Friday, December 2, 2022
ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್-ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ-ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ-6ನೇ ತರಗತಿಯ ಬಾಲಕ ಹೃದಯಾಘಾತದಿಂದ ಸಾವು-ಭಾರತವಿಂದು ಜಗತ್ತಿನ ನಂ.1 ಹಾಲು ಉತ್ಪಾದಕ: ಕೇಂದ್ರ ಸಚಿವ ಪರುಷೋತ್ತಮ ರೂಪಲಾ-ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಮಗೆ ಪಾಠ ಮಾಡಬೇಕಿಲ್ಲ, ವಿಶ್ವಸಂಸ್ಥೆಗೆ ಭಾರತದ ದಿಟ್ಟ ಉತ್ತರ!-ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು-ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್-ಸೇಡು ತೀರಿಸಿಕೊಳ್ಳಲು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ 15ರ ಬಾಲಕ-ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯ 'ಸಮೃದ್ಧ ಕೊಡಗು' ಪರಿಕಲ್ಪನೆಯ ಮೂಲಕ ಕೊಡಗಿನಲ್ಲಿ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

11 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಟೆಕ್ಕಿ ದಂಪತಿ, ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

Twitter
Facebook
LinkedIn
WhatsApp

ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ ನಲ್ಲಿ ನವೆಂಬರ್ 10ರಂದು ನಡೆದಿದೆ. ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಶ್ವೇತಾ (27) ನೇಣಿಗೆ ಶರಣಾದ ದುರ್ದೈವಿ. ಪತಿ ಅಭಿಷೇಕ್ ವಿರುದ್ಧ ಮೃತಳ ಕುಟುಂಬಸ್ಥರು ಇದೀಗ ಆರೋಪ ಮಾಡಿದ್ದಾರೆ. ಅಂದಹಾಗೆ ಶ್ವೇತಾ-ಅಭಿಷೇಕ್ ಜೋಡಿ11 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

 

ಐಬಿಎಂ ಕಂಪನಿ ಉದ್ಯೋಗಿಯಾಗಿದ್ದ ಶ್ವೇತ, ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕನನ್ನು ಮದುವೆಯಾಗಿದ್ದರು. ಮದುವೆಗೂ ಮುನ್ನ ಯುವತಿಯೊಬ್ಬಳೊಂದಿಗೆ ಅಭಿಷೇಕ್ ಸಂಬಂಧ ಹೊಂದಿದ್ದನಂತೆ. ಮದುವೆಯ ನಂತರ ಈ ವಿಚಾರ ಗೊತ್ತಾಗಿ ದಂಪತಿ ನಡುವೆ ಜಗಳವಾಗಿತ್ತು. ಪರಸ್ಪರ ರಾಜಿ ಪಂಚಾಯತಿ ಬಳಿಕ ಇಬ್ಬರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು.

ಈ‌ ನಡುವೆ ಅಭಿಷೇಕ್ ಪುನಃ ತನ್ನ ಹಳೇ ಚಾಳಿ‌ ಮುಂದುವರೆಸಿದ್ದನಂತೆ. ಅದರಿಂದ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗೇಪಲ್ಲಿ: 13 ವರ್ಷದ ದಾಂಪತ್ಯಕ್ಕೆ ಕೊಳ್ಳಿಯಿಟ್ಟ ಗಂಡನ ಅನೈತಿಕ ಸಂಬಂಧ, ಪತ್ನಿ ನೇಣಿಗೆ ಶರಣು:

ಮಗಳು ಚೆನ್ನಾಗಿರಲಿ ಅಂತ ಆಕೆಯ ತಂದೆ ತಾಯಿ 50 ಲಕ್ಷ ರೂಪಾಯಿ ಮೌಲ್ಯದ ಜಮೀನು ಮಾರಿ, ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು. ಆದ್ರೆ ಕೈಹಿಡಿದ ಗಂಡ, ತನ್ನ ಪತ್ನಿಯ ಬದಲು, ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧ ಬೆಳೆಸಿ, ಪತ್ನಿಗೆ ಕಿರುಕುಳ ನೀಡ್ತಿದ್ದನಂತೆ. ಇದರಿಂದ ಮನನೊಂದ ಆ ಗೃಹಿಣಿ ಗಂಡನ ಮನೆಯಲ್ಲೆ ನೇಣಿಗೆ (Suicide) ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಎಸ್ ಗುಂಡ್ಲುಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಹಾಗೂ ಅನಸೂಯಮ್ಮ ರೈತ ದಂಪತಿ, ತಾವು ಕಷ್ಟಪಟ್ಟಂತೆ ತಮ್ಮ ಮಗಳು ಮೋನಿಕಾ ಕಷ್ಟ ಪಡಬಾರದು ಎಂದೆಣೆಸಿ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಸಂತೇ ಬೀದಿ ಬಡಾವಣೆಯ ಗುರುಮೂರ್ತಿ ಎನ್ನುವವರಿಗೆ ಮದುವೆ ಮಾಡಿ ಕೊಟ್ಟಿದ್ರು. ಮಗಳ ಸಂತೋಷಕ್ಕಾಗಿ ಇರೊ 50 ಲಕ್ಷ ರೂಪಾಯಿ ಮೌಲ್ಯದ ಜಮೀನನನ್ನು ಮಾರಾಟ ಮಾಡಿ, ಮಗಳು ಹಾಗೂ ಆಳಿನ ಮೈಮೇಲೆ ಚಿನ್ನ ಹಾಕಿ ಅದ್ದೂರಿಯಾಗಿ ಮದುವೆ ಮಾಡಿದ್ದರು.

ಆದ್ರೆ ಈಗ ಮಗಳು ಗಂಡನ ಮನೆಯಲ್ಲೆ ಸಾವಿಗೆ ಶರಣಾಗಿದ್ದು, ಆಕೆಯ ಗಂಡ ಬೇರೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ತಮ್ಮ ಮಗಳಿಗೆ ಕಿರುಕುಳ ನೀಡ್ತಿದ್ದ ಅದರಿಂದಲೇ ತಮ್ಮ ಮಗಳು ನೇಣಿಗೆ ಶರಣಾಗಿದ್ದಾಳೆ ಅಂತ ಮೋನಿಕಾ ತಂದೆ ರಾಮಕೃಷ್ಣಪ್ಪ ಆರೋಪಿಸಿದ್ದಾನೆ.

ಇನ್ನು ಮೋನಿಕಾ ಹಾಗೂ ಗುರುಮೂರ್ತಿಗೆ ಮದುವೆಯಾಗಿ ಬರೋಬ್ಬರಿ 13 ವರ್ಷಗಳೆ ಕಳೆದಿದ್ದು, 11 ವರ್ಷದ ವಿಷ್ಣುಪ್ರಿಯಾ ಎಂಬ ಮಗಳು ಇದ್ದಾಳೆ. ಆದ್ರೆ ಗುರುಮೂರ್ತಿ ತನ್ನ ಹೆಂಡತಿ ಮತ್ತು ಮಗಳ ಮುಖ ನೋಡಿಕೊಂಡು ಸುಖ ಸಂಸಾರ ಮಾಡದೆ… ಬೇರೆ ಮಹಿಳೆಯ ಹಿಂದೆ ಬಿದ್ದಿದ್ದನಂತೆ. ಇದ್ರಿಂದ ನೊಂದು ಮೋನಿಕಾ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ. ಇದ್ರಿಂದ ಬಾಗೇಪಲ್ಲಿ ಠಾಣೆ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಗಳು ಮೋನಿಕಾ ಸಾವಿನ ಮನೆ ಸೇರಿದ್ದಾಳೆ. 11 ವರ್ಷದ ಮುದ್ದಾದ ಮಗಳನ್ನು ಬಿಟ್ಟು ಮೋನಿಕಾ ಮೃತಪಟ್ಟಿದ್ದು, 11 ವರ್ಷದ ಮೊಮ್ಮಗಳ ಜವಾಬ್ದಾರಿ ಮೋನಿಕಾ ತಂದೆ ತಾಯಿ ಮೇಲೆ ಇದೆ. ಇದ್ರಿಂದ ನಾಲ್ಕು ಜನ ಹಿರಿಯರು ಸೇರಿ, ಆಗಿದ್ದು ಆಗಿ ಹೋಗಿದೆ. ಪೊಲೀಸರು ತನಿಖೆ ಮಾಡಿಕೊಳ್ಳಲಿ, ಆದ್ರೆ ಗುರುಮೂರ್ತಿಗೆ ಸೇರಿದ್ದ ಮನೆ, ನಿವೇಶನ ಹಾಗೂ ಜಮೀನನ್ನು ಆತನ ಮಗಳ ಹೆಸರಿಗೆ ನೋಂದಣಿ ಮಾಡಿಸಲಿ ಎಂದು ತಿರ್ಮಾನಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ