ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

15 ಕ್ಕೂ ಅಧಿಕ ಮಂದಿಯಲ್ಲಿ ಜಿಕಾ ವೈರಸ್‌ ಪತ್ತೆ .

Twitter
Facebook
LinkedIn
WhatsApp
15 ಕ್ಕೂ ಅಧಿಕ ಮಂದಿಯಲ್ಲಿ ಜಿಕಾ ವೈರಸ್‌ ಪತ್ತೆ .

ತಿರುವನಂತಪುರಂ : ಕೊರೊನಾ ವೈರಸ್‌ ಸೋಂಕಿನ ಬೆನ್ನಲ್ಲೇ ಕೇರಳದಲ್ಲಿ ಜಿಕಾ ವೈರಸ್‌ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಇದೀಗ 15 ಮಂದಿಗೆ ಜಿಕಾ ವೈರಸ್‌ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಿದ್ದು, ಕೇಂದ್ರದ ತಜ್ಞರ ತಂಡ ಕೇರಳಕ್ಕೆ ಭೇಟಿ ನೀಡಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ 24 ವರ್ಷದ ಗರ್ಭಿಣಿ ಮಹಿಳೆ ಜಿಕಾ ವೈರಸ್‌ ಗೆ ತುತ್ತಾಗಿರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ರೋಗ ಲಕ್ಷಣ ಹೊಂದಿರುವವರನ್ನುತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೇರಳದಲ್ಲಿ ಈವರೆಗೆ 15 ಜನರಿಗೆ ಜಿಕಾ ವೈರಸ್ ಇರುವುದು ಪತ್ತೆಯಾಗಿದೆ. ರೋಗ ಪತ್ತೆಯಾದ 15 ಜನರಲ್ಲಿ 14 ಮಂದಿ ಖಾಸಗಿ ಆಸ್ಪತ್ರೆಯ ನೌಕರರು ಎಂದು ತಿಳಿದುಬಂದಿದೆ.

ಮಹಿಳೆಯಿಂದಲೇ ಈ ವೈರಸ್‌ ಹರಡಿರುವ ಸಾಧ್ಯತೆಯೂ ಇದೆ. ಅಲ್ಲದೇ ವೈರಸ್‌ ಗೆ ತುತ್ತಾಗಿರುವವರೆಲ್ಲಾ ತಿರುವನಂತಪುರಂ ಮಹಾನಗರ ಪಾಲಿಕೆಯ ವ್ಯಾಪ್ತಿಯವರೇ ಆಗಿದ್ದಾರೆ. ಇನ್ನು ಸೊಳ್ಳೆಗಳ ಮೂಲಕ ಹೆಚ್ಚಿನ ಜನರು ವೈರಸ್ ಸೋಂಕಿಗೆ ಒಳಗಾಗಬಹುದು ಎಂದು ಆರೋಗ್ಯ ಸಚಿವಾಲಯ ತೀರ್ಮಾನಿಸಿದೆ.

ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ರೋಗವನ್ನು ತಡೆಗಟ್ಟಲು ಸಹಾಯ ಮಾಡಲು ಕೇಂದ್ರವು ಆರಂಭಿಕ ತಂಡವನ್ನು ಕಳುಹಿಸಿದೆ. ಅಲ್ಲದೇ ಕೇಂದ್ರ ಸರಕಾರ ಕೇರಳಕ್ಕೆ ಬೇಕಾದ ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದೆ. ಕೇಂದ್ರದ ತಂಡ ಸಾಂಕ್ರಾಮಿಕ ರೋಗದ ಕುರಿತು ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ವರದಿಯನ್ನು ನೀಡಲಿದೆ. ಅಲ್ಲದೇ ರಾಜ್ಯ ಸರಕಾರಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆಯನ್ನು ನೀಡಲಿದೆ.

ಕೇರಳದಲ್ಲಿ ದಿನ ಕಳೆದಂತೆ ಜಿಕಾ ವೈರಸ್‌ ವ್ಯಾಪಕವಾಗಿ ಹರಡುತ್ತಿರೋದು ಆತಂಕವನ್ನು ಮೂಡಿಸಿದೆ. ಒಂದೆಡೆ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನೊಂದೆಡೆ ಜಿಕಾ ವೈರಸ್‌ ಆತಂಕವನ್ನು ಮೂಡಿಸಿ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು