ಹಾಡಹಗಲೇ ಡೆಲಿವರಿ ಏಜೆಂಟ್ ಕಾರನ್ನು ಅಡ್ಡಗಟ್ಟಿ 2 ಲಕ್ಷ ರೂಪಾಯಿ ದೋಚಿದ ಬಂದೂಕಿದಾರಿಗಳು ;ವಿಡಿಯೋ ವೈರಲ್
ಹೊಸದಿಲ್ಲಿ: ಕಾರಿನಲ್ಲಿ ಹೋಗುತ್ತಿದ್ದ ಡೆಲಿವರಿ ಏಜೆಂಟ್ ಮತ್ತು ಆತನ ಸಹಚರನನ್ನು ಅಡ್ಡಗಟ್ಟಿದ ಬಂದೂಕುದಾರಿಗಳು ಎರಡು ಲಕ್ಷ ರೂ ದೋಚಿದ ಘಟನೆ ದಿಲ್ಲಿಯ ಪ್ರಗತಿ ಮೈದಾನ ಸುರಂಗ ಮಾರ್ಗದಲ್ಲಿ ನಡೆದಿದೆ.ಹಣ ಕಳೆದುಕೊಂಡ ಅವರಿಬ್ಬರು ಹಣ ತಲುಪಿಸಲು ಕ್ಯಾಬ್ ನಲ್ಲಿ ಗುರುಗ್ರಾಮ್ ಕಡೆಗೆ ಹೋಗುತ್ತಿದ್ದಾಗ ಪ್ರಗತಿ ಮೈದಾನದ ಸುರಂಗದೊಳಗೆ ಆಘಾತಕಾರಿ ಘಟನೆ ಶನಿವಾರ ನಡೆದಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಜೂನ್ 24 ರಂದು ಪ್ರಗತಿ ಮೈದಾನದ ಸುರಂಗದೊಳಗೆ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಡೆಲಿವರಿ ಏಜೆಂಟ್ ಮತ್ತು ಅವರ ಸಹಚರರಿಂದ ಬಂದೂಕು ತೋರಿಸಿ 1.5 ರಿಂದ 2 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.1.5 ಕಿಮೀ ಸುರಂಗವು ನವದೆಹಲಿಯನ್ನು ಸರೈ ಕಾಲೇ ಖಾನ್ ಮತ್ತು ನೋಯ್ಡಾದೊಂದಿಗೆ ಸಂಪರ್ಕಿಸುತ್ತದೆ. ಸಂತ್ರಸ್ತರ ದೂರಿನ ನಂತರ, ಐಪಿಸಿ ಸೆಕ್ಷನ್ 397 (ದರೋಡೆ ಅಥವಾ ಸಾವು ಅಥವಾ ಘೋರವಾದ ಗಾಯವನ್ನು ಉಂಟುಮಾಡುವ ಪ್ರಯತ್ನದೊಂದಿಗೆ ಡಕಾಯಿತಿ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#WATCH | A delivery agent and his associate were robbed at gunpoint of Rs 1.5 to Rs 2 lakh cash by a group of unknown assailants inside the Pragati Maidan Tunnel on June 24. Police registered a case and efforts are being made to apprehend the criminals: Delhi Police
— ANI (@ANI) June 26, 2023
(CCTV… pic.twitter.com/WchQo2lXSj
ಸುರಂಗದಲ್ಲಿ ಅಳವಡಿಸಲಾದ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ದರೋಡೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ಓಲಾ ಕ್ಯಾಬನ್ನು ತಡೆದು ನಿಲ್ಲಿಸಿದ್ದಾರೆ. ಕಾರನ್ನು ಕೆಂಪು ಕೋಟೆ ಪ್ರದೇಶದಲ್ಲಿ ಡೆಲಿವರಿ ಏಜೆಂಟ್ ಬುಕ್ ಮಾಡಿದ್ದರು. ಅದು ಸುರಂಗವನ್ನು ಪ್ರವೇಶಿಸುತ್ತಿದ್ದಂತೆ ಶಸ್ತ್ರಸಜ್ಜಿತ ದರೋಡೆಕೋರರು ಬೈಕ್ ಗಳಲ್ಲಿ ಬಂದು ಇಳಿಯುತ್ತಾರೆ. ಅವರಲ್ಲಿ ಒಬ್ಬರು ಕ್ಯಾಬ್ ನಲ್ಲಿರುವ ಇಬ್ಬರು ವ್ಯಕ್ತಿಗಳತ್ತ ಗನ್ ತೋರಿಸುತ್ತಿರುವುದು ಕಂಡುಬಂದರೆ, ಮತ್ತೊಬ್ಬರು ಹಿಂದಿನ ಸೀಟಿನಿಂದ ನಗದು ಚೀಲವನ್ನು ಸಂಗ್ರಹಿಸುವುದು ಸೆರೆಯಾಗಿದೆ.ಅನಂತರ 22ರಂದು ಅವರು ಪಪುವಾ ನ್ಯೂಗಿನಿಯಾಗೆ ತೆರಳಿ ಇಲ್ಲಿ ಇಂಡಿಯಾ ಪೆಸಿಫಿಕ್ ದ್ವೀಪಗಳ ಸಹಕಾರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರನೇ ಹಂತದಲ್ಲಿ ಮೇ 23ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.