ಪುತ್ತೂರು: ಅಂಗಡಿಯಿಂದ 15 ಲಕ್ಷ ರೂ. ನಗದು ಎಗರಿಸಿದ್ದ ಆರೋಪಿಗಳ ಸೆರೆ
ಪುತ್ತೂರು, ಜೂ 02 : ಅಂಗಡಿಯೊಂದರಿಂದ ಎಂಟು ತಿಂಗಳ ಹಿಂದೆ 15 ಲಕ್ಷ ರೂ. ನಗದು ಕಳವುಗೈದಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ದೇವರಾಜ ಅರಸ್ ಬಡವಾಣೆಯ ಸಮೀರ್ (ಕಪ್ಪ), ಹಾಸನ ಶಂಕರಿಪುರಂನ ಚಂದ್ರಶೇಖರ್ (ಚಂದು) ಬಂಧಿತರು. ಆರೋಪಿಗಳು 2022 ಸೆ. 16ರಂದು ಪುತ್ತೂರು ನಗರದ ಮುಖ್ಯ ರಸ್ತೆಯ ಮಾಯಿದೆ ದೇವುಸ್ ಚರ್ಚ್ ಸಮೀಪದ ಪ್ರಕಾಶ್ ಫೂಟ್ ವೇರ್ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 15 ಲಕ್ಷ ರೂ. ಅನ್ನು ಕಳ್ಳತನ ಎಸಗಿದ್ದರು.
ಈ ಬಗ್ಗೆ ಪ್ರಕಾಶ್ ಫೂಟ್ ವೇರ್ ಮಳಿಗೆಯ ಮಾಲಕ ಸಮೀರ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಬ್ರಹ್ಮಣ್ಯ: ಕೆಎಸ್‌ಆರ್‌ಟಿಸಿ ಬಸ್ ಗೆ ದಂತದಿಂದ ತಿವಿದ ಕಾಡಾನೆ
ಕಡಬ: ಕೆಎಸ್‌ಆರ್‌ಟಿಸಿ ಬಸ್ ಗೆ ಕಾಡಾನೆಯೊಂದು ದಂತದಿಂದ ತಿವಿದ ಹಿನ್ನೆಲೆಯಲ್ಲಿ ಬಸ್ ಗೆ ಹಾನಿಯಾದ ಘಟನೆ ಸುಬ್ರಹ್ಮಣ್ಯ(Subrahmanya) – ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸನ್ನು ಅನಿಲ ಎಂಬಲ್ಲಿ ಚಾಲಕ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಿಸಿದರಾದರೂ, ಆನೆಯು ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬಸ್ಸಿಗೆ ಹಾನಿಯಾಗಿದೆ.
ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.