ಪಡ್ಡೆಗಳ ಮೈಬಿಸಿ ಹೆಚ್ಚಿಸುವ ‘ಪೆಂಟಗನ್’ ಚಿತ್ರದ ವಿಡಿಯೋ ಸಾಂಗ್
ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ‘ಪೆಂಟಗನ್’ (Pentagon) ಸಿನಿಮಾದ 5 ನೇ ಕಥೆಯ ಟೀಸರ್ ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡಿದ್ದು, ಸಾಕಷ್ಟು ಚರ್ಚೆ ಕೂಡ ಆಗಿದೆ. ಇದೀಗ ಈ ಚಿದ್ರದಲ್ಲಿನ ಮೂರನೇ ಕಥೆಯ ‘ಕಾಮನಬಿಲ್ಲು ಮೂಡುತಿದೆ ‘ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.
ಪೆಂಟಗನ್ ಸಿನಿಮಾದ ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದ ಮೋಸ, ಅಪರಾಧ ಜಗತ್ತು, ಯವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲುವ ಕಥೆಯಿದು. ರಾಘು ಶಿವಮೊಗ್ಗ (Raghu Shivamogga) ನಿರ್ದೇಶನದಲ್ಲಿ ಈ ಅಧ್ಯಾಯದ ಮುಖ್ಯ ಭೂಮಿಕೆಯಲ್ಲಿ ಪ್ರಕಾಶ್ ಬೆಳವಾಡಿ, ತನಿಷಾ ಕುಪ್ಪಂದ, ಪ್ರೇರಣಾ,ಸಾಗರ್,ರಾಕೇಶ ಇನ್ನು ಹಲವರು ಕಾಣಿಸಿಕೊಂಡಿದ್ದಾರೆ.
ಈ ಅಧ್ಯಾಯಕ್ಕೆ ಕಿರಣ್ ಹಂಪಾಪುರ ಸಿನಿಮಾಟೋಗ್ರಫಿ ಮಾಡಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆಯಿದೆ. ಸಾಹಿತ್ಯ ನಾಗಾರ್ಜುನ ಶರ್ಮಾ, ಸಂಕಲನ ವೆಂಕಟೇಶ ಯುಡಿವಿ, ಸಂತೋಷ ವೆಂಕಿ ಮತ್ತು ಇಂಚರ ರಾವ್ ಅವರ ಕಂಠದಲ್ಲಿ ಹಾಡು ಮೂಡಿ ಬಂದಿದೆ. ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿದ್ದು, ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್) ಚಂದ್ರಮೋಹನ್ (ಬ್ರಹ್ಮಚಾರಿ), ರಾಘು ಶಿವಮೊಗ್ಗ (ಚೂರಿಕಟ್ಟೆ), ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ.
ಜಿ ಸಿನಿಮಾಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಪಕರು ಗುರು ದೇಶಪಾಂಡೆ (Guru Deshpande). ಸಾಂಗ್ ರಿಲೀಸ್ ಮಾಡಿ, ಮುಂದಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಲಿದೆ.