ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

10 ವರ್ಷದ ಫೀಸ್ ಕಟ್ಟೋಕೆ ಶಾಲೆಗಳಿಂದ ಆಫರ್ – ನಯಾ ಪ್ಲ್ಯಾನ್‍ಗೆ ಪೋಷಕರು ಕಂಗಾಲು

Twitter
Facebook
LinkedIn
WhatsApp
rani abbakka 96225570 1

ಬೆಂಗಳೂರು: ಒಂದು ವರ್ಷದ ಶಾಲಾ ಶುಲ್ಕ ಕಟ್ಟುವುದರಲ್ಲೇ ಪೋಷಕರು ಹೈರಾಣಾಗುತ್ತಾರೆ.  ಅಂತಹದರಲ್ಲಿ ಖಾಸಗಿ ಶಾಲೆಗಳು ಈಗಲೇ 10 ವರ್ಷದ ಮುಂಗಡ ಶುಲ್ಕ ಕಟ್ಟಲು ಆಫರ್ ನೀಡಿದೆ. ಆದರೆ ಬೆಂಗಳೂರಿನ ನಯಾ ಟ್ರೆಂಡ್‍ಗೆ ಪೋಷಕರು ಸುಸ್ತು ಹೊಡೆದಿದ್ದಾರೆ.

ಹೌದು.. ಬೆಂಗಳೂರಿನ (Bengaluru) ಖಾಸಗಿ ಶಾಲೆಗಳಲ್ಲಿ (Private School) 10 ವರ್ಷದ ಶುಲ್ಕವನ್ನು ಮುಂಗಡವಾಗಿ ಕಟ್ಟಬಹುದು. ಇದು ಕಡ್ಡಾಯವಲ್ಲ. ಆದರೆ ಇಷ್ಟವಿದ್ದ ಪೋಷಕರು ಇದನ್ನು ಕಟ್ಟಬಹುದು. 10 ವರ್ಷಕ್ಕೆ 20 ಲಕ್ಷ ರೂ. ಕಟ್ಟಿ ಅಡ್ವಾನ್ಸ್ ಫೀಸ್ ಕಟ್ಟಬಹುದು. 1 ರಿಂದ 10ನೇ ತರಗತಿಯವರೆಗೆ ಮುಂಗಡವಾಗಿ ದಾಖಲಾತಿ ಮಾಡಿಸಬಹುದು. ಹಣ ಮುಂಗಡ ಪಾವತಿ ಮಾಡಿದ್ರೆ, ಫೀಸ್ ಹೆಚ್ಚಳದ ಬಿಸಿ ತಟ್ಟಲ್ಲ ಅಂತ ಶಾಲೆ ಸುತ್ತೋಲೆ ಹೊರಡಿಸಿದೆ.

ಉದಾಹರಣೆಗೆ ಒಂದು ಮಗುವಿಗೆ ವರ್ಷಕ್ಕೆ 2 ಲಕ್ಷ ಫೀಸ್ ಅಂದ್ರೆ, 10 ವರ್ಷಕ್ಕೆ 20 ಲಕ್ಷದಲ್ಲಿ ಮಗುವಿನ ಶಿಕ್ಷಣ ಮುಗಿದು ಹೋಗುತ್ತದೆ. ಈ ಆಫರ್ ಸ್ವೀಕಾರ ಮಾಡಿಲ್ಲ ಅಂದ್ರೆ ಒನ್ ಟು ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿ ಪೋಷಕರ ಸೆಳೆಯುವ ಯತ್ನ ಮಾಡುತ್ತಿದೆ.

ಈ ವಿಚಾರಕ್ಕೆ ಸಂಬಂಧ ಪೋಷಕರ ಧ್ವನಿಯಾಗಿ ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಶನ್ ಆಕ್ರೋಶ ವ್ಯಕ್ತಪಡಿಸಿದೆ. 10 ವರ್ಷ ಒಂದೇ ಶಾಲೆಯಲ್ಲಿ ಮಕ್ಕಳನ್ನು ಕಟ್ಟಿ ಹಾಕಿದ ಹಾಗೇ ಆಗುತ್ತದೆ. ಶಿಕ್ಷಣದಲ್ಲಿ ವ್ಯಾಪಾರೀಕರಣವಾದರೆ ಮೌಲ್ಯಾಧಾರಿತ ಶಿಕ್ಷಣ ಹೇಗೆ ಕೊಡ್ತಾರೆ ಎಂದು ಪ್ರಶ್ನಿಸಿದೆ.

ಸಂಸ್ಥೆ ಮುಂಗಡ ದುಡ್ಡು ಕಟ್ಟಿದ್ರು, ಮಗು ಶಾಲೆ ಬಿಟ್ರೆ ದುಡ್ಡು ವಾಪಸ್ ಕೊಡುವ ಭರವಸೆ ಸಂಸ್ಥೆ ಕೊಡುತ್ತಿದೆ. ಆದರೆ ಎಷ್ಟು ಹಣ ವಾಪಸ್ ಕೊಡ್ತಾರೆ ಅನ್ನೋ ಬಗ್ಗೆ ಸ್ಪಷ್ಟನೆ ಇಲ್ಲ ಅಂತ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿ ಫೀಸ್ ಕಲೆಕ್ಷನ್ ಮಾಡಬಹುದಾ ಏನು ಎನ್ನುವದರ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆಯನ್ನು ಕೂಡ ಕೊಟ್ಟಿಲ್ಲ. ಪೋಷಕರು ಮಾತ್ರ ಈ ಆಫರ್ ನೋಡಿ ಸುಸ್ತಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ