ಸೋಮವಾರ, ಜೂನ್ 17, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

100 ಲಕ್ಷ ಕೋಟಿ ರೂ. ಗಳ ‘ಪಿಎಂ ಗತಿ ಶಕ್ತಿ ಯೋಜನೆ’ ಘೋಷಿಸಿದ ಪ್ರಧಾನಿ ಮೋದಿ

Twitter
Facebook
LinkedIn
WhatsApp
100 ಲಕ್ಷ ಕೋಟಿ ರೂ. ಗಳ ‘ಪಿಎಂ ಗತಿ ಶಕ್ತಿ ಯೋಜನೆ’ ಘೋಷಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದ 75 ನೇ ಸ್ವಾತಂತ್ರ್ಯ ಸಂಭ್ರಮದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪಿಎಂ ಗತಿ ಶಕ್ತಿ ಮಾಸ್ಟರ್‌ ಪ್ಲ್ಯಾನ್’ ಯೋಜನೆಯನ್ನು ಘೋಷಿಸಿದ್ದಾರೆ.
ಈ ಯೋಜನೆ 100 ಲಕ್ಷ ಕೋಟಿ ರೂ. ಗಳದ್ದಾಗಿದ್ದು, ದೇಶದ ಮೂಲಸೌಕರ್ಯ ಅಭಿವೃದ್ಧಿ‌ಗೆ ಸಂಬಂಧಿಸಿದಂತೆ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಹಾಗೆಯೇ ದೇಶದ ಸಮಗ್ರ ಅಭಿವೃದ್ಧಿ‌ಗೆ ಇಲ್ಲಿನ ನಾಗರಿಕರೆಲ್ಲರೂ ಒಟ್ಟಾಗಿ ಶ್ರಮಿಸುವಂತೆ ಅವರು ಕರೆ ನೀಡಿದರು. ದೇಶದ ಸಂಪರ್ಕ ವ್ಯವಸ್ಥೆ ಹೆಚ್ಚಿಸಲು ಸುಧಾರಿತ ರೈಲು ಸೇವೆಗಳನ್ನು ಪ್ರಧಾನಿ ಘೋಷಿಸಿದರು.
ಈ ಯೋಜನೆಯು ಪ್ರಯಾಣದ ಎಲ್ಲಾ ಅಡೆತಡೆಗಳನ್ನು ದಾಟಿ ಸಮಯ ಉಳಿಕೆಗೆ ಅನುಕೂಲವಾಗಲಿದೆ ಮತ್ತು ಕೈಗಾರಿಕಾ ಉತ್ಪಾದನೆ‌ಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು. ಹೂಡಿಕೆದಾರರನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ನಿಟ್ಟಿನಲ್ಲಿ‌ಯೂ ಈ ಯೋಜನೆ ಮಹತ್ವ ಪಡೆಯಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಭಿವೃದ್ಧಿಯ ಈ ಹೊಸ ವಿಧಾನ‌ವು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ತಂತ್ರಜ್ಞಾನ ಬೆಳವಣಿಗೆ ದೃಷ್ಟಿಯಿಂದ‌ಲೂ ಇದು ಹೆಚ್ಚು ಮಹತ್ವ ಪಡೆದಿದೆ ಎಂದರು.

ಜಾಗತಿಕವಾಗಿ ಸ್ಪರ್ಧೆ ಒಡ್ಡಲು, ಭವಿಷ್ಯದ ಆರ್ಥಿಕರ ವಲಯದ ಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳಲು ಇದು ಅನುಕೂಲವಾಗಲಿದೆ. ಈ ಯೋಜನೆಯು ಭಾರತೀಯ ಕಂಪೆನಿಗಳಿಗೆ ವಿಶ್ವದರ್ಜೆಯ ಉತ್ಪನ್ನಗಳ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳುತ್ತದೆ ಎಂದು ಅವರು ತಿಳಿಸಿದರು.
ಹಾಗೆಯೇ ದೇಶದಲ್ಲಿ ಸುಧಾರಿತ ಜಲಮಾರ್ಗಗಳು, ರೈಲ್ವೆ‌ಗಳ ಅನುಷ್ಠಾನ ಘೋಷಿಸಿದರು. ದೇಶದ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸಲು 75 ವಂದೇ ಭಾರತ್ ರೈಲುಗಳ ಆರಂಭ, ಉಡಾನ್ ಯೋಜನೆಯಡಿ ಸಂಪರ್ಕ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಧಾನಿ ಮೋದಿ ಅವರು ಗೌರವ ಸಲ್ಲಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು