ಮಾಜಿ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 16 ಪಂದ್ಯಗಳು ಮುಗಿದಿವೆ. ಇದರ ಬೆನ್ನಲ್ಲೇ ಯಾರು ಬಲಿಷ್ಠ, ಯಾವ ತಂಡ ಕನಿಷ್ಠ ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನವನ್ನು ವಿಮರ್ಶಿಸಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಅಂಬಾಟಿ ರಾಯುಡು, ಆರ್​ಸಿಬಿ ತಂಡದ್ದು ಯಾವಾಗಲೂ ಇದೇ ಪರಿಸ್ಥಿತಿ. ಅವರು ಎಂದಿಗೂ ಒತ್ತಡವನ್ನು ಮೀರಿ ಪಂದ್ಯವಾಡಿಲ್ಲ. ತಂಡದ ಅಗ್ರಸ್ಥಾನದಲ್ಲಿರುವ ಪ್ರಮುಖ ಆಟಗಾರರು ಎಂದಿಗೂ ಉತ್ತಮ ಪ್ರದರ್ಶನ ನೀಡುವುದಿಲ್ಲ. ಇದುವೇ ಆರ್​ಸಿಬಿ ಸೋಲಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 16 ಸೀಸನ್​ಗಳಿಂದಲೂ ಆರ್​ಸಿಬಿ ಪ್ರಶಸ್ತಿ ಗೆದ್ದಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಬೌಲಿಂಗ್ ಲೈನಪ್. ಆರ್​ಸಿಬಿ ತಂಡದ ಬೌಲಿಂಗ್ ಘಟಕ ಯಾವಾಗಲೂ ಸಾಕಷ್ಟು ರನ್ ಸೋರಿಕೆ ಮಾಡುತ್ತದೆ. ಅವರ ಬ್ಯಾಟರ್​ಗಳು ಕಲೆಹಾಕುವ ರನ್​ ಗತಿಗಿಂತ ಆರ್​ಸಿಬಿ ಬೌಲರ್​ಗಳು ಹೆಚ್ಚಿನ ರನ್​ಗಳನ್ನು ಬಿಟ್ಟು ಕೊಡುತ್ತಿರುತ್ತಾರೆ ಎಂದು ರಾಯುಡು ಹೇಳಿದ್ದಾರೆ.

ಆರ್​ಸಿಬಿ ಬ್ಯಾಟರ್​ಗಳು ಕಲೆಹಾಕುವ ಪ್ರತಿ ಓವರ್​ ಸರಾಸರಿ ರನ್​ಗಿಂತ ಬೌಲರ್​ಗಳು ನೀಡುವ ಸರಾಸರಿ ರನ್​ಗಳೇ ಜಾಸ್ತಿ ಇರುತ್ತದೆ. ಒಂದು ರೀತಿಯಲ್ಲಿ ಬ್ಯಾಟರ್​ ಮತ್ತು ಬೌಲರ್​ಗಳು ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇನ್ನು ಆರ್‌ಸಿಬಿ ತಂಡ ಒತ್ತಡದಲ್ಲಿರುವಾಗ ಅವರ ಯಾವುದೇ ಪ್ರಮುಖ ಬ್ಯಾಟರ್ ಆಡಲ್ಲ. ಹೀಗಾಗಿಯೇ ಆರ್​ಸಿಬಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.ಅಷ್ಟೇ ಅಲ್ಲದೆ ಹೀಗೆ ಬ್ಯಾಟಿಂಗ್-ಬೌಲಿಂಗ್ ಸರಿ ಸಮಾನವಾಗಿ ರನ್​ ಸರಾಸರಿ ಹೊಂದಿರುವ ಆರ್​ಸಿಬಿ ತಂಡವು ಎಂದಿಗೂ ಕಪ್ ಗೆಲ್ಲಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸಾಕ್ಷಿಯೇ ಕಳೆದ 16 ಸೀಸನ್​ಗಳು. ಈ ಕಥೆ ಈ ಬಾರಿ ಕೂಡ ಮುಂದುವರೆಯುವ ಸಾಧ್ಯತೆಯಿದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ