ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

15 ವರ್ಷದ ಹುಡುಗಿಯನ್ನು ಶೂಟ್‌ ಮಾಡಿ ಕೊಂದ 9 ವರ್ಷದ ಬಾಲಕ..!

Twitter
Facebook
LinkedIn
WhatsApp
 15 ವರ್ಷದ ಹುಡುಗಿಯನ್ನು ಶೂಟ್‌ ಮಾಡಿ ಕೊಂದ 9 ವರ್ಷದ ಬಾಲಕ..!

ಅಮೆರಿಕದಲ್ಲಿ ಜನಸಂಖ್ಯೆಗಿಂತ ಗನ್‌ಗಳನ್ನು ಹೊಂದಿದವರ ಸಂಖ್ಯೆಯೇ ಹೆಚ್ಚಿದೆಯಂತೆ. ಅಷ್ಟು ಸುಲಭವಾಗಿ ಅಲ್ಲಿ ಶಸ್ತಾಸ್ತ್ರ ದೊರೆಯುತ್ತದೆ. ಇದರಿಂದ ನಾನಾ ಪರಿಣಾಮಗಳಾಗುತ್ತಿದ್ದರೂ ಆ ದೇಶದ ಕಾನೂನು ಮಾತ್ರ ಬಿಗಿಯಾಗುತ್ತಿಲ್ಲ. ಅದೇ ರೀತಿ, 9 ವರ್ಷದ ಬಾಲಕ ಕೂಲ್‌ ಡ್ರಿಂಕ್ಸ್‌ ವಿಚಾರಕ್ಕೆ ನಡೆದ ಜಗಳದಲ್ಲಿ 15 ವರ್ಷದ ಬಾಲಕಿಯನ್ನು ಗನ್‌ನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಗ್ಯಾಟೊರೇಡ್‌ (Gatorade) ಎಂಬ ಕೂಲ್‌ ಡ್ರಿಂಕ್ಸ್‌  ಬಾಟಲ್‌ ವಿಚಾರಕ್ಕೆ ನಡಡೆದ ಜಗಳದಲ್ಲಿ ತಮ್ಮ ಹದಿಹರೆಯ ಹುಡುಗಿಯನ್ನು 9 ವರ್ಷದ ಬಾಲಕ ಕೊಲೆ ಮಾಡಿದ್ದಾನೆ ಎಂದು ಹುಡುಗಿಯ ಕುಟುಂಬ ಹೇಳಿಕೊಂಡಿದೆ. ಗುಂಡೇಟಿನಿಂದ ಗಾಯಗಳೊಳಾಗಿ 15 ವರ್ಷದ ನೈಕಾಯ್ಲಾ ಸ್ಟ್ರಾಡರ್‌ ಮನೆಯ ಮುಂಭಾಗ ಬಿದ್ದಿದ್ದಳು ಎಂದು ಕುಟುಂಬ ತಿಳಿಸಿದೆ. ಆಕೆಯನ್ನು ಆಸ್ಪತ್ರೆಗೆ  ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಅಮೆರಿಕದ  ಪಶ್ಚಿಮ ಬಾಲ್ಟಿಮೋರ್‌ನ 600 ಲಿನ್ನಾರ್ಡ್‌ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. 

ಆ ಗನ್‌ ಬಾಲಕನ ಕುಟುಂಬ ಸದಸ್ಯರ ಹೆಸರಲ್ಲಿ ನೋಂದಣಿಯಾಗಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದ್ದು, ಅವರು ಸೆಕ್ಯೂರಿಟಿ ಗಾರ್ಡ್‌  ಆಗಿ ಕೆಲಸ ಮಾಡುತ್ತಿದ್ದರು ಎಂದೂ ಹೇಳಲಾಗಿದೆ. ಇನ್ನು, ಅಮೆರಿಕದ ಮೇರಿಲ್ಯಾಂಡ್‌ (Maryland) ಕಾನೂನಿನ ಪ್ರಕಾರ ಬಾಲಕನ ವಯಸ್ಸಿನ ಆಧಾರದಲ್ಲಿ ಆತನಿಗೆ ಯಾವ ಶಿಕ್ಷೆಯನ್ನೂ ನೀಡುವಂತಿಲ್ಲ ಎಂದು ತಿಳಿದುಬಂದಿದೆ. ಆದರೆ, ಬಾಲಕನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ನೈಕಾಯ್ಲಾ ಸಂಬಂಧಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದು, ತನ್ನ ಮಗಳನ್ನು ಗ್ಯಾಟೊರೇಡ್‌ (ಕೂಲ್‌ ಡ್ರಿಂಕ್ಸ್‌) ಬಾಟಲ್‌ ವಿಚಾರವಾಗಿ ಉದ್ದೇಶಪೂರ್ವಕವಾಗಿ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ನೈಕಾಯ್ಲಾಗೆ ಮಂಗಳವಾರ ಚರ್ಚ್‌ನಲ್ಲಿ ಅವರ ಕುಟುಂಬದವರು ಹಾಗೂ ಗೆಳೆಯರು ನಮನ ಸಲ್ಲಿಸಿದ್ದು, ಅವಳ ಸಾವಿನ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದರು. ಇನ್ನು, ಘಟನೆ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ ಹದಿಹರೆಯ ಹುಡುಗಿಯ ತಂದೆ, ನನ್ನ ಮಗಳು ಸತ್ತು ಬಿದ್ದಿದ್ದನ್ನು ನೋಡಲು ನನಗೆ ಹೇಗೆ ಅನಿಸುತ್ತದೆ ಎಂಬುದನ್ನು ನಾನು ನಿಮಗೆ ವಿವರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಬಂಟ್ವಾಳ:ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ಪಿಯುಸಿ ವಿದ್ಯಾರ್ಥಿ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist