1300 ಸಿಬ್ಬಂದಿ ವಜಾಕ್ಕೆ zoom ತೀರ್ಮಾನ
Twitter
Facebook
LinkedIn
WhatsApp
ವಾಷಿಂಗ್ಟನ್: ಸಂವಹನ ಕ್ಷೇತ್ರದ ದಿಗ್ಗಜ ಸಂಸ್ಥೆ ಜೂಮ್ ಒಟ್ಟು ಸಿಬ್ಬಂದಿಯ ಶೇಕಡ 15ರಷ್ಟು ಕಡಿಮೆ ಮಾಡಲು ತೀರ್ಮಾನಿಸಿದೆ.
ಜಾಗತಿಕ ಮಟ್ಟದಲ್ಲಿ 1300 ಸಿಬ್ಬಂದಿ ವಜಾ ಮಾಡಲು ಉದ್ದೇಶಿಸಿದೆ.ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಈ ಸಂಬಂಧ ಈ ಮೇಲ್ ಮೂಲಕ ಮಾಹಿತಿ ನೀಡಲಾಗುವುದು.
ಇತರ ದೇಶಗಳಲ್ಲಿ ಇರುವ ಸಿಬ್ಬಂದಿಗೆ ಕಾನೂನು ವಿಭಾಗ ನೇರವಾಗಿ ಮಾಹಿತಿ ರವಾನಿಸಲಿದೆ ಎಂದು ಜೂಮ್ ಸಂಸ್ಥೆಯ ಸಿ ಇ ಒ ಹೇಳಿದ್ದಾರೆ.ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹೆಸರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಭಾರೀ ಪ್ರಮಾಣದಲ್ಲಿ ನೌಕರಿ ಕಡಿತಕ್ಕೆ ಮುಂದಾಗಿವೆ.