ಹೊಸ ವರ್ಷದ ಪ್ರಯುಕ್ತ EMI ನಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ
Twitter
Facebook
LinkedIn
WhatsApp
ಇಂದಿನ ದಿನಗಳಲ್ಲಿ ವಾರಕ್ಕೆ ಕಡಿಮೆ ಎಂದರು ಮೂರರಿಂದ ನಾಲ್ಕು ಸ್ಮಾರ್ಟ್ಫೋನ್ಗಳು (Smartphone) ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತವೆ. ಈಗ 2023 ಹೊಸ ವರ್ಷ ಆರಂಭವಾಗಿದ್ದರಿಂದ ಫೋನ್ಗಳು ಬಿಡುಗಡೆಗೆ ಕ್ಯೂ ನಲ್ಲಿ ನಿಂತಿದೆ. ಈ ಸಾಲಿನಲ್ಲಿ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಫೋನುಗಳು ಕೂಡ ಇದೆ. ಈಗಂತು ಮೊಬೈಲ್ಗಳು ಬಿಡುಗಡೆಗೊಂಡ ತಕ್ಷಣವೇ ಭರ್ಜರಿ ಸೇಲ್ ಕಾಣುತ್ತವೆ, ಬೇಗನೆ ಸೋಲ್ಡ್ ಆಗಿ ಬಿಡುತ್ತದೆ. ಇದಕ್ಕೆ ಕಾರಣ ಇಂದು ಒಂದು ಮೊಬೈಲ್ಗೆ (Mobile) ನಿಗದಿ ಪಡಿಸಿರುವ ಎಲ್ಲಾ ಬೆಲೆಯನ್ನು ಒಮ್ಮೆಯೆ ಕಟ್ಟಬೇಕು ಎಂಬ ನಿಯಮ ಇಲ್ಲದಿರುವುದು. ಈಗ ಏನಿದ್ದರು ಇಎಂಐ (EMI). ಅಂದರೆ ಮೊದಲು ಮೊಬೈಲ್ ಅನ್ನು ಖರೀದಿ ಮಾಡಿ ನಂತರ ಕಂತಿನ ರೂಪದಲ್ಲಿ ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಪಾವತಿ ಮಾಡುವುದು.