ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕ್ಯಾನ್ಸರ್ ಪರಿಣಾಮಕಾರಿ ಚಿಕಿತ್ಸೆಗೆ 100 ರೂ. ಟ್ಯಾಬ್ಲೆಟ್ ; ಟಾಟಾ ಸಂಸ್ಥೆಯಿಂದ ಆವಿಷ್ಕಾರ..!

Twitter
Facebook
LinkedIn
WhatsApp
ಕ್ಯಾನ್ಸರ್ ಪರಿಣಾಮಕಾರಿ ಚಿಕಿತ್ಸೆಗೆ 100 ರೂ. ಟ್ಯಾಬ್ಲೆಟ್ ; ಟಾಟಾ ಸಂಸ್ಥೆಯಿಂದ ಆವಿಷ್ಕಾರ..!

ಮುಂಬೈ: ಭಾರತದ ಪ್ರಮುಖ ಕ್ಯಾನ್ಸರ್ ಸಂಶೋಧನೆ (Cancer research) ಮತ್ತು ಚಿಕಿತ್ಸಾ (cancer treatment) ಸೌಲಭ್ಯವಾಗಿರುವ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ (Tata Institute), ಕ್ಯಾನ್ಸರ್ ಮರುಕಳಿಸುವುದನ್ನು (Cancer relapse) ತಡೆಯುವ ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಹಿಡಿದಿದೆ ಎಂದು ಹೇಳಿಕೊಂಡಿದೆ. ಮುಂದಿನ ಹಂತದಲ್ಲಿ ಇದರ ಟ್ಯಾಬ್ಲೆಟ್‌ಗಳು (Cancer Tablet) ಕೇವಲ 100 ರೂಪಾಯಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಟಾಟಾ ಸಂಸ್ಥೆಯ ಸಂಶೋಧಕರು ಮತ್ತು ವೈದ್ಯರು ಈ ನಿಟ್ಟಿನಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಈಗ ಟ್ಯಾಬ್ಲೆಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ರೋಗಿಗಳಲ್ಲಿ ಕ್ಯಾನ್ಸರ್ ಮರುಕಳಿಸುವುದನ್ನು ತಡೆಯುತ್ತದೆ. ವಿಕಿರಣ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು ಶೇಕಡಾ 50ರಷ್ಟು ಕಡಿಮೆ ಮಾಡುತ್ತದೆ ಎಂದು ಗೊತ್ತಾಗಿದೆ.

 

ಕುಂಬಳೆ ಬಸ್‌ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಪೇಟೆಗೆ ತೆರಳುತ್ತಿದ್ದ ಅಬ್ದುಲ್ಲ ಕುಂಞಿ (60) ಅವರಿಗೆ ಬಾಲಕ ವೇಗವಾಗಿ ಒಡಿಸುತ್ತಿದ್ದ ಬೈಕ್‌ ಗುದ್ದಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು.ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂಗೆ ಒಯ್ಯಲಾಗಿದೆ.

ʼR+Cu’ ಹೊಟ್ಟೆಯಲ್ಲಿ ಆಮ್ಲಜನಕ ರಾಡಿಕಲ್‌ಗಳನ್ನು ಉತ್ಪಾದಿಸುತ್ತದೆ. ಅದು ರಕ್ತ ಪರಿಚಲನೆಗೆ ಪ್ರವೇಶಿಸಲು ತ್ವರಿತವಾಗಿ ಹೀರಲ್ಪಡುತ್ತದೆ. ಆಮ್ಲಜನಕ ರಾಡಿಕಲ್‌ಗಳು ಚಲಾವಣೆಯಲ್ಲಿರುವ cfChPಗಳನ್ನು ನಾಶಮಾಡುತ್ತವೆ ಮತ್ತು ʼಮೆಟಾಸ್ಟೇಸ್’ಗಳನ್ನು ತಡೆಯುತ್ತವೆ. ಮೆಟಾಸ್ಟೇಸ್‌ ಎಂದರೆ ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ಯಾನ್ಸರ್ ಕೋಶಗಳ ಚಲನೆ. ಸಂಶೋಧಕರು ತಮ್ಮ ಪ್ರಸ್ತುತಿಯಲ್ಲಿ ಇದನ್ನು “ಮ್ಯಾಜಿಕ್ ಆಫ್ R+Cu” ಎಂದು ಕರೆದಿದ್ದಾರೆ.

ಈ ಟ್ಯಾಬ್ಲೆಟ್ ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಮತ್ತು ಎರಡನೇ ಬಾರಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಶೇಕಡಾ 30ರಷ್ಟು ಪರಿಣಾಮಕಾರಿಯಾಗಿದೆ. ಇದು ಮೇದೋಜೀರಕ ಗ್ರಂಥಿ, ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್‌ನ ಮೇಲೂ ಪರಿಣಾಮಕಾರಿಯಾಗಬಲ್ಲದು.

“ಟಾಟಾ ವೈದ್ಯರು ಸುಮಾರು ಒಂದು ದಶಕದಿಂದ ಈ ಟ್ಯಾಬ್ಲೆಟ್‌ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಇದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಅನುಮೋದನೆಗೆ ಕಾಯುತ್ತಿದೆ. ಅನುಮೋದನೆ ಪಡೆದ ನಂತರ ಇದು ಜೂನ್-ಜುಲೈನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದು ಕ್ಯಾನ್ಸರ್ ಚಿಕಿತ್ಸೆಯನ್ನು ಸುಧಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಲಿದೆ. ಈಗ ಚಿಕಿತ್ಸೆಗೆ ಲಕ್ಷದಿಂದ ಕೋಟಿಗಟ್ಟಲೆ ವೆಚ್ಚವಾಗುತ್ತಿದ್ದು, ಈ ಟ್ಯಾಬ್ಲೆಟ್ ಎಲ್ಲೆಡೆ ಕೇವಲ ₹100ಕ್ಕೆ ಲಭ್ಯವಾಗಲಿದೆ” ಎಂದು ಕ್ಯಾನ್ಸರ್ ತಜ್ಞ ಡಾ.ರಾಜೇಂದ್ರ ಬದ್ವೆ ತಿಳಿಸಿದ್ದಾರೆ.

“ಇಲಿಗಳು ಮತ್ತು ಮನುಷ್ಯರ ಮೇಲೆ ಇದರ ಅಡ್ಡಪರಿಣಾಮಗಳ ಪರೀಕ್ಷೆ ಮಾಡಲಾಗಿದೆ. ಆದರೆ ತಡೆಗಟ್ಟುವ ಪರೀಕ್ಷೆಯನ್ನು ಇಲಿಗಳ ಮೇಲೆ ಮಾತ್ರ ಮಾಡಲಾಗಿದೆ. ಮಾನವ ಪ್ರಯೋಗಗಳನ್ನು ಪೂರ್ಣಗೊಳಿಸಲು ಸುಮಾರು ಐದು ವರ್ಷ ತೆಗೆದುಕೊಳ್ಳುತ್ತದೆ. ಇದು ದೊಡ್ಡ ಯಶಸ್ಸು” ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ