ಶುಕ್ರವಾರ, ಮೇ 17, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

1,100 ಕೋಳಿಗಳನ್ನು ಹೆದರಿಸಿ ಕೊಂದಿದ್ದ ವ್ಯಕ್ತಿಗೆ ಜೈಲು

Twitter
Facebook
LinkedIn
WhatsApp
44996461 493101667837391 8618735242527637504 n 1

ಬೀಜಿಂಗ್: ತನ್ನ ನೆರೆ ಮನೆಯಾತನ (Neighbour) ವಿರುದ್ಧ ಸೇಡು ತೀರಿಸಿಕೊಳ್ಳಲು 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಜೈಲು (Jail) ಶಿಕ್ಷೆ ವಿಧಿಸಿದ ಘಟನೆ ಚೀನಾದಲ್ಲಿ (China) ನಡೆದಿದೆ.

ಗು ಎಂಬಾತ ಆರೋಪಿ. ಗುಗೆ ಸೇರಿದ್ದ ಮರಗಳನ್ನು ನೆರೆಮನೆಯ ಝಾಂಗ್ ಅನುಮತಿಯಿಲ್ಲದೇ ಕತ್ತರಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಗು, ತನ್ನ ನೆರೆಮನೆಯ ಝಾಂಗ್‍ನ ಕೋಳಿ ಫಾರ್ಮ್‍ಗೆ ನುಗ್ಗಿದ್ದಾನೆ. ಅಲ್ಲಿ ಬ್ಯಾಟರಿ ದೀಪಗಳನ್ನು ಬಳಸಿ ಕೋಳಿಗಳನ್ನು ಭಯಭೀತಗೊಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅಲ್ಲಿದ್ದ 460 ಕೋಳಿಗಳು ಹೆದರಿ ಮೃತಪಟ್ಟಿದೆ.

ಘಟನೆಯ ನಂತರ ಗುನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ 3,000 ಯುವಾನ್ (35,734 ರೂ.)ಯನ್ನು ದಂಡವಾಗಿ ಪಾವತಿಸಲು ಸೂಚಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಗೂ, ಝಾಂಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದಾನೆ. ಅದರಂತೆ ಆತ 2ನೇ ಬಾರಿಗೆ ಕೋಳಿ ಫಾರ್ಮ್‍ಗೆ ಹೋಗಿ ಅಲ್ಲಿದ್ದ 640 ಕೋಳಿಗಳನ್ನು ಕೊಂದಿದ್ದಾನೆ.

ಒಟ್ಟಾರೆಯಾಗಿ 1,100 ಕೋಳಿಗಳು ಮೃತಪಟ್ಟಿದ್ದು, ಅವೆಲ್ಲವೂ ಸುಮಾರು 13,840 ಯುವಾನ್ (ರೂ. 1,64,855) ಮೌಲ್ಯದ್ದಾಗಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ. 

ಘಟನೆಗೆ ಸಂಬಂಧಿಸಿ ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ಕೌಂಟಿಯ ನ್ಯಾಯಾಲಯವು ಗೂಗೆ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ