ಫೆ.17ರಿಂದ ಶ್ರೀರಾಮ-ಜಾನಕಿ ಯಾತ್ರೆ - ಹೊಸ ರೈಲು ಯಾನ ಆರಂಭ
Twitter
Facebook
LinkedIn
WhatsApp
ಹೊಸದಿಲ್ಲಿ: ರಾಮಾಯಣಕ್ಕೆ ಸಂಬಂಧಿಸಿದಂತೆ ಇರುವ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಲು ರೈಲ್ವೇ ಇಲಾಖೆ ಅವಕಾಶ ಮಾಡಿಕೊಡಲಿದೆ.
ಈ ಹಿನ್ನೆಲೆಯಲ್ಲಿ ಫೆ.17ರಿಂದ ಅಯೋಧ್ಯೆ ಹಾಗೂ ನೇಪಾಲದ ಜಾನಕಪುರ ಪ್ರವಾಸಕ್ಕೆ ಶ್ರೀ ರಾಮ -ಜಾನಕಿ ಯಾತ್ರಾ ಎನ್ನುವ ಹೊಸ ರೈಲು ಯಾನ ಆರಂಭಿಸಲಿದೆ.
ಪ್ರವಾಸಿ ರೈಲುಗಳಾದ ಭಾರತ್ ಗೌರವ್ ಟ್ರೈನ್‌ನ ಡಿಲಕ್ಸ್ ಎಸಿ ಪ್ರವಾಸಿ ರೈಲು, ಅಯೋಧ್ಯೆ ಹಾಗೂ ಜನಕಪುರದ ನಡುವಿನ ಸಂಚರಿಸಲಿದೆ.
ಹೊಸದಿಲ್ಲಿಯಿಂದ ಹೊರಡಲಿರುವ ರೈಲು ನಂದಿಗ್ರಾಮ, ಸೀತಾಮಢಿ, ಕಾಶಿ, ಪ್ರಯಾಗ್ ರಾಜ್ ಸಹಿತ ವಿವಿಧ ಯಾತ್ರಾಸ್ಥಳಗಳನ್ನು ಒಳಗೊಂಡಿದೆ.
ವಾರಾಣಸಿ ಹಾಗೂ ನೇಪಾಲದ ಜನಕಪುರದ ಹೊಟೇಲ್‌ಗಳಲ್ಲಿ 2 ರಾತ್ರಿಗಳು ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.