ಗುರುವಾರ, ಏಪ್ರಿಲ್ 25, 2024
ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!-ಶುಕ್ರವಾರ ಮತದಾನದಂದು ಮತಗಟ್ಟೆಯಲ್ಲಿ ಮೊಬೈಲ್ ಫೋನ್ ಕೊಂಡೊಯ್ಯಲು ನಿಷೇಧ..!-164.53 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಕೊಂಡ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್!-ರಾಮನ ಚಿತ್ರವಿದ್ದ ಪೇಪರ್ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ಮಾರಾಟ; ಆಕ್ರೋಶದ ಬಳಿಕ ಮಾಲೀಕ ಅರೆಸ್ಟ್.!-ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ; ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ: ಪ್ರಿಯಾಂಕಾ ಗಾಂಧಿ-ಬರ್ತ್ ಡೇ ಕೇಕ್ ತಿಂದು ಬಾಲಕಿ ಸಾವು ಪ್ರಕರಣ: ಅಸಲಿ ಕಾರಣ ಬಯಲು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

16ನೇ ಐಪಿಎಲ್‌ಗೆ ಕ್ಷಣಗಣನೆ; ಅಭಿಮಾನಿಗಳಲ್ಲಿ ಜೋರಾಯ್ತು ಐಪಿಎಲ್ ಜ್ವರ

Twitter
Facebook
LinkedIn
WhatsApp
All about coconut tree 24

ಅಹ​ಮ​ದಾ​ಬಾ​ದ್‌(ಮಾ.30): ಬಹು​ನಿ​ರೀ​ಕ್ಷಿತ 16ನೇ ಆವೃತ್ತಿಯ ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌​(​ಐ​ಪಿ​ಎ​ಲ್‌​)ಗೆ ದಿನ​ಗ​ಣನೆ ಆರಂಭ​ವಾ​ಗಿದ್ದು, ಎಲ್ಲಾ ಹತ್ತೂ ತಂಡ​ಗಳು ಟೂರ್ನಿಗೆ ಸಜ್ಜು​ಗೊ​ಳ್ಳು​ತ್ತಿವೆ. ಮಾ.31ರಂದು ಅಹ​ಮ​ದಾ​ಬಾ​ದ್‌ನ ನರೇಂದ್ರ ಮೋದಿ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ ಹಾಲಿ ಚಾಂಪಿ​ಯನ್‌ ಗುಜ​ರಾತ್‌ ಜೈಂಟ್ಸ್‌ ಹಾಗೂ ಮಾಜಿ ಚಾಂಪಿ​ಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ ನಡು​ವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗ​ಲಿದೆ.

ಈಗಾ​ಗಲೇ ಬಹು​ತೇಕ ಎಲ್ಲಾ ಭಾರ​ತೀಯ ಆಟ​ಗಾ​ರರು ತಮ್ಮ ತಮ್ಮ ತಂಡ​ಗ​ಳನ್ನು ಕೂಡಿ​ಕೊಂಡಿದ್ದು, ವಿದೇಶಿ ಆಟ​ಗಾ​ರರು ಕೂಡಾ ಭಾರ​ತಕ್ಕೆ ಆಗ​ಮಿ​ಸು​ತ್ತಿ​ದ್ದಾ​ರೆ. ಆರ್‌​ಸಿ​ಬಿಯ ಬಹು​ತೇಕ ಎಲ್ಲಾ ಆಟ​ಗಾ​ರರು ಬೆಂಗ​ಳೂ​ರಿಗೆ ಆಗ​ಮಿಸಿ ತಂಡ ಸೇರಿದ್ದು, ಬೆಂಗ​ಳೂ​ರಿನ ಚಿನ್ನ​ಸ್ವಾಮಿ ಕ್ರೀಡಾಂಗ​ಣ​ದಲ್ಲಿ ಅಭ್ಯಾಸ ನಡೆ​ಸು​ತ್ತಿ​ದ್ದಾರೆ. ಐಪಿ​ಎಲ್‌ನ ಅತಿ ದುಬಾರಿ ಆಟ​ಗಾರ ಸ್ಯಾಮ್‌ ಕರ್ರನ್‌, ಚೆನ್ನೈ ತಂಡ​ದ ಬೆನ್‌ ಸ್ಟೋಕ್ಸ್‌, ಮುಂಬೈನ ಕ್ಯಾಮ​ರೂನ್‌ ಗ್ರೀನ್‌, ಆರ್‌​ಸಿ​ಬಿಯ ಗ್ಲೆನ್‌ ಮ್ಯಾಕ್ಸ್‌​ವೆಲ್‌, ಗುಜ​ರಾ​ತ್‌ ಜೈಂಟ್ಸ್‌ನ ಕೇನ್‌ ವಿಲಿ​ಯ​ಮ್ಸನ್‌, ಡೆಲ್ಲಿ ನಾಯಕ ಡೇವಿಡ್‌ ವಾರ್ನರ್‌ ಸೇರಿ​ದಂತೆ ಪ್ರಮು​ಖರು ತಮ್ಮ ತಮ್ಮ ತಂಡ​ಗ​ಳನ್ನು ಸೇರ್ಪ​ಡೆ​ಗೊಂಡಿ​ದ್ದಾರೆ. ರೋಹಿತ್‌ ಶರ್ಮಾ ಮುಂಬೈ ತಂಡದ ಜೊತೆ​ಗಿದ್ದು, ಇನ್ನಷ್ಟೇ ಅಭ್ಯಾಸ ಆರಂಭಿ​ಸ​ಲಿ​ದ್ದಾರೆ. ಗುಜ​ರಾತ್‌ ಪ್ರಮುಖ ಬ್ಯಾಟರ್‌ ಡೇವಿಡ್‌ ಮಿಲ್ಲ​ರ್‌, ಲಖನೌ ತಂಡದ ಕ್ವಿಂಟನ್‌ ಡಿಕಾಕ್‌, ಪಂಜಾ​ಬ್‌ನ ಕಾಗಿಸೊ ರಬಾಡ, ಡೆಲ್ಲಿಯ ಏನ್ರಿಚ್‌ ನೋಕಿಯಾ, ಲುಂಗಿ ಎನ್‌​ಗಿಡಿ, ಹೈದ​ರಾ​ಬಾದ್‌ ನಾಯಕ ಏಡನ್‌ ಮಾರ್ಕ್​ರಮ್‌ ಸೇರಿ​ದಂತೆ ಪ್ರಮುಖ ಆಟ​ಗಾ​ರರು ಇನ್ನಷ್ಟೇ ಭಾರ​ತಕ್ಕೆ ಆಗ​ಮಿ​ಸ​ಲಿದ್ದು, ಐಪಿ​ಎ​ಲ್‌ನ ಮೊದಲ ಮತ್ತು ಆರಂಭಿಕ ಕೆಲ ಪಂದ್ಯ​ಗ​ಳಿಗೆ ಅಲ​ಭ್ಯ​ರಾ​ಗುವ ಸಾಧ್ಯ​ತೆ ಇದೆ. ಶ್ರೀಲಂಕಾದ ಆಟ​ಗಾ​ರರೂ ಕೂಡಾ ಕೆಲ ಪಂದ್ಯ​ಗ​ಳನ್ನು ತಪ್ಪಿ​ಸಿ​ಕೊ​ಳ್ಳುವ ಸಾಧ್ಯತೆ ಇದೆ ಎಂದು ಹೇಳ​ಲಾ​ಗು​ತ್ತಿ​ದೆ.

IPL 2023 full captain list: Check Indian Premier League full squad,  schedule, date, time all you need to know - Sports News

ಅಭ್ಯಾ​ಸಕ್ಕೇ ಕ್ರೀಡಾಂಗಣ ಭರ್ತಿ!

ಆರ್‌​ಸಿಬಿ ಹಾಗೂ ಚೆನ್ನೈ ತಂಡ​ಗಳು ಈಗಾ​ಗಲೇ ತಮ್ಮ ತವ​ರಿನ ಕ್ರೀಡಾಂಗ​ಣ​ಗ​ಳಲ್ಲಿ ಅಭ್ಯಾಸ ನಡೆ​ಸು​ತ್ತಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ಅಭಿ​ಮಾ​ನಿ​ಗ​ಳನ್ನು ಮನ​ರಂಜಿ​ಸಿದೆ. ಆರ್‌​ಸಿಬಿ ಚಿನ್ನ​ಸ್ವಾಮಿ ಕ್ರೀಡಾಂಗ​ಣ​ದಲ್ಲಿ ‘ಅನ್‌​ಬಾಕ್ಸ್‌’ ಕಾರ‍್ಯ​ಕ್ರ​ಮದ ಜೊತೆಗೆ ಅಭ್ಯಾಸ ನಡೆ​ಸಿದ್ದು, ತಮ್ಮ ನೆಚ್ಚಿನ ಆಟ​ಗಾ​ರ​ರನ್ನು ನೋಡಲು ಅಪಾರ ಪ್ರಮಾಣದ ಅಭಿ​ಮಾ​ನಿ​ಗಳು ಕ್ರೀಡಾಂಗ​ಣಕ್ಕೆ ಆಗ​ಮಿ​ಸಿ​ದ್ದರು. ಇನ್ನು ಚೆನ್ನೈನ ಚಿಪಾಕ್‌ ಕ್ರೀಡಾಂಗ​ಣವೂ ಅಭ್ಯಾಸ ಶಿಬಿ​ರಕ್ಕೇ ಬಹು​ತೇಕ ಭರ್ತಿ​ಯಾ​ಗಿದ್ದು, ಎಂ.ಎ​ಸ್‌.​ಧೋನಿ ಸೇರಿ​ದಂತೆ ಪ್ರಮುಖ ಆಟ​ಗಾ​ರರ ಅಭ್ಯಾ​ಸ​ವನ್ನು ಅಭಿ​ಮಾ​ನಿ​ಗಳು ನೇರ​ವಾಗಿ ವೀಕ್ಷಿ​ಸಿ​ದರು.

IPL Schedule 2023 PDF

ಕೆಲ ಪಂದ್ಯ​ದಲ್ಲಿ ಬೌಲ್‌ ಮಾಡಲ್ಲ ಬೆನ್‌ ಸ್ಟೋಕ್ಸ್‌

ಚೆನ್ನೈ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಈ ಬಾರಿ ಐಪಿ​ಎ​ಲ್‌ನ ಆರಂಭಿಕ ಕೆಲ ಪಂದ್ಯ​ಗ​ಳಲ್ಲಿ ಬೌಲ್‌ ಮಾಡಲ್ಲ ಎಂದು ತಿಳಿ​ದು​ಬಂದಿದೆ. ಅವರು ಎಡ​ಗಾ​ಲಿನ ಗಾಯ​ದಿಂದ ಇನ್ನೂ ಸಂಪೂ​ರ್ಣ​ವಾಗಿ ಚೇತ​ರಿ​ಸಿ​ಕೊಂಡಿಲ್ಲ. ಹೀಗಾಗಿ ಕೆಲ ಪಂದ್ಯ​ಗ​ಳಲ್ಲಿ ಬೌಲ್‌ ಮಾಡ​ದೆ ತಜ್ಞ ಬ್ಯಾಟರ್‌ ಆಗಿ ಕಣ​ಕ್ಕಿ​ಳಿ​ಯ​ಲಿ​ದ್ದಾ​ರೆ.

IPL Schedule 2023 PDF

ಐಪಿಎಲ್‌: ಮೊದಲಾರ್ಧಕ್ಕೆ ರಜತ್‌ ಪಾಟೀದಾರ್‌ ಅಲಭ್ಯ?

ನವದೆಹಲಿ: 16ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಆರ್‌ಸಿಬಿಗೆ ಗಾಯಾಳುಗಳ ಸಮಸ್ಯೆ ಹೆಚ್ಚುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ ರಜತ್‌ ಪಾಟೀದಾರ್‌ ಹಿಮ್ಮಡಿ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದ ಕಾರಣ ಟೂರ್ನಿಯ ಮೊದಲಾರ್ಧಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಇದೇ ವೇಳೆ ಆಸ್ಪ್ರೇಲಿಯಾದ ವೇಗಿ ಜೋಶ್‌ ಹೇಜಲ್‌ವುಡ್‌ ಸಹ ಕಾಲಿನ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಪಂದ್ಯಾವಳಿಯಲ್ಲಿ ಆಡುವುದು ಅನುಮಾನವೆನಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ